ಶಬರಿಮಲೆಯಲ್ಲಿ ನೆಲೆಸಿರುವ ಅಯ್ಯಪ್ಪಸ್ವಾಮಿ ಜನನದ ಹಿಂದಿನ ನಿಗೂಢ ರಹಸ್ಯದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ!!

ಸ್ವಾಮಿಯೇ ಶರಣಂ ಅಯ್ಯಪ್ಪ, ಇದು ಭಕ್ತಿ ತುಂಬಿ ಅಯ್ಯಪ್ಪ ಸ್ವಾಮಿಯನ್ನು ಕರೆಯುವ ಅಯ್ಯಪ್ಪ ಭಕ್ತಾಧಿಗಳು. ನವೆಂಬರ್ ತಿಂಗಳು (November) ಬಂದರೆ ಸಾಕು 48 ದಿನಗಳ ಕಾಲ ಮಾಲಧಾರಿಗಳು ವೃತವನ್ನು ಆಚರಿಸಿ ಜನವರಿ 14 ರ ಮಕರ ಸಂಕ್ರಮಣದಂದು ಶಬರಿಮಲೆ (Shabarimale) ಯಲ್ಲಿ ನೆಲೆಸಿರುವ ಅಯ್ಯಪ್ಪನ ದರ್ಶನ ಪಡೆಯುತ್ತಾರೆ.

ಅಯ್ಯಪ್ಪ ಸ್ವಾಮಿ ನೆಲೆಸಿರುವ ಅಯ್ಯಪ್ಪ ಸ್ವಾಮಿ ದೇವಾಲಯ (Ayyappaswami Temple) ದ ವಿಶೇಷತೆಗಳು, ಮಣಿಕಂಠನ ಜನನದ ಹಿಂದಿರುವ ಕಥೆ ಹಾಗೂ ಇನ್ನಿತ್ತರ ವಿಶೇಷತೆಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಕೇರಳ ರಾಜ್ಯದ ಪತನಂತಿಟ್ಟ ಜಿಲ್ಲೆ (Kerala State Patanntitta District) ಯ ಪೆರುನಾಡ್ ಗ್ರಾಮ ಪಂಚಾಯತಿ (Perynad Grama Panchayathi) ವ್ಯಾಪ್ತಿಯಲ್ಲಿ ನೆಲೆ ನಿಂತು ನಂಬಿ ಬಂದ ತನ್ನ ಭಕ್ತರನ್ನು ಸಲಹುತ್ತಾನೆ ಈ ಅಯ್ಯಪ್ಪ ಸ್ವಾಮಿ.

ದಂತಕಥೆಯನ್ನು ಗಮನಿಸಿದರೆ ಅಯ್ಯಪ್ಪ ಸ್ವಾಮಿಯ ಜನನವೇ ರೋಚಕ. ಸಾಗರ ಮಂಥನದ ಸಮಯದಲ್ಲಿ, ಶಿವನು, ಭಗವಾನ್ ವಿಷ್ಣುವಿನ ಮೋಹಿನಿ ರೂಪ (Mohini Avathar) ದಿಂದ ಆಕರ್ಷಿತನಾಗಿ, ಈ ವೇಳೆಯಲ್ಲಿ ಹರಿಹರನ ಮಿಲನದ ಸಂಕೇತವಾಗಿ ಮಗುವಿನ ಜನನವಾಯಿತು. ಆ ಮಗುವನ್ನು ಪಂಪಾ ನದಿ (Pampa River) ಯ ತೀರದಲ್ಲಿ ಬಿಡಲಾಯಿತು. ಇತ್ತ ಸಂತಾನವಿಲ್ಲದೆ ದುಃಖಿತನಾಗಿದ್ದ, ಪಂದಳ ರಾಜ (Pandala King) ಮತ್ತು ಆಕೆಯ ಪತ್ನಿ ರಾಣಿಗೆ ಚಿಂತೆಯಲ್ಲಿದ್ದರು.

ಹೀಗಿರುವಾಗ ಒಂದು ದಿನ ಪಂಪಾ ನದಿಯ ದಡದಲ್ಲಿರುವ ಕಾಡಿನಲ್ಲಿ ಬೇಟೆಯಾಡಲು ಹೊರಟ ಪಂದಳ ರಾಜ ರಾಜಶೇಖರನಿಗೆ ಮಗು ಅಳುವ ಸದ್ದು ಕೇಳುತ್ತದೆ. ಅಳುವ ದನಿಯೂ ಎಲ್ಲಿಂದ ಬರುತ್ತಿದೆ ಎಂದು ಹುಡುಕಿಕೊಂಡು ಹೋಗುವ ಪಂದಳ ರಾಜನಿಗೆ ಪಂಪನದಿಯ ತೀರದಲ್ಲಿ ಮಗುವೊಂದು ಕಾಣಿಸುತ್ತದೆ. ಈ ವೇಳೆಯಲ್ಲಿ ಪ್ರತ್ಯಕ್ಷನಾದ ಸನ್ಯಾಸಿಯೊಬ್ಬನು ಆ ಮಗುವನ್ನು ಅರಮನೆಗೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾನೆ.

ಈ ವೇಳೆಯಲ್ಲಿ ಹನ್ನೆರಡು ವರ್ಷದ ಬಳಿಕ ಮಗುವಿನ ನಿಜವಾದ ಅಂಶವು ಪ್ರಕಟವಾಗುತ್ತದೆ. ಮಗುವಿನ ಕುತ್ತಿಗೆಯಲ್ಲಿರುವ ಚಿನ್ನದ ಸರವನ್ನು ನೋಡಿದ ಸನ್ಯಾಸಿಯೂಯೂ ಮಗುವಿನ ಮಣಿಕಂಠನೆಂದು ಹೆಸರು ಇಡಲು ಸೂಚಿಸುತ್ತಾನೆ.ಮಕ್ಕಳಿಲ್ಲದ ರಾಜನು ಮಗುವನ್ನು ಕರೆದುಕೊಂಡು ಬಹಳ ಸಂತೋಷದಿಂದ ಅರಮನೆಗೆ ಬಂದು ನಡೆದ ಎಲ್ಲಾ ವಿಚಾರವನ್ನು ರಾಣಿಯ ಬಳಿ ತಿಳಿಸುತ್ತಾನೆ.

ಆ ಬಳಿಕ ಹನ್ನೆರಡು ವರ್ಷಗಳ ಬಳಿಕ ಈ ಮಣಿಕಂಠ ತನ್ನ ದಿವ್ಯಾಂಶದಿಂದ ಮಾಯವಾಗಿ ಶಬರಿಮಲೆಯಲ್ಲಿ ನೆಲೆಸುತ್ತಾನೆ. ಅದಲ್ಲದೇ ಪ್ರತಿವರ್ಷವು ಮಕರ ಸಂಕ್ರಾಂತಿಯ ರಾತ್ರಿ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಬಳಿ ಆಕಾಶದಲ್ಲೊಂದು ಬೆಳಕು ಗೋಚರಿಸುತ್ತದೆ. ಅದುವೇ ಅಯ್ಯಪ್ಪ ಸ್ವಾಮಿ ಎನ್ನುವುದು ಎಲ್ಲರ ನಂಬಿಕೆ.

Leave a Reply

Your email address will not be published. Required fields are marked *