ಬೃಂದಾವನ ಧಾರವಾಹಿಯಲ್ಲಿ ಹೀರೋ ಚೇಂಜ್ !! ಟಿಕ್ ಟಾಕ್ ಸ್ಟಾರ್ ನನ್ನು ಹೀರೋನನ್ನಾಗಿ ಮಾಡಿದ ವಾಹಿನಿ. ಕರ್ನಾಟಕ ಜನರಿಂದ ತೀವ್ರ ಆಕ್ರೋಶ!!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಎಂಬ ಧಾರವಾಹಿಯಲ್ಲಿ ದೊಡ್ಡಮಟ್ಟದ ಬದಲಾವಣೆ ಕಂಡು ಬಂದಿದೆ. ಕೇವಲ 25 ಎಪಿಸೋಡ್ ಗಳು ಮುಗಿದಿರುವಾಗ ಹೀರೋನನ್ನು ಚೇಂಜ್ ಮಾಡಲಾಗಿದೆ. ಇದೇ ವರ್ಷದ ಅಕ್ಟೋಬರ್ 23 ರಂದು ಪ್ರಾರಂಭವಾದ ಬೃಂದಾವನ ಧಾರವಾಹಿ ನವೆಂಬರ್ ಮುಗಿಯುವುದರ ಒಳಗಡೆ ಇರೋ ನನ್ನ ಬದಲಾವಣೆ ಮಾಡಿದೆ.

ಸಡನ್ನಾಗಿ ಇದ್ದಕ್ಕಿದ್ದಂತೆ ಹೀರೋನನ್ನ ಬದಲಾವಣೆ ಮಾಡಿರುವುದು ಜನರಿಗೆ ಬೇಸರ ತಂದಿಲ್ಲ. ಬಿಗ್ ಬಾಸ್ ಖ್ಯಾತಿಯ ಗಾಯಕ ನಾಗಿದ್ದ ವಿಶ್ವನಾಥ್ ಅವರ ಬದಲಾಗಿ ಟಿಕ್ ಟಾಕ್ ಸ್ಟಾರ್ ನನ್ನು ವಾಹಿನಿ ಹೀರೋನನ್ನಾಗಿ ಮಾಡಿದೆ. ಯಶಸ್ವಿಯಾಗಿ ಹೋಗುತ್ತಿರುವ ಧಾರವಾಹಿಯಲ್ಲಿ ವಿಶ್ವನಾಥ ನನ್ನು ಬದಲಾಯಿಸುವ ಅಗತ್ಯ ಏನಿತ್ತು ಎಂಬುದು ಜನರ ಪ್ರಶ್ನೆಯಾಗಿದೆ ..

ಸಡನ್ ಆಗಿ ಹೀರೋ ನನ್ನ ಬದಲಾವಣೆ ಮಾಡಲು ಮುಖ್ಯ ಕಾರಣ ಏನು ಎಂದರೆ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಅಂದರೆ ಹೀರೋ ಪಾತ್ರಕ್ಕೆ ಮದುವೆ ನಡೆಯಲಿದೆ. ಮದುವೆಯಲ್ಲಿ ವಿಶ್ವನಾಥ್ ಕಾಣಿಸಿಕೊಂಡರೆ ಚಿಕ್ಕ ಹುಡುಗನಂತೆ ಕಾಣುತ್ತಾನೆ ಗಡ್ಡ ಮೀಸೆ ಇನ್ನು ಬಂದಿಲ್ಲ ಎಂದು ಜನರು ಹೇಳುತ್ತಾರೆ ಎಂಬ ಕಾರಣದಿಂದ ವಾಹಿನಿ ಹೀರೋ ಪತ್ರವನ್ನು ಬದಲಾಯಿಸಿದೆ..

ಆದರೆ ಈಗ ಟಿಕ್ ಟಾಕ್ ಸ್ಟಾರ್ ಎನಿಸಿಕೊಂಡಿರುವ ವರು ನಾರಾಜ ಅವರನ್ನು ವಿಶ್ವನಾಥ್ ಅವರ ಬದಲಾಗಿ ಆಯ್ಕೆ ಮಾಡಿದೆ. ಇತ್ತೀಚಿಗೆ ವರುಣ್ ಆರಾಧ್ಯ Break up ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು ಟಿಕ್ ಟಾಕ್ ರಿಲ್ಸ್ (Tik Tok Reels) ನಿಂದಲೇ ಈತ ಕರ್ನಾಟಕದ ಅತ್ಯಂತ ಜನಪ್ರಿಯತೆ ಗಳಿಸಿ ಜನರಿಗೆ ಚಿರಪರಿಚಿತನಾಗಿದ್ದಾನೆ. ಇದೀಗ Varun Aradhya ನನ್ನ ಬೃಂದಾವನ ಸೀರಿಯಲ್ ನಲ್ಲಿ ಹೀರೋ ನನ್ನಾಗಿ ಮಾಡಿರುವುದು ಪಬ್ಲಿಕ್ ನಿಂದ ಮಿಶ್ರ ಪ್ರತಿಕ್ರಿಯೆ ದೊರಕಿದೆ.

ಟಿಕ್ ಟಾಕ್ ಸ್ಟಾರ್ ಆಗಿರುವ ವರುಣ್ ಆರಾಧ್ಯ ಅವರಿಗೆ ನಟನೆ ಬರುವುದಿಲ್ಲ.. ಇವರ ಡಬ್ಬಿಂಗ್ ಕೂಡ ಚೆನ್ನಾಗಿಲ್ಲ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇಂತಹ ಯುವ ಪ್ರತಿಭೆ ಮುಂದೆ ಬಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಕೆಲವರು ಬೆನ್ನು ತಟ್ಟುತ್ತಿದ್ದಾರೆ. ಒಟ್ಟಿನಲ್ಲಿ ಇದೀಗ ಬೃಂದಾವನ ಧಾರವಾಹಿಯಲ್ಲಿ ಆದ ಬದಲಾವಣೆಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ತಿಳಿಸಿ..

Leave a Reply

Your email address will not be published. Required fields are marked *