Tirupati Temple : ಇನ್ನು ನೀವು ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕಾದರೆ ಕೆಲವೊಂದು ಕಟ್ಟುನಿಟ್ಟಾದ ಆಜ್ಞೆಯನ್ನು ಪಾಲಿಸಬೇಕಾಗುತ್ತದೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ನೆರೆಯುವ ಭಕ್ತರಿಗಾಗಿ ತಿರುಪತಿ ತಿಮ್ಮಪ್ಪ ಕಮಿಟಿಯು ಹೊಸ ರೂಲ್ಸ್ ಅನ್ನು ಜಾರಿಗೊಳಿಸಿದೆ. ಹಾಗಾದರೆ ಇದೇನು ತಿರುಪತಿ ತಿಮ್ಮಪ್ಪನ ದೇಗುಲದ ಬಾಗಿಲು ಮುಚ್ಚಲಿದೆ? ಎಲ್ಲರಿಗೂ ಕೂಡ ಆಶ್ಚರ್ಯವಾಗುವಂತಹ ಸಂಗತಿ. ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳೋಣ ಪೂರ್ತಿಯಾಗಿ ಲೇಖನವನ್ನು ಓದಿ ತಿಳಿದುಕೊಳ್ಳಿ.
ಅಕ್ಟೋಬರ್ 29 ರಂದು ಮುಂಜಾನೆ ಚಂದ್ರಗ್ರಹಣ ಸಂಭವಿಸಲಿರುವುದರಿಂದ ಅಕ್ಟೋಬರ್ 28ರ ರಾತ್ರಿ ತಿರುಪತಿ ತಿಮ್ಮಪ್ಪ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಶನಿವಾರ ರಾತ್ರಿ ಅಂದರೆ ರವಿವಾರ ಮುಂಜಾನೆ 1:05 ರಿಂದ 2:22 ವರೆಗೆ ಚೇರುಗಲಿರುವ ಚಂದ್ರ ಗ್ರಹಣದ ಕಾರಣದಿಂದಾಗಿ ಈ ಸಮಯದಲ್ಲಿ ಭಕ್ತಾದಿಗಳಿಗೆ ತಿರುಪತಿ ತಿಮ್ಮಪ್ಪನ ದರ್ಶನ ಅವಕಾಶವಿರುವುದಿಲ್ಲ.
ಆದ್ದರಿಂದ ಅಕ್ಟೋಬರ್ 28ರ ರಾತ್ರಿ ತಿಮ್ಮಪ್ಪನ ದೇಗುಲದ ಬಾಗಿಲು ಮುಚ್ಚಲಿದೆ. ಗ್ರಹಣವೆಲ್ಲ ಮುಗಿದ ನಂತರ ತಿಮ್ಮಪ್ಪನಿಗೆ ಸುಪ್ರಭಾತ ಸೇವೆಯನ್ನ ಸಮರ್ಪಿಸಿ ದೇಗುಲದ ಬಾಗಿಲನ್ನು ತೆರೆಯಲಾಗುವುದು ಎಂದು ಟಿಟಿಡಿ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶನಿವಾರ ರಾತ್ರಿಯಂದು ವಯಸ್ಸಾದವರಿಗೆ ಮತ್ತು ವಿಕಲಚೇತನರಿಗೆ ತಿಮ್ಮಪ್ಪನ ದರ್ಶನದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ.
ಶನಿವಾರ ಸಂಜೆ ತಿರುಪತಿಯಲ್ಲಿ ಸಹಸ್ರ ದೀಪಾಲಂಕಾರ ಸೇವೆಯು ಲಭ್ಯವಿದೆ. ಭಕ್ತಾದಿಗಳು ಈ ದಿನ ತಿರುಪತಿಗೆ ತೆರಳುವ ಮುನ್ನ ಯೋಚಿಸಿ ತೀರ್ಮಾನವನ್ನು ತೆಗೆದುಕೊಳ್ಳಿ. ಏಕೆಂದರೆ ಮಧ್ಯದಲ್ಲಿ ಚಂದ್ರ ಗ್ರಹಣ ಬಂದಿರುವುದರಿಂದ ಸ್ವಲ್ಪ ಸಮಯದಲ್ಲಿ ಏರುಪೇರಾಗಲಿದೆ ಅಷ್ಟೇ. ಭಕ್ತಾದಿಗಳಿಗೆ ಸಹಾಯವಾಗುವಂತೆ ತಿರುಪತಿ ತಿಮ್ಮಪ್ಪ ಕಮಿಟಿಯು ಇದರ ಬಗ್ಗೆ ಮಾಹಿತಿಗಳನ್ನು ಒದಗಿಸಿದೆ. ತಿಮ್ಮಪ್ಪನ ದರ್ಶನವನ್ನು ಮಾಡಬೇಕು ಅಂತ ಅಂದುಕೊಂಡಿರುವವರು ಈ ಸೂಚನೆಗಳನ್ನು ಪಾಲಿಸಿ ತೆರಳುವುದು ಸೂಕ್ತ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.