ಭಾರತದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿದ್ದು, ಆದರೆ ಶ್ರೀಮಂತ ದೇವಾಲಯ (Richest Temple) ಎಂದು ಖ್ಯಾತಿ ಗಳಿಸಿರುವ ದೇವಾಲಯವೆಂದರೆ ಅದುವೇ ತಿರುಪತಿ ತಿಮ್ಮಪ್ಪ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದ ಏಳನೇ ಬೆಟ್ಟದ ಮೇಲಿರುವ ತಿರುಪತಿ ದೇವಾಲಯ (Tirupati Temple) ಸಾಕಷ್ಟು ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನವನ್ನು ಪಡೆಯುತ್ತಾರೆ.
ಅದಲ್ಲದೇ ಈ ತಿರುಪತಿ ದೇವಾಲಯದ ಬಗ್ಗೆ ಹೇಳುವುದಾದರೆ ದೇವಾಲಯದಲ್ಲಿ ಸ್ಥಾಪಿಸಲಾದ ವೆಂಕಟೇಶ್ವರ ಸ್ವಾಮಿಯು ವಿಷ್ಣುವಿನ ಅವತಾರವೆನ್ನಲಾಗಿದೆ. ಈ ಕಾರಣದಿಂದಲೇ ತಿರುಮಲದ ಏಳು ಬೆಟ್ಟಗಳಿಗೂ ವಿಷ್ಣುವಿನ ಏಳು ತಲೆಗಳೆಂಬ ಬಿರುದು ಕೂಡ ಇದೆ. ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹ ಮತ್ತು ಸುತ್ತಲೂ ನಡೆಯುವ ಅದ್ಭುತ ಘಟನೆಗಳಿಂದಾಗಿ, ಈ ಸ್ಥಳವನ್ನು ಭೂಮಿಯ ಮೇಲಿನ ವೈಕುಂಠ ಎನ್ನಲಾಗಿದೆ.
ತಿರುಪತಿಯಯ ವರ್ಷದ ಆದಾಯ (Yearly Income) ಹಾಗೂ ಸಂಪತ್ತು ಕೇಳಿದರೆ ಒಂದು ಕ್ಷಣ ಯಾರಿಗಾದರೂ ಕೂಡ ಶಾಕ್ ಆಗುತ್ತದೆ.ಈ ಹಿಂದೆ ವಿಶ್ವದ ಶ್ರೀಮಂತ ದೇವಸ್ಥಾನ ಎನ್ನುವ ಹೆಗ್ಗಳಿಕೆಗೆ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು 2.26 ಲಕ್ಷ ಕೋಟಿ ಎಂದು ಬಹಿರಂಗವಾಗಿತ್ತು. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ಶ್ರೀಮಂತ ಮತ್ತು ಶ್ರೀಮಂತವಾಗಿ ಬೆಳೆಯುತ್ತಿದ್ದು, ಬೆಟ್ಟದ ದೇವಸ್ಥಾನದಲ್ಲಿ ಭಕ್ತರು ನೀಡುವ ನಗದು ಮತ್ತು ಚಿನ್ನದ ಕಾಣಿಕೆಗಳು ಹೆಚ್ಚುತ್ತಲೇ ಇವೆ.
ಬಡ್ಡಿದರ ಹೆಚ್ಚಳದ ದೃಷ್ಟಿಯಿಂದ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿ (Fixed Deposit) ಗಳು ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ.ಟಿಟಿಡಿ ಒಡೆತನದ ಆಸ್ತಿಗಳಲ್ಲಿ ಭೂಮಿ ಪಾರ್ಸೆಲ್‌ಗಳು, ಕಟ್ಟಡಗಳು, ಬ್ಯಾಂಕ್‌ಗಳಲ್ಲಿನ ನಗದು ಮತ್ತು ಚಿನ್ನದ ಠೇವಣಿ (Gold Deposit) ಗಳು ಸೇರಿವೆ, ಇದನ್ನು ಭಕ್ತರು ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡುತ್ತಾರೆ ಎಂದು ದೇವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ತಿರುಮಲದಲ್ಲಿ ಕಲ್ಯಾಣಕಟ್ಟೆಯಲ್ಲಿ ಗೋವಿಂದನ ಪೂಜೆ ಸಲ್ಲಿಸಿ ಭಕ್ತರು ತಲೆಗೂದಲು ಕೊಡುವುದರಿಂದ ಟಿಟಿಡಿಯ ವಾರ್ಷಿಕ ಆದಾಯ (TDD Anual Income) 120 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ಆದರೆ ವರ್ಷ ಅದಕ್ಕೂ ಮೀರಿ ಆದಾಯ ಗಳಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಕಳೆದ ಫೆಬ್ರವರಿಯಲ್ಲಿ ಮಂಡಿಸಿದ 2022-23ರ ವಾರ್ಷಿಕ 3,100 ಕೋಟಿ ರೂ.ಗಳ ವಾರ್ಷಿಕ ಬಜೆಟ್‌ನಲ್ಲಿ, ಟಿಟಿಡಿ ಬ್ಯಾಂಕ್‌ಗಳಲ್ಲಿನ ನಗದು ಠೇವಣಿಗಳಿಂದ ಬಡ್ಡಿ ರೂಪದಲ್ಲಿ 668 ಕೋಟಿ ರೂ.ಗಿಂತ ಹೆಚ್ಚಿನ ಆದಾಯವು ಬರಲಿದೆ.
ಬೆಟ್ಟದ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸುಮಾರು 2.5 ಕೋಟಿ ಭಕ್ತರಿಂದ ನಗದು ಕಾಣಿಕೆ ರೂಪದಲ್ಲಿ ಬರೋಬ್ಬರಿ 1,000 ಕೋಟಿ ಆದಾಯ ಬರಲಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ತಿರುಮಲ ತಿರುಪತಿ ದೇವಸ್ಥಾನಗಳು ದೇಶದ ಯಾವುದೇ ದೊಡ್ಡ ಕಂಪೆನಿಗಳ ಆದಾಯವನ್ನು ಮೀರಿಸುವಂತಿದೆ ಎಂದರೆ ತಪ್ಪಾಗಲಾರದು.