ಮದುವೆಯಾಗಿದ್ದವರ ಜೊತೆಗೆ ರಿ-ಲೇಷನ್ಶಿಪ್ ನಲ್ಲಿದ್ದ ಖ್ಯಾತ ನಟಿಯರು ಯಾರೆಲ್ಲಾ ಗೊತ್ತಾ? ಇಲ್ಲಿದೆ ನೋಡಿ!!

ಸಿನಿಮಾರಂಗದಲ್ಲಿರುವ ನಟ ನಟಿಯರು ಪ್ರೀತಿ, ಪ್ರೇಮ, ಸುತ್ತಾಟ ಹಾಗೂ ಬ್ರೇ-ಕಪ್ ಎಂದು ಸುದ್ದಿಯಾಗುತ್ತಾರೆ. ಅಷ್ಟೇ ಅಲ್ಲದೇ ಮದುವೆ ಯಾದ ಸಿನಿಮಾ ನಟ ನಟಿಯರ ಜೊತೆಗೆ ಸಂಬಂಧವನ್ನು ಇಟ್ಟುಕೊಂಡು ಸುದ್ದಿಯಾಗುತ್ತಾರೆ. ಈಗಾಗಲೇ ಸಿನಿಮಾರಂಗದಲ್ಲಿರುವ ನಟಿಯರು ಮದುವೆಯಾದವರ ಜೊತೆಗೆ ಪ್ರೀತಿಯಲ್ಲಿ ಬಿದ್ದು ವಿವಾದ (Controversy) ಗಳನ್ನು ಸೃಷ್ಟಿಸಿಕೊಂಡವರು ಇದ್ದಾರೆ. ಹಾಗಾದ್ರೆ ಅಂತಹ ನಟಿಯರು ಯಾರೆಲ್ಲಾ ಎನ್ನುವುದರ ಕಂಪ್ಲೀಟ್ ಮಾಹಿತಿಗಾಗಿ ಈ ಲೇಖನವನ್ನು ಓದಿ.

ಅಂತಹವರಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ (Nayanatara) ಅವರು ಪ್ರೀತಿಯ ವಿಚಾರಗಳಿಂದ ಸುದ್ದಿಯಲ್ಲಿದ್ದರು. ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ (Prabhudeva) ಜೊತೆ ಪ್ರೀತಿಯಲ್ಲಿ ಇದ್ದರು. ಆದರೆ ಪ್ರಭುದೇವ ಅವರಿಗೆ ಮದುವೆ ಆಗಿತ್ತು. 1995ರಲ್ಲಿ ರಮಾಲತಾ (Ramalatha) ಜೊತೆ ಪ್ರಭುದೇವ ವಿವಾಹವಾಗಿದ್ದರೂ ಕೂಡ ಮದುವೆ ಬಳಿಕ ನಯನಾ ತಾರಾರವರ ಜೊತೆಗೆ ಪ್ರೀತಿಯಲ್ಲಿದ್ದರು.

ಈ ವಿಚಾರವು ಸುದ್ದಿಯಾಗುತ್ತಿದ್ದಂತೆ ರಮಾಲತಾರವರು ಇವರಿಬ್ಬರ ಸಂಬಂಧವನ್ನು ವಿರೋಧಿಸುವ ಮೂಲಕ ಪ್ರಭುದೇವ ಎರಡನೇ ಮದುವೆ ಆದರೆ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಾಗಿ ಹೇಳಿದ್ದರು. ಇದಾದ ಬಳಿಕ ನಟ ಪ್ರಭುದೇವ ಜೊತೆ ನಯನತಾರಾ ಬ್ರೇ-ಕಪ್ ಆಯಿತು. ಆದರೆ ನಟ ಪ್ರಭುದೇವ ಹಾಗೂ ರಮಾಲತಾರವರ ಡೈವೋರ್ಸ್ ನೀಡುವ ಮೂಲಕ ಇಬ್ಬರ ಸಂಬಂಧವನ್ನು ಕೊನೆಗಾಣಿಸಿಕೊಂಡರು.

ನಟಿ ಶ್ರುತಿ ಹಾಸನ್ (Shruti Hasan) ಅವರು ನಟ ಧನುಷ್ (Dhanush) ಜೊತೆಗೆ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ‘3’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಧನುಷ್ ಹಾಗೂ ಶ್ರುತಿ ಹಾಸನ್ ಪ್ರೀತಿ ಮೂಡಿತ್ತು ಎನ್ನಲಾಗಿತ್ತು. ಆದರೆ ನಟಿ ಶ್ರುತಿ ಹಾಸನ್ ಮಾತ್ರ ಈ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಗೆಳೆಯನಾಗಿ ಹಾಗೂ ಕಲಾವಿದನಾಗಿ ಧನುಶ್ ಅವರನ್ನು ಗೌರವಿಸುತ್ತೇನೆ ಎಂದಿದ್ದರು.

ಅದಲ್ಲದೇ, ನಟಿ ರೇಖಾ (Rekha) ಅವರು ಬಾಲಿವುಡ್ ಸ್ಟಾರ್ ಹೀರೋ ಅಮಿತಾಭ್ ಬಚ್ಚನ್ (Amithabh Bacchan) ಜೊತೆಗೆ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಇವರಿಬ್ಬರ ಪ್ರೀತಿಯ ವಿಚಾರವು ಬಾಲಿವುಡ್ ಅಂಗಳದಲ್ಲಿ ಕೆಲವು ವರ್ಷಗಳ ಕಾಲ ಕೇಳಿಬರುತ್ತಲೇಲೇ ಇತ್ತು. ನಟಿ ಶ್ರೀದೇವಿ (Shreedevi) ಯವರು ಮದುವೆಯಾಗಿದ್ದ ಬೋನಿ ಕಪೂರ್ (Boni Kapur) ಜೊತೆಗೆ ಸಂಬಂಧದಲ್ಲಿದ್ದರು.

ಹೌದು, ಬೋನಿ ಕಪೂರ್ ಹಾಗೂ ಅವರ ಪತ್ನಿ ಮೋನಾ ಶೌರಿ ಕಪೂರ್ (Shouri Kapur) ಮದುವೆ ಆಗಿದ್ದರು.ಹೀಗಿರುವಾಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಂದವರೇ ಈ ಶ್ರೀದೇವಿ. ಈ ವಿಚಾರವು ಬೋನಿ ಕಪೂರ್ ಹಾಗೂ ಮೋನಾ ನಡುವಿನ ಬಿರುಕಿಗೆ ಕಾರಣವಾಗಿತ್ತು. ಕೊನೆಗೆ ವಿಚ್ಛೇಧನ ನೀಡಲು ಮುಂದಾಗುತ್ತಿದ್ದಂತೆ ಇತ್ತ ಬೋನಿ ಕಪೂರ್ ಪ್ರೀತಿಯ ಸಂಕೇತವು ಶ್ರೀದೇವಿಯ ಗರ್ಭದಲ್ಲಿ ಬೆಳೆಯುತ್ತಿತ್ತು.

ಕೊನೆಗೆ ನಟಿ ಶ್ರೀದೇವಿಯನ್ನು ಬೋನಿಯವರು ಮದುವೆ ಮಾಡಿಕೊಂಡರು. ನಟ ವಿಷ್ಣು ವಿಶಾಲ್ (Vishnu Vishal) ಹಾಗೂ ರಜಿನಿ (Rajini) ವಿಚ್ಛೇದನ ಪಡೆದುಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು ಅಮಲಾ ಪೌಲ್ ಹಾಗೂ ಜ್ವಾಲಾ ಗುಟ್ಟಾ. ಆದರೆ ಇದನ್ನು ಅಮಲಾ ಪೌಲ್ (Amal Poul) ಒಪ್ಪಲಿಲ್ಲ. ಆದರೆ ಆ ಬಳಿಕ ವಿಷ್ಣು ವಿಶಾಲ್ ಅವರು ಜ್ವಾಲಾ (Jwaala) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ನಟ ಕಮಲ್ ಹಾಸನ್ (Kamal Hasan) ಹಾಗೂ ಸಿಮ್ರನ್ (Simran) ಅವರು ಜೊತೆ ರಿಲೇಶನ್​ಶಿಪ್​ನಲ್ಲಿದ್ದರು ಎನ್ನುವ ವಿಚಾರವು ಸುದ್ದಿಯಾಗಿತ್ತು. ಈ ವಿಚಾರವನ್ನು ಸಿಮ್ರನ್ ಒಪ್ಪಿಕೊಳ್ಳಲಿಲ್ಲ. ಕೊನೆಗೆ ಸಾರಿಕಾ (Sarikaa) ಅವರ ಜೊತೆಗೆ ಕಮಲ್ ಹಾಸನ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ನಟಿ ವನಿತಾ ವಿಜಯ್ ಕುಮಾರ್ (Vanitha Kumar) ಅವರು ಮದುವೆಯಾಗಿದ್ದ ಪೀಟರ್ ಪೌಲ್ (Piter Poul) ಅವರ ಜೊತೆಗೆ ಸಂಬಂಧವನ್ನು ಹೊಂದಿದ್ದರು.

ಪೀಟರ್ ಪೌಲ್ ಅವರಿಗೆ ಮದುವೆಯಾಗಿದ್ದರೂ ಕೂಡ ವನಿತಾರವರ ಜೊತೆಗೆ ಪ್ರೀತಿ ಚಿಗುರಿತ್ತು. ಆ ಬಳಿಕ ನಟಿ ವನಿತಾ ವಿಜಯ್ ಕುಮಾರ್ ಅವರು ಪೀಟರ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಟಿ ಆಂಡ್ರಿಯಾ ಜೆರೆಮಿಯಾ (Andrea Jeremiah)ನಿರ್ದೇಶಕ ಸೆಲ್ವರಾಘವನ್ (Selwa Raghavan) ಜೊತೆಗೆ ಸಂಬಂಧವನ್ನು ಹೊಂದಿದ್ದರು. ತಮ್ಮ ರಿಲೇಶನ್​ಶಿಪ್ ವಿಚಾರದ ಬಗ್ಗೆ ಮಾತನಾಡಿದ್ದ ವೇಳೆಯಲ್ಲಿ ಮದುವೆ ಆದ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದು, ಇದರಿಂದ ಸಾಕಷ್ಟು ಬೇ-ಸರ ಇದೆ ಎಂದಿದ್ದರು. ಹೀಗಾಗಿ ನಿರ್ದೇಶಕನ ಸಂ-ಸಾರ ಹಾಳಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *