ನಟ ಯಶ್ ಬರ್ತಡೇ ಕಟೌಟ್ ಕಟ್ಟುವಾಗ ಮೃ-ತ ಪಟ್ಟ ನಟನ ಮೂವರು ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು ಗೊತ್ತಾ? ಇದನ್ನು ಒಮ್ಮೆ ಓದಿ!!

ಸ್ಟಾರ್ ನಟರ ಬರ್ತ್ಡೇ ಸೆಲೆಬ್ರೇಶನ್ ಎಂದರೆ ಅಭಿಮಾನಿಗಳು ತಮ್ಮ ಹುಟ್ಟುಹಬ್ಬದಂತೆ ಸೆಲೆಬ್ರೇಟ್ ಮಾಡುತ್ತಾರೆ. ತಮ್ಮ ನೆಚ್ಚಿನ ನಾಯಕ ನಟನ ಹುಟ್ಟುಹಬ್ಬಕ್ಕೆ ಅಲ್ಲಲ್ಲಿ ಕಟ್ ಔಟ್ ಗಳು ರಾರಾಜಿಸುತ್ತವೆ. ಅದಲ್ಲದೇ ಸ್ಟಾರ್ ನಟ ಅಥವಾ ನಟಿ (Star actors) ಯ ಮನೆಯ ಮುಂದೆ ಅಭಿಮಾನಿಗಳು ಜಮಾಯಿಸಿ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಸೆಲೆಬ್ರೇಶನ್ ಮಾಡುತ್ತಾರೆ.

ಹೌದು, ಇಂದು ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಚಂದನವನದ ರಾಕಿ ಬಾಯ್ ಗೆ ಇಂದು 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ತಮ್ಮ ನೆಚ್ಚಿನ ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ನಟನ ಹುಟ್ಟುಹಬ್ಬಕ್ಕೆ ಬ್ಯಾನರ್ (Banner) ಕಟ್ಟಲು ಹೋಗಿ ಅ-ನಾಹುತವೊಂದು ಸಂಭವಿಸಿದೆ.

ನಟ ಯಶ್​ ಹುಟ್ಟುಹಬ್ಬಕ್ಕೆ ಬ್ಯಾನರ್ ಕಟ್ಟುತ್ತಿದ್ದ ವೇಳೆಯಲ್ಲಿ ಅನಾಹುತವೊಂದು ಸಂಭವಿಸಿದ್ದು, ಮೂವರು ಯುವಕರಿಗೆ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಈ ಘಟನೆಯು ಗದಗ Gadag) ದ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ (Surangi village of Lakshmeshwar taluk) ದಲ್ಲಿ ನಡೆದಿದ್ದು, ಗ್ರಾಮದಲ್ಲಿ ನೀರವ ಮೌನವೂ ಆವರಿಸಿದೆ.

ಬ್ಯಾನರ್ ಕಟ್ಟಲು ಹೋಗಿ ಮೃ-ತ ಪಟ್ಟ ಯುವಕರನ್ನು 21 ವರ್ಷದ ಹನುಮಂತ ಹರಿಜನ (Hanumanth Harijana), 20 ವರ್ಷದ ಮುರಳಿ ನಡವಿನಮನಿ (Murali Nadavinamani), 19 ವರ್ಷದ ನವೀನ್ ಗಾಜಿ (Naveen Gaji) ಎಂದು ಗುರುತಿಸಲಾಗಿದೆ. ಯಶ್ ಅವರ ಅಪ್ಪಟ ಅಭಿಮಾನಿಗಳು ಗ್ರಾಮದಲ್ಲಿ ಕಟ್ ಔಟ್ ಕಟ್ಟಲು ಮುಂದಾಗಿದ್ದು, ಬ್ಯಾನರ್ ಮೇಲೆ ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಯು ಯುವಕರಿಗೆ ತಾಗಿದ್ದು, ಶಾ-ಕ್ ಆಗಿದೆ.

ಈ ವೇಳೆಯಲ್ಲಿ ಅಲ್ಲೇ ಇದ್ದ ಮಂಜುನಾಥ್ ಹರಿಜನ (Manjunath Harijana), ದೀಪಕ ಹರಿಜನ (Deepak Harijana), ಪ್ರಕಾಶ ಮ್ಯಾಗೇರಿ (Prakash Myageri) ಎಂಬುವವರಿಗೆ ಗಂ-ಭೀರ ಗಾ-ಯಗಳಾಗಿದ್ದು, ಗಾ-ಯಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *