ಮೇಕಪ್ ವಿಚಾರವಾಗಿ ಮತ್ತೆ ಸುದ್ದಿಯಾದ ಟಿಕ್ ಟಾಕ್ ಸ್ಟಾರ್ ಧನುಶ್ರೀ, ವೈರಲ್ ಆಯ್ತು ಫೋಟೋ

ಟಿಕ್ ಟಾಕ್ ಸ್ಟಾರ್ ಧನುಶ್ರೀ (Tik Tok Star Dhanushree) ಎಲ್ಲರಿಗೂ ಕೂಡ ಚಿರಪರಿಚಿತ. ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಧನುಶ್ರೀ ಯವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಇಂಗ್ಲಿಷ್​ ಹಾಡುಗಳಿಗೆ ಕ್ಯೂಟ್​ ಎಕ್ಸ್​ಪ್ರೆಷನ್​ಗಳನ್ನು ಕೊಡುತ್ತಾ ನೆಟ್ಟಿಗರ ಮನಸ್ಸನ್ನು ಗೆದ್ದುಕೊಂಡಿದ್ದಾರೆ.

ಟಿಕ್ ಟಾಕ್ ಸ್ಟಾರ್ ಧನುಶ್ರೀಯವರನ್ನು ಜ್ಯೂನಿಯರ್ ನಿತ್ಯಾ ಮೆನನ್ (Junior Nitya Menan) ಎಂದು ಕೂಡ ಕರೆಯಲಾಗುತ್ತದೆ. ಈಗಾಗಲೇ ಸಾಕಷ್ಟು ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಆದರೆ ಇದೀಗ ಟಿಕ್ ಟಾಕ್ ಧನುಶ್ರೀಯವರು ಮತ್ತೆ ಸುದ್ದಿಯಾಗಿದ್ದಾರೆ.

ಟಿಕ್ ಟಾಕ್ ಬೆಡಗಿ ಧನುಶ್ರೀ (Dhanushree) ಫ್ಯಾಮಿಲಿಗೆ ಜೊತೆಗೆ ಕೇರಳಕ್ಕೆ ಹೋಗಿದ್ದಾರೆ. ಅಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳ ಮೂಲಕ ಸುದ್ದಿಯಾಗಿದ್ದಾರೆ. ನಟಿಯನ್ನು ಮೇಕಪ್ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿದ್ದಾಗ ಸುದ್ದಿಯಾಗಿದ್ದರು. ರಾತ್ರಿ ಮಲಗುವಾಗ್ಲೂ ಮೇಕಪ್ ಹಾಕ್ತಾರೆ ಅಂತಾ ನಟಿ ಟ್ರೋಲ್ ಆಗಿದ್ದರು.

ಆದರಂತೆ ಕೇರಳದ ಪ್ರವಾಸ (Kerala Trip) ವೇಳೆ ಹಂಚಿಕೊಂಡಿರುವ ಫೋಟೋ ನೋಡಿ ಇದೇ ರೀತಿಯ ಪ್ರಶ್ನೆಯನ್ನು ಕೇಳಿದ್ದಾರೆ. ಕೇರಳದ ಪ್ರವಾಸದ ವೇಳೆಯಲ್ಲಿ ಬಾತ್ ಟಬ್‌ನಲ್ಲಿ ಕುಳಿತಿರುವ ಹಾಟ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು, “ಈಗಲ್ಲೂ ಮೇಕಪ್ ಹಾಕಿದ್ದೀರಾ.? ಸ್ನಾನ ಮಾಡೋವಾಗ್ಲೂ ಮೇಕಪ್ ಬೇಕಾ.? ಎಂದು ಕಾಮೆಂಟ್ ಮಾಡಿದ್ದಾರೆ.

ಹುಟ್ಟಿ ಬೆಳೆದದ್ದು ಹಾಸನ (Hasana) ದಲ್ಲಿಯಾದರೂ ಈ ಹುಡುಗಿ ಸದ್ಯಕ್ಕೆ ಬೆಂಗಳೂರಿ (Banglore) ನಲ್ಲಿಯೇ ವಾಸಿಸುತ್ತಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ವಿಧವಾದ ಫೋಟೋಶೂಟ್ ಕೂಡ ಮಾಡಿಸುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ಅದರ ಜೊತೆಗೆ ಬ್ಯೂಟಿ ಟಿಪ್ಸ್ (Beauty Tips) ನೀಡುವುದರ ಜೊತೆಗೆ ಫಿಟ್‌ನೆಸ್ (Fitness) ಕಡೆಗೆ ಧನುಶ್ರೀ (Dhanushree) ಹೆಚ್ಚು ಗಮನ ನೀಡುತ್ತಾರೆ. ಈ ಹಿಂದೆ, ಬಿಗ್ ಬಾಸ್ ಸೀಸನ್ 8 (Big Boss Sisan 8) ಕ್ಕೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದಾದ ಎರಡೇ ವಾರಕ್ಕೆ ಬಿಗ್ ಬಾಸ್ ನಿಂದ ಔಟ್ ಆಗಿದ್ದರು.

ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಬೆಳ್ಳಿತೆರೆಯಲ್ಲಿ ಅವಕಾಶವು ಸಿಕ್ಕಿತು. ‘ಒಂದೊಳ್ಳೆ ಲವ್ ಸ್ಟೋರಿ’ (Ondolle Love Story) ಚಿತ್ರಕ್ಕೆ ಧನುಶ್ರೀ ನಟಿಸಿದ್ದರು. ಈ ಸಿನಿಮಾದ ಬಗ್ಗೆ ಮಾತನಾಡಿದ್ದ ಧನುಶ್ರೀಯವರು, “ಜೀವನದ ಬಗ್ಗೆ ನಂಬಿಕೆ ಕಳೆದುಕೊಂಡ ಹುಡುಗಿ ಮತ್ತು ಪ್ರೀತಿಯ ಬಗ್ಗೆ ನಂಬಿಕೆ ಕಳೆದುಕೊಂಡ ಹುಡುಗ ಇವರಿಬ್ಬ ಭೇಟಿಯೇ ಈ ಸಿನಿಮಾದ ಕಥೆ” ಎಂದಿದ್ದರು. ಟಿಕ್ ಟಾಕ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಇವರಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *