ಈ ಮೂವರು ಸೆಲೆಬ್ರಿಟಿಗಳ ಮನೆಯಲ್ಲಿ ಸೆಲೆಬ್ರಿಟಿ ದಾದಿಗೆ ಬಾರಿ ಬೇಡಿಕೆ, ಈಕೆಯ ಸಂಬಳ ಕೇಳಿದ್ರೆ ಶಾಕ್ ಆಗೋದು ಪಕ್ಕಾ!

ಇತ್ತೀಚಿನ ದಿನದಲ್ಲಿ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗಿ ಕೊಂಡು ಮಕ್ಕಳನ್ನು ನೋಡಿಕೊಳ್ಳುವವರೇ ಇಲ್ಲ ಎನ್ನಬಹುದು. ಹಾಗಾಗಿ ಬೇಬಿ ಸಿಟ್ಟಿಂಗ್ ಎಂಬಂಥಹ ಅನೇಕ ಆಯ್ಕೆ ನಗರವಾಸಿಗಳಿಗಾಗಿಯೇ ಬಂದಿದೆ. ಅದೇ ರೀತಿ ಬಹುತೇಕ ಸೆಲೆಬ್ರಿಟಿಗಳು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಪ್ರತ್ಯೇಕ ಆಯಾ ಗಳನ್ನೇ ನೇಮಕ ಮಾಡುತ್ತಿದ್ದು ಸೆಲೆಬ್ರಿಟಿಗಳಂತೆ ಆಯಾಗಳು ಕೂಡ ಈಗ ಸ್ಟಾರ್ ಆಗುತ್ತಿದ್ದಾರೆ.

ಅದರಲ್ಲೂ ಸಿನಿಮಾ ತಾರೆಯರು ಸಿನಿಮಾ ಶೂಟಿಂಗ್ ಪ್ರಮೋಷನ್, ರಿಲೀಸ್ ಎಂದು ಬ್ಯುಸಿ ಇರುವಾಗ ಮಕ್ಕಳ ಲಾಲನೆಗೆ ಆಯಾ ಅವರ ಆಯ್ಕೆ ಬಹಳ ಮುಖ್ಯ ಪಾತ್ರ ವಹಿಸಲಿದೆ. ನಾವು ಹಾಕಿಕೊಳ್ಳುವ ಮೇಕಪ್ ನಲ್ಲೇ ಇಂತಹದ್ದೇ ಆಯ್ಕೆ ಮಾಡಿ ಇದೇ ಬೇಕು ಎನ್ನುವ ಹಾಗೇ ಇಲ್ಲೊಬ್ಬರು ದಾದಿ ಸಲೆಬ್ರಿಟಿಗಳ ನೆಚ್ಚಿನವರಾಗಿದ್ದರೆ.

ಮಕ್ಕಳ ಲಾಲನೆ ಪಾಲನೆ ಮಾಡುವ ದಾದಿಗೂ ಈ ಪಾಟಿ ಬೇಡಿಕೆ ಬಂದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಸುದ್ದಿ ದೊಡ್ಡ ಮಟ್ಟಿಗೆ ವೈರಲ್ ಆಗುತ್ತಿದೆ. ಶಾಹಿದ್ ಕಪೂರ್ (Shahidh kapoor) ಮತ್ತು ಮೀರಾ (Meera) ದಂಪತಿಯ ಮಗುವನ್ನು ಆರೈಕೆ ಮಾಡುತ್ತಿದ್ದ ಸಾವಿತ್ರಿ ಈಗ ಸೆಲೆಬ್ರಿಟಿ ದಾದಿ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಹಲವು ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಹೌದು ನಟಿ ಕರಿನಾ ಕಪೂರ್ (Karina Kapur) ಮಗುವಿನ ಆರೈಕೆಗೆ ಸಾವಿತ್ರಿ ದಾದಿಯನ್ನೇ ಆಯ್ಕೆ ಮಾಡಿದ್ದಾರೆ.ಈ ಮೂಲಕ ಶಾಹಿದ್ ಕಪೂರ್ ಮನೆಯ ಮಗುವಿನ ಆರೈಕೆ ಬಳಿಕ ಸಾವಿತ್ರಿ (Savitri) ಅವರು ಕರಿನಾ ಕಪೂರ್ ಅವರ ಮಗುವಿನ ಆರೈಕೆ ಮಾಡಿದ್ದಾರೆ. ಈ ಮೂಲಕ ಅನೇಕ ಕರಿನಾ ಕಪೂರ್ ಅವರ ಇವೆಂಟಿಂಗ್ ಫೋಟೋ ನಲ್ಲಿ ಸಾವಿತ್ರಿ ಇರುವುದನ್ನು ನಾವು ಕಾಣಬಹುದು.

ಹಾಗಾಗಿ ಸಾವಿತ್ರಿ ಸೆಲೆಬ್ರಿಟಿ ದಾದಿ ಪಟ್ಟ ಸೇರಿಕೊಂಡಿದ್ದಾರೆ. ನಟ ರಾಮ್ ಚರಣ್ (Ramacharan) ಹಾಗೂ ಉಪಾಸನಾ (Upasanaa) ದಂಪತಿಯ ಮುದ್ದಾದ ಮಗು ಕ್ಲಿನ್ ಕ್ಲಾರಾ ಮಗುವಿನ ಆರೈಕೆ ಜವಾಬ್ದಾರಿಯನ್ನು ಸಾವಿತ್ರಿಗೆ ನೀಡಿದ್ದ ಸುದ್ದಿ ಸದ್ಯ ವೈರಲ್ ಆಗ್ತಾ ಇದೆ. ಇತ್ತೀಚಿನ ಒಂದು ಫೋಟೋ ಶೂಟ್ ನಲ್ಲಿ ನಟ ರಾಮ್ ಚರಣ್ ದಂಪತಿಯ ಜೊತೆಗೆ ಸಾವಿತ್ರಿ ಕೂಡ ಕಾಣ ಸಿಕ್ಕಿದ್ದು ಕರೀನಾ ಮಗುವನ್ನು ನೋಡಿಕೊಳ್ಳುತ್ತಿದ್ದ ಸಾವಿತ್ರಿಗೆ ರಾಮ್ ಚರಣ್ ಮನೆ ಮಗುವಿಗೂ ನೋಡಿಕೊಳ್ಳಲು ಆಹ್ವಾನ ಸಿಕ್ಕಿದ್ದು ಇದೀಗ ತಿಳಿದುಬಂದಿದೆ.

ಇಷ್ಟೆಲ್ಲ ಸ್ಟಾರ್ ನಟ ನಟಿಯರ ಮನೆಯಲ್ಲಿ ಮಕ್ಕಳ ಆರೈಕೆ ಮಾಡುತ್ತಿದ್ದ ದಾದಿ ಪಡೆಯುವ ಸಂಬಳ ಕೇಳಿದ್ರೆ ನಿಜಕ್ಕೂ ಶಾಖ್ ಆಗ್ತೀರಿ. ಕರಿನಾ ಈ ದಾದಿಗೆ ಪ್ರತೀ ತಿಂಗಳು 1.5 ಲಕ್ಷ ರೂಪಾಯಿ ಸಂಬಳ ನೀಡ್ತಾ ಇದ್ದರು. ಅದೆ ರೀತಿ ಆಕೆ ಅನೇಕ ಬಾರಿ ಓವರ್ ಟೈಂ ಡ್ಯೂಟಿ ಮಾಡಿದರೆ ಅದಕ್ಕೆ ಕೂಡ ಅಧಿಕ ಸಂಬಳವನ್ನೇ ನೀಡುತ್ತಿದ್ದಾರೆ. ಹಾಗಾಗಿ ಈಗ ರಾಮ್ ಚರಣ್ ಮನೆಗೂ ಕೂಡ ಈಕೆಗೆ ಅಧಿಕ ಸಂಬಳ ನೀಡಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಸದ್ಯಕ್ಕೆ ಸೆಲೆಬ್ರಿಟಿ ದಾದಿ ಸಾಲಿಗೆ ಸಾವಿತ್ರಿ ಸೇರಿದ್ದಾರೆ. ‌

Leave a Reply

Your email address will not be published. Required fields are marked *