ಗಾರೆ ಕೆಲಸದ ಹುಡುಗಿಯನ್ನು ದತ್ತು ತೆಗೆದುಕೊಂಡು ಟಿಕ್ ಟಾಕ್ ಸ್ಟಾರ್ ಸೋನು ಗೌಡ ಮಾಡಿದ್ದೇನು ಗೊತ್ತಾ?.. ನಿಜಕ್ಕೂ ಗ್ರೇಟ್ ಸೋನು..

ಟಿಕ್ ಟಾಕ್ ಬೆಡಗಿ ಸೋನು ಶ್ರೀನಿವಾಸ ಗೌಡ (Sonu Srinivas Gowda) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತನ್ನ ಖಾಸಗಿ ವಿಡಿಯೋಗಳಿಂದ ಟ್ರೋಲ್ ಆದ ಬಳಿಕವಂತೂ ಸೋನು ಗೌಡರವರು ಸದಾ ಸುದ್ದಿಯಲ್ಲಿರುತ್ತಾರೆ. ಬಿಗ್ ಬಾಸ್ ಒಟಿಟಿ (Bigg Boss OTT) ಯಲ್ಲಿ ಭಾಗವಹಿಸಿದ ಬಂದ ಬಳಿಕ ಸೋನು ಗೌಡರವರ ಫಾನ್ಸ್ ಫಾಲ್ಲೋರ್ಸ್ ಸಂಖ್ಯೆಯೂ ಅಧಿಕವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ಸೋನು ಗೌಡರವರು, ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದುವುದು ಮಾಮೂಲಿ. ಇದೀಗ ಜೀವನದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಅಂದಹಾಗೆ, ಟಿಕ್ ಟಾಕ್ ಬೆಡಗಿ ಸೋನು ಗೌಡ ಮನೆ ಬಳಿ ಅಪರಿಚಿತರು ಮನೆ ಕಟ್ಟುತ್ತಿದ್ದಾರೆ. ಆ ಕಟ್ಟಡದಲ್ಲಿ ರಾಯಚೂರಿನ ಕುಟುಂಬ (Rayachuru Family) ಒಂದು ವಾಸಿಸುತ್ತಿದ್ದು, ಈ ಕುಟುಂಬವು ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದೆ. ಈ ಕುಟುಂಬದಲ್ಲಿ ನಾಲ್ಕು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಈ ಸೋನು ಗೌಡ ಆ ಮಕ್ಕಳ ಜೊತೆ ಆಟವಾಡುತ್ತಾ ಸಮಯ ಕಳೆಯುವುದಿದೆ.

ಆದರೆ ಇದೀಗ ಸೇವಂತಿಗಾಗಿ ಒಂದಷ್ಟು ಶಾಪಿಂಗ್ ಮಾಡಿದ್ದು ಬಟ್ಟೆ, ಚಪ್ಪಲಿ, ಲಿಪ್‌ಸ್ಟಿಕ್ ಮತ್ತು ತಿಂಡಿಗಳನ್ನು ಸೋನು ಗೌಡ ಕೊಡಿಸಿದ್ದರುರು. ಈ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದ ಸೋನು ಗೌಡ ಆ ಹುಡುಗಿಯನ್ನು ನಿಮಗೂ ಪರಿಚಯ ಮಾಡಿಸುತ್ತೇನೆ ಎಂದಿದ್ದರು. ಆದರಂತೆ ಸೇವಂತಿಯನ್ನು ಸೋನು ಗೌಡ ಕ್ಯಾಮೆರಾದ ಮುಂದೆ ಕರೆ ತಂದಿದ್ದಾರೆ.

ಸೋನು ಆಕೆಯ ಕೊಡಿಸಿರುವ ಬಟ್ಟೆ ಮೇಕಪ್‌ಗಳನ್ನು ಧರಿಸಿದ್ದು ಈ ವಿಡಿಯೋದಲ್ಲಿ ಒಂದೆರಡು ತಿಂಗಳಿನಲ್ಲಿ ಆ ಕುಟುಂಬ ಮತ್ತೆ ರಾಯಚೂರಿನ ಕಡೆ ಹೋಗುತ್ತಿರುವ ಕಾರಣ ಸೋನು ಮಿಸ್ ಮಾಡಿಕೊಳ್ಳುತ್ತೇನೆ. ನಾಲ್ಕು ಹೆಣ್ಣು ಮಕ್ಕಳನ್ನು ಸಾಕುವುದು ಕಷ್ಟ ಆಗಬಹುದು ಅಲ್ಲದೆ ಸೇವಂತಿಗೆ ಓದಲು ತುಂಬಾನೇ ಇಷ್ಟ ಅವರ ಅಪ್ಪ ಅಮ್ಮನನ್ನು ಕೇಳಿ ದತ್ತು ತೆಗೆದುಕೊಳ್ಳುತ್ತೇನೆ.

ಆಕೆಯನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಓದಿಸಬೇಕು ಆಕೆಗೆ ಇರುವ ಕನಸುಗಳನ್ನು ಈಡೇರಿಸಬೇಕು ಎಂದಿದ್ದಾರೆ. ಈ ವಿಡಿಯೋದ ನೋಡಿದ ನೆಟ್ಟಿಗರು ಸೋನು ಗೌಡ ಹೀಗೆನ್ನುತ್ತಿದ್ದಂತೆ ಮಕ್ಕಳನ್ನು ಸಾಕೋದು ಅಂದ್ರೆ ಬಟ್ಟೆ ಬಿಟ್ಕೊಂಡು ವಿಡಿಯೋ ಮಾಡೋದು ಅಂತ ಅನ್ಕೊಂಡಿಯಾ?, ಬೇಡ ಇನ್ನೊಂದು ಹುಡುಗಿ ಜೀವನ ಹಾಳು ಮಾಡಬೇಡಿ. ನೀವಂತೂ ಕೆಟ್ಟ ಕೆರ ಹಿಡಿದು ಹೋಗಿದ್ದೀರಿ ಇಂತಾ ಮನೆ ಹಾಳು ಕೆಲಸ ಮಾಡಬೇಡಿ ಎಂದು ಹೀಗೆ ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೋನು ಗೌಡರವರ ಈ ನಿರ್ಧಾರಕ್ಕೂ ನೆಟ್ಟಿಗರಿಂದ ನೆಗೆಟಿವ್ ಕಾಮೆಂಟ್ ಗಳು ಬಂದಿದೆ.

Leave a Reply

Your email address will not be published. Required fields are marked *