ಭಾರತವು ಹಲವಾರು ಇತಿಹಾಸ ಪ್ರಸಿದ್ಧ ದೇವಾಲಯವನ್ನು ಹೊಂದಿದೆ. ಇಲ್ಲಿರುವ ಪ್ರತಿಯೊಂದು ದೇವಾಲಯವು ಪುರಾತನವಾದದ್ದು. ಅಂತಹ ದೇವಾಲಯದ ಸಾಲಿಗೆ ತಿರುಪತಿ ದೇವಾಲಯವು ಸೇರಿಕೊಳ್ಳುತ್ತದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲದ ಏಳನೇ ಬೆಟ್ಟದ ಮೇಲಿರುವ ತಿರುಪತಿ ದೇವಸ್ಥಾನವು ಪ್ರಪಂಚದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ದೇವಾಲಯವಾಗಿದೆ. ಇಲ್ಲಿನ ಗಾಳಿಯಲ್ಲಿ ವಿಭಿನ್ನ ಭಾವನೆ ಇದೆ.
ದೇವರು ನಿಮ್ಮ ಸುತ್ತಲೂ ಇದ್ದಾನೆ ಎನ್ನುವ ಭಾವನೆ ಬರುತ್ತದೆ. ದೇವಾಲಯದಲ್ಲಿ ಸ್ಥಾಪಿಸಲಾದ ವೆಂಕಟೇಶ್ವರ ಸ್ವಾಮಿಯು ವಿಷ್ಣುವಿನ ಅವತಾರವಾಗಿದೆ. ಈ ಕಾರಣದಿಂದಲೇ ತಿರುಮಲದ ಏಳು ಬೆಟ್ಟಗಳಿಗೂ ವಿಷ್ಣುವಿನ ಏಳು ತಲೆಗಳೆಂಬ ಬಿರುದು ಬಂದಿದೆ. ಇದಲ್ಲದೆ, ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹ ಮತ್ತು ಸುತ್ತಲೂ ನಡೆಯುವ ಅದ್ಭುತ ಘಟನೆಗಳಿಂದಾಗಿ, ಈ ಸ್ಥಳವನ್ನು ಭೂಮಿಯ ಮೇಲಿನ ವೈಕುಂಠ ಎಂದೂ ಕರೆಯುತ್ತಾರೆ.
ಸಮುದ್ರ ಮಟ್ಟದಿಂದ 865 ಮೀಟರ್ ಎತ್ತರದಲ್ಲಿರುವ ಈ ದೇವಾಲಯದಲ್ಲಿ ಸ್ಥಾಪಿಸಲಾದ ಶ್ರೀ ವೆಂಕಟೇಶ್ವರನ ವಿಗ್ರಹವಿದೆ. ದಂತಕಥೆಯ ಪ್ರಕಾರ ಒಬ್ಬ ರಾಜನು ತಾನು ಮಾಡಿದ ಅಪರಾಧಕ್ಕಾಗಿ 12 ಜನರನ್ನು ಕೊಂದು ಈ ದೇವಾಲಯದ ದ್ವಾರದಲ್ಲಿ ನೇಣು ಹಾಕಿದನು. ಇದರ ನಂತರ ದೇವಾಲಯವು 12 ವರ್ಷಗಳ ಕಾಲ ಮುಚ್ಚಲ್ಪಟ್ಟಿತು. ತದನಂತರ 12 ವರ್ಷಗಳ ನಂತರ ವೆಂಕಟೇಶ್ವರ ಸ್ವಾಮಿ ಸ್ವತಃ ಕಾಣಿಸಿಕೊಂಡರು.
ಈ ಕಾರಣದಿಂದಲೇ ಈ ದೇವಾಲಯವನ್ನು ವಿಷ್ಣುವಿನ 8 ಸ್ವಯಂಭೂ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವೈಕುಂಠದ ಅಧಿಪತಿ ತಿರುಪತಿ ತಿಮ್ಮಪ್ಪನಿಗೆ ಗೋವಿಂದ ಎಂದು ಹೆಸರು ಬಂದದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇರುವುದು ಸಹಜ. ಸಾಮಾನ್ಯವಾಗಿ ಈ ವೈಕುಂಠ ಎನ್ನುವುದು ಮಹಾ ವಿಷ್ಣುವಿನ ಸ್ಥಾನವಾಗಿದೆ. ಒಂದು ಬಾರಿ ವಿಷ್ಣುವು ವೈಕುಂಠದಲ್ಲಿ ಶಿವನ ಬಳಿ ಮಾತನಾಡುತ್ತಿರುವಾಗ ಎಲ್ಲರೂ ಕೈಲಾಸವನ್ನು ಹೊಗಳುತ್ತಾರೆ.
ಈ ವೇಳೆಯಲ್ಲಿ ನಾನು ಒಂದು ಬಾರಿಯೂ ಕೈಲಾಸ ನೋಡಿಲ್ಲ ಎಂದು ವಿಷ್ಣು ಹೇಳುತ್ತಾನೆ. ಈ ವೇಳೆಯಲ್ಲಿ ಶಿವನು ವಿಷ್ಣುವಿಗೆ ಕೈಲಾಸಕ್ಕೆ ಆಹ್ವಾನ ನೀಡುತ್ತಾನೆ. ಹೀಗಿರುವಾಗ ಶಿವನು ಕೈಲಾಸಕ್ಕೆ ಬಂದು ಬೃಂಗಿಯನ್ನು ಕರೆದು ನಾಳೆ ಕೈಲಾಸಕ್ಕೆ ವಿಷ್ಣುವು ಬರುತ್ತಾನೆ. ಹೀಗಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎಂದಾಗ ಬೃಂಗಿಗೆ ದಿಕ್ಕೇ ತೋಚದಂತಾಗುತ್ತದೆ. ಆ ಸಮಯದಲ್ಲಿ ಬೃಂಗಿಗೆ ನಂದಿ ಸೆಗಣಿ ಹಾಕಿರುವುದು ಕಾಣುತ್ತದೆ.
ತಕ್ಷಣವೇ ಅಲ್ಲಿರುವವರನ್ನು ಕರೆದು ಸೆಗಣಿಯಿಂದ ಕೈಲಾಸವನ್ನು ಸಾರಿಸಿ, ಹೂವುಗಳಿಂದ ಅಲಂಕಾರ ಮಾಡಲು ಹೇಳುತ್ತಾನೆ. ಮರುದಿನ ಅಲ್ಲಿಗೆ ಬಂದ ವಿಷ್ಣುವು ಸೆಗಣಿಯ ಪರಿಮಳಕ್ಕೆ ಮನಸೋಲುತ್ತಾನೆ. ಹೌದು ವಿಂದ ಎಂದರೆ ಸೆಗಣಿ ಎನ್ನುವ ಅರ್ಥವಿದೆ. ವಿಷ್ಣುವು ತನ್ನ ಎಂಟನೇ ಅವತಾರವನ್ನು ಎತ್ತಿ ಭೂಲೋಕದಲ್ಲಿ ತಿಮ್ಮಪ್ಪನ ಅವತಾರವೆತ್ತಿದಾಗ ಆತನಿಗೆ ಗೋವಿಂದ ಎನ್ನುವ ಹೆಸರು ಬರುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.