ಸಮಾಜದಲ್ಲಿ ಹೆಣ್ಣು ಮಕ್ಕಳು (Women) ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಯು ರೂಪಿಸಿರುವ ಕಟ್ಟುಪಾಡು ಗಳನ್ನು ಮೀರುವಂತಿಲ್ಲ. ಹೀಗಾಗಿ ಕೆಲವು ಮಹಿಳೆಯರು ಪುರುಷ ಪ್ರಧಾನ ವ್ಯವಸ್ಥೆಯ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ.
ಇನ್ನೊಂದೆಡೆ ಸಮಾಜದಲ್ಲಿ ಹೆಣ್ಣು ಮಕ್ಕಳು ಸ್ಥಾನಮಾನವನ್ನು ಗಿಟ್ಟಿಸಿಕೊಂಡಿದ್ದರೂ ಕೂಡ, ಆದರೆ ಕೆಲವೊಂದು ಆಚರಣೆಗಳು ಇಂದಿಗೂ ಕೂಡ ಜೀವಂತವಾಗಿದೆ. ಆದರೆ ಇಲ್ಲೊಂದು ಪ್ರದೇಶದ ಆಚರಣೆಯು ಹೆಣ್ಣು ಗಂಡು ಸಮಾನರು ಎನ್ನುವ ಕಾಲ ಘಟ್ಟದಲ್ಲಿದ್ದರೂ ನಂಬಲು ಕಷ್ಟವಾಗುವಂತಿದೆ. ಗಂಡಿಲ್ಲದೆ ಹೆಣ್ಣು ಬದುಕಲು ಸಾಧ್ಯವಿಲ್ಲ ಎನ್ನುವ ಮಾತನ್ನು ಈ ಹಳ್ಳಿಯ ಜನರು (Rular People) ಮುರಿದಿದ್ದಾರೆ.

ಇಲ್ಲೊಂದು ಕಡೆಯಲ್ಲಿ ಮಹಿಳೆಯರೇ ಇರುವ ಹಳ್ಳಿಯೊಂದಿದೆ. ಉಮೋಜಾ ಎಂಬ ಈ ಹಳ್ಳಿ ಕೀನ್ಯಾದ ರಾಜಧಾನಿ ನೈರೋಬಿ ಬಳಿಯಲ್ಲಿದ್ದು, ಈ ಹಳ್ಳಿಯ ತುಂಬೆಲ್ಲಾ ಮಹಿಳೆಯರೇ ಇದ್ದಾರೆ.ಹೀಗಾಗಿ ಇದನ್ನು ಮಹಿಳೆಯರು ಮಾತ್ರ ವಾಸಿಸುವ ಗ್ರಾಮವೆಂದು ಕರೆದರೂ ತಪ್ಪಾಗಲಾರದು. ಕೀನ್ಯಾ(Kinya)ದ ರಾಜಧಾನಿ ನೈರೋಬಿ (Nairobi) ಬಳಿಯಲ್ಲಿರುವ ಉಮೋಜಾ (Umoja) ಎನ್ನುವ ಗ್ರಾಮಕ್ಕೆ ಪುರುಷರಿಗೆ ಪ್ರವೇಶವಿಲ್ಲ.
ಈ ಹಳ್ಳಿಯಲ್ಲಿರುವ ಸರಿಸುಮಾರು 50 ಮಹಿಳೆಯರ ಗುಂಪು ತಮ್ಮ ಮಕ್ಕಳೊಂದಿಗೆ ಒಣಗಿರುವ ಹುಲ್ಲಿನ ಗುಡಿಸಲನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಇಲ್ಲಿಗೆ ಪುರುಷರು ಬರುವಂತಿಲ್ಲ. ಒಂದು ವೇಳೆ ಪುರುಷರು ಬಂದರೆ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ಬಿಡುತ್ತಾರೆ. ಈ ಪುರುಷರು ಪ್ರವೇಶಿಸಿದೇ ಇರಲು ಕಾರಣವು ಇದೆ.
1990ರಲ್ಲಿ ಈ ಹಳ್ಳಿಯಲ್ಲಿ 15 ಮಹಿಳೆಯರಿದ್ದು ಸಂಬೂರು (Samburu) ಮತ್ತು ಇಸಿಯೊಸೊ (Isiyoso) ಬಳಿ ಬ್ರಿಟಿಷ್ ಸೈನಿಕರು ಈ ಮಹಿಳೆಯರ ಮೇಲೆ ಅ-ತ್ಯಾಚಾರ ಮಾಡಿದ್ದರು. ಇಲ್ಲಿನ ಮಹಿಳೆಯರು ಸಾಕಷ್ಟು ದೌ-ರ್ಜನ್ಯವನ್ನು ಅನುಭವಿಸಿದ್ದರು. ಹೀಗಿರುವಾಗ ಆ ಮಹಿಳೆಯರನ್ನು ಅವರ ಗಂಡಂದಿರು ಮನೆಯಲ್ಲಿ ಹೊರಗೆ ಹಾಕಿ ಅ-ಗೌರವದಿಂದ ಕಂಡರು. ಅಂದಿನಿಂದ ಈ ಎಲ್ಲಾ ಮಹಿಳೆಯರು ಒಂದೆಡೆ ಸೇರಿಕೊಂಡು ವಾಸಿಸಲು ಶುರು ಮಾಡಿದರು.
ಅಲ್ಲಿಂದಲೇ ಈ ಗ್ರಾಮಕ್ಕೆ ಉಮೋಜಾ (Umoja) ಎಂದು ಹೆಸರಿಟ್ಟು ಮಹಿಳೆಯರೇ ಇರುವ ಗ್ರಾಮ ಎನ್ನುವ ಹೆಸರಿಗೆ ಪಾತ್ರವಾಯಿತು. ಈ ಗ್ರಾಮದ ವಿಶೇಷತೆಯೆಂದರೆ ಆ ಗ್ರಾಮಕ್ಕೆ ಯಾರೇ ನೊಂದ ಮಹಿಳೆಯರು ಹಾಗೂ ಗರ್ಭಿಣಿಯರು ಆಶ್ರಯಕ್ಕಾಗಿ ಬಂದರೆ ಆಶ್ರಯ ನೀಡಲಾಗುತ್ತದೆ. ಈ ಉಮೋಜಾ ಗ್ರಾಮದ ಮಹಿಳೆಯರು ಬಣ್ಣಬಣ್ಣದ ಮಣಿಗಳಿಂದ ಮಾಲೆಗಳನ್ನು ತಯಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಒಳಪಡದೇ ಸ್ವಾತಂತ್ರವಾಗಿ ಬದುಕುವ ಈ ಮಹಿಳೆಯರ ಧೈರ್ಯಕ್ಕೆ ಮೆಚ್ಚಲೇ ಬೇಕು.
