ಭಿಕ್ಷುಕ ಕೊಟ್ಟ ಪ್ರಸಾದದಿಂದ ಮಹಿಳೆಯ ಮಾತೇ ಬಂದ್, ಅಷ್ಟಕ್ಕೂ ಏನಾಯಿತು ಗೊತ್ತಾ? ನಿಜಕ್ಕೂ ಬೆಚ್ಚಿ ಬೀಳಿಸುವ ವಿಷಯ!!

ಮನೆಯ ಹತ್ತಿರ ಯಾರಾದರೂ ಭಿ-ಕ್ಷುಕರು ಬಂದು ದಾನ ಮಾಡಿ ಎಂದು ಕೇಳಿದರೆ ನಿಮ್ಮ ಕೈಯಲ್ಲದನ್ನು ಕೊಡಿ. ಆದರೆ ಅವರು ಕೊಡುವ ಯಾವುದಾದರು ವಸ್ತುವನ್ನು ಪ್ರಸಾದ ಎಂದು ಸೇವಿಸುವ ಮುನ್ನ ಜೋಕೆ. ಯಾಕೆ ಈ ಮಾತು ಹೇಳುತ್ತಿದ್ದೇವೆ ಎಂದರೆ ಇಲ್ಲೊಬ್ಬ ಮಹಿಳೆಯ ಮಾತೇ ನಿಂತು ಹೋಗಿದೆ. ಹೌದು, ಭಿಕ್ಷುಕ ನೀಡಿದ ಪ್ರಸಾದ ಸೇವಿಸಿದ ಮಹಿಳೆಗೆ ಮಾತನಾಡಲು ಆಗುತ್ತಿಲ್ಲ.

ಹೌದು ಈ ಘಟನೆಯು ಧಾರವಾಡ ಜಿಲ್ಲೆ (Dharavada District) ಕುಂದಗೋಳ (Kundgol) ತಾಲೂಕಿನ ಗುಡೇನಕಟ್ಟಿ (Gudenkatti) ಗ್ರಾಮದಲ್ಲಿ ನಡೆದಿದೆ. ಆರು ದಿನಗಳ ಹಿಂದೆ ನಡೆದ ಘಟನೆಯು ತಡವಾಗಿ ಬಂದಿದ್ದು ಸದ್ಯಕ್ಕೆ ಎಲ್ಲರಿಗೂ ಕೂಡ ಅಚ್ಚರಿಯಾಗಿದೆ.

ಹೌದು, ಕಪ್ಪು ಅಂಗಿ, ಬಣ್ಣದ ಪಂಚೆ ತೊಟ್ಟಿದ 55 ವರ್ಷದ ವ್ಯಕ್ತಿ ಗುಡೇನಕಟ್ಟಿ ಗ್ರಾಮದ ಮೀನಾಕ್ಷಿ ಮಹಾದೇವಪ್ಪ ಕಟಗಿ (Minakshi Mahadevappa Katagi) ಅವರ ಮನೆ ಬಳಿ ಬಂದು ಭಿ-ಕ್ಷೆ ಬೇಡಿದ್ದು, ಮಹಿಳೆ ಐದು ರೂಪಾಯಿ ಕೊಟ್ಟಿದ್ದಾರೆ. ಭಿಕ್ಷುಕನು ದೇವರ ಪ್ರಸಾದವೆಂದು ಭಸ್ಮ ಹಾಗೂ ಹಾಲನ್ನು ನೀಡಿದ್ದಾನೆ.

ಇದನ್ನು ಸೇವಿಸಿದ ಗ್ರಾಮದ ಮಹಿಳೆ ಮೀನಾಕ್ಷಿ (Minakshi) ಎನ್ನುವವರು ಸೇವಿಸಿದ್ದಾರೆ. ಈ ವೇಳೆಯಲ್ಲಿ ಭಿಕ್ಷುಕ ಕೊಟ್ಟ ಪ್ರಸಾದವನ್ನು ಹಾಕಿಕೊಂಡು ಮನೆಯೊಳಗೆ ಹೋಗಿದ್ದಾಳೆ. ಆದಾದ ಹತ್ತು ನಿಮಿಷದ ನಂತರ ನಾಲಿಗೆ ದಪ್ಪ ಆಗಿದ್ದು ಮಾತಾನಾಡಲು ಆಗಲಿಲ್ಲ. ಕೊನೆಗೆ ಕೈ ಸನ್ನೆ ಮೂಲಕ ಮಹಿಳೆ ನಡೆದ ಘಟನೆಯನ್ನು ಪತಿಗೆ ತಿಳಿಸಿದ್ದಾಳೆ.

ಆ ತಕ್ಷಣವೇ ಮಹಿಳೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಬಳಿಕವೂ ಮಹಿಳೆಗೆ ಮಾತನಾಡಲು ಆಗುತ್ತಿಲ್ಲ. ಆದರೆ ಇತ್ತ ಪ್ರಸಾದ ಕೊಟ್ಟ ಭಿಕ್ಷುಕನ ಹುಡುಕಾಟ ನಡೆಸಿದ್ದಾರೆ. ಆದರೆ ಕುಂದಗೋಳ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದವರನ್ನು ಬೆಚ್ಚಿಬೀಳಿಸಿದೆ. ಆದರೆ ವೈದ್ಯರಿಗೆ ತೋರಿಸಿದಾಗ ಕ್ರಮೇಣ ಮಾತು ಬರುತ್ತದೆ ಎಂದಿದ್ದಾರೆ.

Leave a Reply

Your email address will not be published. Required fields are marked *