ಪ್ರಿಯಕರ ಜೊತೆಗೆ ಸಂಬಂಧ ಬೆಳೆಸಿಕೊಂಡಿದ್ದ ನರ್ಸ್, ಗಂಡನಿಗೆ ವಿಷಯ ಗೊತ್ತಾಗಿ ಈ ಮಹಿಳೆಗೆ ವಾರ್ನಿಂಗ್ ಕೊಟ್ಟಿದ್ದ, ಆದರೆ ಈ ಮಹಿಳೆ ಮಾಡಿದ ಕೆಲಸವೇನು ಗೊತ್ತಾ!!!

Tiravalllur nurse : ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳನ್ನು ನೋಡಿದಾಗ ಇದೇನಪ್ಪಾ ಮನುಷ್ಯನ ಮನಸ್ಥಿತಿಯೂ ಹೀಗಾಗಿದೆ ಎಂದು ಕೊಳ್ಳುತ್ತೇವೆ. ಇಪ್ಪತ್ತೈದು ವರ್ಷದ ನರ್ಸ್ ಓರ್ವಳು ಗೆಳೆಯನೊಂದಿಗೆ ಸೇರಿ ತನ್ನ ಗಂಡನನ್ನು ಉಸಿರುಕಟ್ಟಿಸಿ ಜೀವ ತೆಗೆದ ಘಟನೆಯು ತಮಿಳುನಾಡಿನ ತಿರುವಲ್ಲೂರ್‌ನಲ್ಲಿ ನಡೆದಿದೆ. ತಿರುವಲ್ಲೂರ್‌ ಜಿಲ್ಲೆಯ ತಿರುತ್ತನಿ ಬಳಿಯಲ್ಲಿ ( ಫೆ 20) ಈ ಸೋಮವಾರ ರಾತ್ರಿ ಘಟನೆ ನಡೆದಿದೆ.

ಪ್ರಿಯಕರ ಹಾಗೂ ಆತನ ಇಬ್ಬರೂ ಗೆಳೆಯರ ಜೊತೆಗೆ ಸೇರಿ ಈ ನರ್ಸ್ ಕೊ- ಲೆ ಮಾಡಿ ಶ-ವವನ್ನು ಸೀಲಿಂಗ್ ಫ್ಯಾನ್‌ಗೆ ನೇ-ಣು ಹಾಕಿ ಆ-ತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಮೃತ ವ್ಯಕ್ತಿಯನ್ನು 29 ವರ್ಷ ಪ್ರಾಯದ ಯುವರಾಜ್ ಎಂದು ಗುರುತಿಸಲಾಗಿದ್ದು, ಈತ ತಿರುತ್ತನಿ ಬಳಿಯ ಆರ್‌ ಕೆ ಪೇಟೆ ನಿವಾಸಿ. ಕೊ-ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಪತ್ನಿ ಗಾಯತ್ರಿ, ಪತ್ನಿಯ ಗೆಳೆಯ 30 ವರ್ಷದ ಶ್ರೀನಿವಾಸನ್ ಹಾಗೂ ಆತನ ಸ್ನೇಹಿತರಾದ ಮಣಿಕಂಡನ್, ಹೇಮನಾಥನ್ ಎಂಬುವವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೃ-ತ ಯುವರಾಜ್ ಮನ್ನೂರ್‌ಪೇಟ್‌ನಲ್ಲಿ ಕಾರಿನ ಬಿಡಿಭಾಗಗಳ ತಯಾರಿಕ ಘಟಕದಲ್ಲಿ ಕೆಲಸ ಮಾಡುತ್ತಿದ್ದನು. ಪತ್ನಿ ಗಾಯತ್ರಿ ತಿರುತ್ತನಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸದಲ್ಲಿದ್ದಳು. ಇವರಿಬ್ಬರೂ ಸಂಬಂಧಿಕರಾಗಿದ್ದು, ಐದು ವರ್ಷದ ಹಿಂದೆ ಮದುವೆಯಾಗಿದ್ದಾರೆ. ಈ ದಂಪತಿಗಳಿಗೆ ಒಂದು ಮಗುವೂ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ನಡೆಯುವ ಹಿಂದಿನ ರಾತ್ರಿ ಅಂದರೆ ಭಾನುವಾರ ರಾತ್ರಿ ಯುವರಾಜ ಬರುವ ಮೊದಲೇ ಮನೆಗೆ ಆ-ರೋಪಿಗಳಾದ ಶ್ರೀನಿವಾಸನ್, ಮಣಿಕಂಡನ್, ಹೇಮನಾಥನ್ ಈತನ ಮನೆಗೆ ಬಚ್ಚಿಕೊಂಡು ಕೂತಿದ್ದರು.

ಎಂದಿನಂತೆ ಯುವರಾಜ್ ಮನೆಗೆ ಬರುತ್ತಿದ್ದಂತೆ ಅವನ ಮೇಲೆ ದಾಳಿಗೆ ಮುಂದಾದ ಶ್ರೀನಿವಾಸನ್ ಆತನನ್ನು ಬೆಡ್ ಮೇಲೆ ತಳ್ಳಿದ್ದಾನೆ. ಈ ವೇಳೆ ಮಣಿಕಂಡನ್ ಹಾಗೂ ಹೇಮನಾಥನ್ ಯುವರಾಜ್‌ನ ಕಾಲುಗಳನ್ನು ಹಿಡಿದುಕೊಂಡಿದ್ದು, ಶ್ರೀನಿವಾಸನ್‌ ಆತನ ಮುಖಕ್ಕೆ ದಿಂಬು ಇಟ್ಟು ಉಸಿರುಕಟ್ಟಿಸಿ ಕಥೆ ಮುಗಿಸಿದ್ದಾರೆ. ಕೊನೆಗೆ ಯುವರಾಜ್ ಮೃ-ತದೇಹವನ್ನು ಆ-ತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ ಪಟ್ಟಿದ್ದಾರೆ.

ತದನಂತರದಲ್ಲಿ ಯುವರಾಜ್ ತಂದೆ ಅರ್ಮುಗಂ ಅವರಿಗೆ ಕರೆ ಮಾಡಿದ ಗಾಯತ್ರಿ ಯುವರಾಜ್ ತಾನು ನಿದ್ದೆ ಮಾಡಿದ್ದ ವೇಳೆ ಆ-ತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾಳೆ. ಈ ಘಟನೆ ನಡೆದ ಬಳಿಕ ಪೊಲೀಸರು ಆಗಮಿಸಿ ಮೃ-ತದೇಹವನ್ನು ಮ-ರಣೋತ್ತರ ಪರೀಕ್ಷೆಗೆ ಕಳುಹಿಸಿದದ್ದು, ಇತ್ತ ಅರ್ಮುಗಂ ಅವರಿಗೆ ಮಗನ ಸಾ-ವಿನ ಬಗ್ಗೆ ಸಂಶಯ ಬಂದಿದೆ. ಹೀಗಾಗಿ ಯುವರಾಜ್ ತಂದೆ ಅರ್ಮುಗಂ ಪೊಲೀಸರಿಗೆ ದೂ- ರು ನೀಡಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿಕೊಂಡ ಆರ್‌.ಕೆ ಪೇಟೆ ಪೊಲೀಸರು, ಯುವರಾಜ್ ಕಾಲಿನಲ್ಲಿ ಹಾಗೂ ಕೈಗಳಲ್ಲಿ ಗಾ-ಯದ ಗುರುತನ್ನು ಗಮನಿಸಿದ್ದಾರೆ. ಈ ಕುರಿತಂತೆ ಪತ್ನಿ ಗಾಯತ್ರಿಯನ್ನು ಪ್ರಶ್ನೆ ಮಾಡಿದ್ದಾರೆ. ಕೊನೆಗೆ ಗಾಯತ್ರಿ ನಂತರ ಕೊ-ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ಅದರ ಜೊತೆಗೆ ಆ-ರೋಪಿ ಶ್ರೀನಿವಾಸನ್ ಹಾಗೂ ಈಕೆ ಚೆನ್ನೈನ ನರ್ಸಿಂಗ್ ಕಾಲೇಜಿನಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು. ಕಳೆದ 7 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಗಾಯತ್ರಿಯ ಮದುವೆಯ ನಂತರವೂ ಇಬ್ಬರೂ ಸಂಪರ್ಕದಲ್ಲಿದ್ದರು.

ಈ ಹಿಂದೆ ಗಾಯತ್ರಿ ಕೆಲಸ ಮಾಡುವಲ್ಲಿಯೇ ಶ್ರೀನಿವಾಸನ್ ಕೆಲಸಕ್ಕೆ ಸೇರಿಕೊಂಡಿದ್ದು, ಭೇಟಿಯಾಗುತ್ತಿದ್ದರು. ಇತ್ತೀಚೆಗಷ್ಟೇ ಯುವರಾಜ್‌ ತನ್ನ ಪತ್ನಿ ಫೋನ್ ನೋಡಿದಾಗ ಶ್ರೀನಿವಾಸನ್ ಜೊತೆ ಆಕೆಗೆ ಸಂಬಂಧವಿರುವುದು ಪತಿಗೆ ಗೊತ್ತಾಗಿದೆ. ಈ ವಿಚಾರವಾಗಿ ಪತ್ನಿಗೆ ಯುವರಾಜ್ ಬುದ್ದಿ ಕೂಡ ಹೇಳಿದ್ದನು. ಯುವರಾಜ್ ಪತ್ನಿ ಗಾಯತ್ರಿಯೂ ತನ್ನ ಪತಿಯಾ ಕಥೆಯನ್ನೇ ಮುಗಿಸಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *