ತಂದೆತಾಯಿಗಿಂತ ಮಿಗಿಲಾದ ದೇವರಿಲ್ಲ ಎಂದು ನಂಬುವ ನಾವು ಇಂದು ಸಂಬಂಧ (Relationship) ಗಳ ಮೌಲ್ಯವನ್ನು ಅರಿಯುವಲ್ಲಿ ಸೋತಿದ್ದೇವೆ. ಹೌದು, ಭಾರತೀಯರು ಪ್ರತಿಯೊಂದು ಸಂಬಂಧಗಳಿಗೂ ಮಹತ್ವ ನೀಡುತ್ತಾರೆ. ತಮ್ಮ ಗುರು ಹಿರಿಯರು ಗೌರವದಿಂದ ಕಾಣುತ್ತ ಹುಟ್ಟಿನಿಂದ ಸಾಯುವರೆಗೂ ಜೊತೆಯಾಗುವ ಸಂಬಂಧಗಳನ್ನು ಜೋಪಾನವಾಗಿ ಕಾಪಾಡುವ ಮನಸ್ಥಿತಿಯು ನಮ್ಮದು.
ಅದಲ್ಲದೇ ಇಬ್ಬರೂ ವ್ಯಕ್ತಿಗಳ ನಡುವೆ ವಾದಗಳೂ ನಡೆದರೂ ಮಾತಿಗಿಂತ ಸಂಬಂಧ ಮುಖ್ಯ ಎನ್ನುವುದು ಪಾಲಿಸಿ ಎಲ್ಲವನ್ನು ಮರೆತು ಬಿಡುತ್ತೇವೆ. ಮನುಷ್ಯನ ಜೀವನದಲ್ಲಿ ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವು ಬಹಳ ಮುಖ್ಯವೇ ಆಗಿರುತ್ತದೆ. ಆದರೆ ಇತ್ತೀಚೆಗಿನ ದಿನಗಳ ಕೆಲವರು ಸಂಬಂಧಗಳಿಗೆ ಮಹತ್ವ ನೀಡುತ್ತಿಲ್ಲ. ಹೀಗಾಗಿ ಸಮಾಜದಲ್ಲಿ ವ್ಯತಿರಿಕ್ತವಾದ ಘಟನೆಗಳು ನಡೆಯುತ್ತಿದೆ.
ಆದರೆ ಇದೀಗ ಬಂಡಾಪುರ ಗ್ರಾಮ (Bandapura Grama) ದಲ್ಲಿ ತಂದೆಯ ಆಸ್ತಿಯನ್ನು ಮಗಳು ಹಾಗೂ ಅಳಿಯ ನಿಧಿಯ ನಾಟಕ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ತಿಮ್ಮರಾಯಪ್ಪ (Timmarayapp) ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ (Pradeep Kumar) ಎಂಬುವವರಿಗೆ ನಿಧಿಯ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ.
ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ ಮೋ-ಸ ಹೋಗಿರುವುದು ಮಗಳು ಹಾಗೂ ಅಳಿಯನಿಂದ ಎನ್ನುವುದು ಅಚ್ಚರಿಕಾರಿ ವಿಚಾರವಾಗಿದೆ. ಪುತ್ರಿ ಮಂಜುಳ ಹಾಗೂ ಅಳಿಯ ಮಂಜುನಾಥ್, ತಮಿಳುನಾಡು ಮೂಲದ ಕಳ್ಳ ಜ್ಯೋತಿಷಿ ನವೀನ್ (Naveen) ಎಂಬ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದು, ತಿಮ್ಮರಾಯಪ್ಪ ದಂಪತಿ ಹಾಗೂ ಪುತ್ರ ಪ್ರದೀಪ್ ಕುಮಾರ್ ಅವರನ್ನು ಮರುಳು ಮಾಡಿದ್ದಾರೆ.
ಹೌದು, ಆಗ ಪೂಜೆ ಮಾಡಿದರೆ, ನಿಧಿ ಸಿಗುತ್ತದೆ. ಅದು ಮನೆಯಲ್ಲಿಯೇ ಇದೆ. ನಿಧಿ ತೆಗಿಬೇಕಾದರೆ ಪೂಜೆ ಮಾಡಬೇಕು. ಅದಕ್ಕೆಲ್ಲ ದುಡ್ಡು (Money) ಆಗುತ್ತದೆ ಎಂದು ಕಳ್ಳ ಜ್ಯೋತಿಷಿ ನವೀನ್ ಹೇಳಿದ್ದಾನೆ. ಇದನ್ನೆಲ್ಲಾ ನಂಬಿದ ತಿಮ್ಮರಾಯಪ್ಪ ಹಣ ಹೊಂದಿಸಲು ಸಜ್ಜಾ ಗಿದ್ದಾರೆ. ಇತ್ತ ದುಡ್ಡಿಗಾಗಿ ಮಗಳು ಹಾಗೂ ಅಳಿಯ ವ್ಯಕ್ತಿಯೋರ್ವನ ಬಳಿ ಕರೆದುಕೊಂಡು ಹೋಗಿದ್ದಾರೆ. ತಿಮ್ಮರಾಯಪ್ಪನ ಜಮೀನನ್ನು ಅಡವಿಟ್ಟು 17 ಲಕ್ಷ ರೂಪಾಯಿಯನ್ನು ಕ-ಳ್ಳ ಜ್ಯೋತಿಷಿಯ ಕೈಗೆ ನೀಡಿದ್ದಾರೆ.
ಅದಲ್ಲದೇ, ತಿಮ್ಮರಾಯಪ್ಪ ಹಾಗೂ ಸಹೋದರ ಪ್ರದೀಪ್ ಕುಮಾರ್ ಅವರ ಸಹಿ ತೆಗೆದುಕೊಂಡು ಜಮೀನನ್ನು ಖಾಸಗಿ ವ್ಯಕ್ಯಿಗೆ ಆಗ್ರಿಮೆಂಟ್ ಮಾಡಿಕೊಟ್ಟು 33 ಲಕ್ಷ ರೂ. ಹಣ ಪಡೆದು ಪಡೆದುಕೊಂಡಿದ್ದಾರೆ. ಇತ್ತ ಮಂಜುಳ (Manjula) ದಂಪತಿಗಳು ತಂದೆ ಹಾಗೂ ಸಹೋದರನಿಗೆ ಪಂಗನಾಮ ಹಾಕಿದ್ದು, ತಿಮ್ಮರಾಯಪ್ಪ ದಂಪತಿ ಹಾಗೂ ಪ್ರದೀಪ್ ಕುಮಾರ್ ಲಕ್ಷಾನುಗಟ್ಟಲೆ ಹಣವನ್ನು ಕಳೆದುಕೊಂಡಿದ್ದಾರೆ.