ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯೂ ವಿಳಂಬವಾಗುತ್ತಿರುವುದೇಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿಯತ್ತು

ರಾಜ್ಯದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ದೃಷ್ಟಿಯಿಂದಾಗಿ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜ್ಯ ಸರಕಾರ (Karnataka State Government) ವು ಎಲ್ಲಾ ಮಹಿಳೆಯರಿಗಾಗಿ ಗೃಹ ಲಕ್ಷ್ಮಿ ಯೋಜನೆ 2023 ಅನ್ನು ಪ್ರಾರಂಭಿಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಕರ್ನಾಟಕ ಸರಕಾರವು ಮನೆಯ ಮುಖ್ಯಸ್ಥ ಮಹಿಳೆಯರಿಗೆ 2,000 ರೂ. ಬ್ಯಾಂಕ್‌ ಖಾತೆಗೆ ಜಮಾವಾಗುತ್ತದೆ.

ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಕರ್ನಾಟಕ ರಾಜ್ಯದ ಮಹಿಳೆಯರು ಆನ್‌ಲೈನ್‌ (Online) ನಲ್ಲಿ ಅರ್ಜಿ ಸಲ್ಲಿಸಬೇಕು ಅಥವಾ ಅದರ ಅಧಿಕೃತ ವೆಬ್‌ಸೈಟ್ sevasindhuservices.karnataka.gov.in ನಲ್ಲಿ ನೋಂದಾಯಿಸಿಕೊಳ್ಳಬೇಕು. ಆದರೆ ಈ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ ಐದು ದಿನ ಕಳೆದರೂ ಸರ್ವರ್ ಸಮಸ್ಯೆ ಮಾತ್ರ ಕಡಿಮೆಯಾಗುವಂತೆ ಕಾಣುತ್ತಿಲ್ಲ.

ಇದೇ ಜೂನ್ 15ರಿಂದಲೇ ರಿಜಿಸ್ಟ್ರೇಷನ್ (Registration) ಎಂದು ಸರ್ಕಾರವು ಹೇಳಿತ್ತು. ಆದರೆ ಈ ಗೃಹಲಕ್ಷ್ಮಿ ಯೋಜನೆ ಅರ್ಜಿ‌ ಸಲ್ಲಿಸಲು ಸಾಫ್ಟ್‌ವೇರ್ ಮಾತ್ರ ಇನ್ನು ಸಿದ್ಧವಾಗಿಲ್ಲ. ಈ ತಾಂತ್ರಿಕ ಕಾರ್ಯ ಮುಗಿಯಲು ಕನಿಷ್ಠ 2 ವಾರಬೇಕು ಎನ್ನಲಾಗಿದೆ. ಈ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆಯೂ ಜಾರಿಗೆ ಬರಲು ಸಮಯ ತೆಗೆದುಕೊಳ್ಳಬಹುದು.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು (Minister of Women and Child Development Department) ಕೂಡ ಯೋಜನೆಗೆ ಸಂಬಂಧಿಸಿದ ಸಾಫ್ಟ್‌ವೇರ್ ಸಿದ್ಧವಾಗಿಲ್ಲ ಎಂದಿದ್ದಾರೆ. ಹೀಗಾಗಿ ಈ ಯೋಜನೆಯ ಫಲಾನುಭವಿಗಳಾಗಬೇಕಾದರೆ ಜುಲೈ ಅಂತ್ಯದವರೆಗೆ ಕಾಯದೇ ಮನೆಯ ಯಜಮಾನಿಯರಿಗೆ ಬೇರೆ ದಾರಿಯಿಲ್ಲ. ಅದಲ್ಲದೇ ಈ ಯೋಜನೆಯನ್ನು ಪ್ರಕ್ರಿಯೆಯನ್ನು ಬೇಗನೇ ಮಾಡಿಮುಗಿಸಲು ಒಂದಷ್ಟು ಯೋಜನೆಗಳನ್ನು ರೂಪಿಸಿಕೊಂಡಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Minister Lakshmi Hebbalkar) ಈ ಯೋಜನೆಯ ಕುರಿತು ಮಾತನಾಡಿದ್ದು, “ಅತಿ ಶೀಘ್ರದಲ್ಲೇ ಗೃಹಲಕ್ಷ್ಮಿ ಅಪ್ಲಿಕೇಷನ್ ಲಾಂಚ್ ಆಗಲಿದೆ. ಪ್ರತಿ ಬೂತ್‌ನಲ್ಲಿ ಓರ್ವ ಮಹಿಳೆ ಸೇರಿ ನಾಲ್ಕು ಜನರನ್ನು ನೇಮಕ ಮಾಡಲಾಗುವುದು. ರಾಜ್ಯದಲ್ಲಿ ಸರಿಸುಮಾರು 1 ಕೋಟಿ 13 ಲಕ್ಷ ಕುಟುಂಬಗಳು ಇದರ ಉಪಯೋಗ ಪಡೆಯಲಿವೆ. ಲಾಂಚ್ ಮಾಡಿದ ನಂತರ ಯಾವುದೇ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಸಾಫ್ಟ್‌ವೇರ್ ಸಿದ್ದಮಾಡುತ್ತಿದ್ದೇವೆ, ಕೆಲಸ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು” ಎಂದಿದ್ದಾರೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯೂ ಎಲ್ಲಾ ತಾಂತ್ರಿಕ ಸಮಸ್ಯೆಗಳಿಂದ ಮುಕ್ತವಾಗಿ ಮಹಿಳೆಯರು ಯಾವಾಗ ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *