ಕ್ಯಾ-ನ್ಸರ್ ನಿಂದ ಇ-ಹಲೋಕ ತ್ಯಜಿಸಿದ ಮಗಳು, ಮಗಳ ಪ್ರತಿಮೆ ಮಾಡಿ ಕೊನೆಯ ಆಸೆ ನೆರವೇರಿಸಿದ ಮಹಾತಾಯಿ, ಇಲ್ಲಿದೆ ನೋಡಿ!!

ತಂದೆ ತಾಯಿಯರ ಕೊನೆಗಾಲದಲ್ಲಿ ಮಕ್ಕಳು ಅವರ ಆಸೆಗಳನ್ನು ಈಡೇರಿಸುತ್ತಾರೆ. ಕೆಲವರು ಮಕ್ಕಳು ತಮ್ಮ ತಂದೆತಾಯಿಯ ಸಮಾಧಿಯನ್ನು ಮಾಡಿ ತಂದೆ ತಾಯಿಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಆದರೆ ಇಲ್ಲೊಬ್ಬ ತಾಯಿಯು ಅಗಲಿದ ಮಗಳ ಪ್ರತಿಮೆ (Wax Statue) ಯನ್ನು ಮಾಡಿ ತಾಯಿ ವಾತ್ಸಲ್ಯ ಹಾಗೂ ಪ್ರೀತಿಗೆ ಸಾಕ್ಷಿಯಾಗಿದ್ದಾರೆ. ತಾಯಿಯು ತನ್ನ ಮಗಳಿಗೋಸ್ಕರ ಮೇಣದ ಪ್ರತಿಮೆ ನಿರ್ಮಿಸಿದ್ದಾರೆ.

ಹೌದು, ಚಿತ್ರದುರ್ಗ ಜಿಲ್ಲೆ (Chitradurga District) ಯ ಹೊಳಲ್ಕೆರೆ ತಾಲ್ಲೂಕಿನ ಗ್ಯಾರಹಳ್ಳಿ Holalkere Taluk Gyarahalli) ಯ ಕಮಲಮ್ಮ ಮುಖ್ಯ ಶಿಕ್ಷಕಿ (Teacher) ಯಾಗಿ ನಿವೃತ್ತಿ ಪಡೆದಿದ್ದಾರೆ. ಇವರೇ ಮಗಳ ಪ್ರತಿಮೆಯನ್ನು ನಿರ್ಮಿಸಿ ತನ್ನ ತಾಯಿ ಪ್ರೀತಿಯನ್ನು ತೋರಿಸುವ ಮೂಲಕ ಮಾದರಿಯಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂದಹಾಗೆ, ಮಗಳು ಕಾವ್ಯಾ (Kavya) ಳು 12 ದಿವಸದ ಮಗುವಾಗಿದ್ದ ಪತಿಯನ್ನು ಕಳೆದುಕೊಂಡಿದ್ದರು ಈ ಕಮಲಮ್ಮ (Kamalamma).

ಹೀಗಾಗಿ ಮಗಳನ್ನೇ ಜೀವ ಎಂದು ಸಾಕಿದ್ದಳು. ಆದರೆ ಮಗಳಿಗೆ 26 ವರ್ಷದ ತುಂಬುತ್ತಿದ್ದಂತೆ ಮದುವೆ ಮಾಡಬೇಕು ಎಂದುಕೊಂಡಿದ್ದಾಳೆ. ಅದರಂತೆ ಮದುವೆ ಕೂಡ ಫಿಕ್ಸ್ ಆಗಿದೆ. ಆದರೆ 26 ನೇ ವಯಸ್ಸಿಗೆ ಮಗಳಿಗೆ ಕ್ಯಾ-ನ್ಸರ್​ ರೋ-ಗ ಕಾಡಿದೆ. ಹೌದು, ನಾಲ್ಕು ವರ್ಷಗಳ ಕಾಲ ಕ್ಯಾ-ನ್ಸರ್‌ನಿಂದ ನರಳಿ, 2022ರ ಡಿಸೆಂಬರ್‌ನಲ್ಲಿ ಕಾವ್ಯಾ ಇ-ಹಲೋಕವನ್ನು ತ್ಯಜಿಸಿ ಬಿಟ್ಟಿದ್ದಾಳೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಈ ವೇಳೆ ಕಾವ್ಯಾ ಯೂಟ್ಯೂಬ್‌ನಲ್ಲಿ ಪಿಒಪಿಯಿಂದ ಮಾಡಿದ ಮೂರ್ತಿ ತೋರಿಸಿ ಸ-ಮಾಧಿಯ ಪಕ್ಕದಲ್ಲಿ ಉದ್ಯಾನ ನಿರ್ಮಿಸಬೇಕೆಂಬ ತನ್ನ ಆಸೆಯನ್ನು ಹೇಳಿಕೊಂಡಿದ್ದಳು. ಅಷ್ಟೇ ಅಲ್ಲದೇ, ನನ್ನ ದೇಹವನ್ನು ಊರಿಗೆ ಕೊಂಡೊಯ್ಯಬೇಡ, ಆಸ್ಪತ್ರೆಗೆ ದಾನ ಮಾಡು ಎಂದು ಕಾವ್ಯಾ ತಿಳಿಸಿದ್ದು, ಆದರೆ ಕ್ಯಾನ್ಸರ್ ರೋಗ ಇದ್ದ‌ ಹಿನ್ನೆಲೆಯಲ್ಲಿ ವೈದ್ಯರು ಒಪ್ಪಿಗೆ ನೀಡಲಿಲ್ಲ.

ಕನಿಷ್ಠ ಪಕ್ಷ ಮಗಳ ಕೊನೆಯ ಆಸೆಯನ್ನು ಈಡೇರಿಸಬೇಕೆಂದುಕೊಂಡು, ಬೆಂಗಳೂರಿನ ಶಿಲ್ಪಿ ವಿಶ್ವನಾಥ್ (Vishwanath) ಅವರಿಂದ 3.30 ಲಕ್ಷ ವೆಚ್ಚದಲ್ಲಿ ಸಿಲಿಕಾನ್ ಪ್ರತಿಮೆ ನಿರ್ಮಿಸಿ ಸರಸ್ವತಿನಗರ (Saraswathi Nagara) ದ ತಮ್ಮ ನಿವಾಸದಲ್ಲಿ ಇಟ್ಟಿದ್ದಾರೆ. ಅದರೊಂದಿಗೆ ಮಗಳ ಸ-ಮಾಧಿ ನಿರ್ಮಿಸಿ ಸುತ್ತಲು ಉದ್ಯಾನ ನಿರ್ಮಿಸಿದ್ದು ಮಗಳು ತನ್ನ ಜೊತೆಗೆ ಇರುವಂತೆ ಮಾಡಿದ್ದಾಳೆ. ಒಟ್ಟಿನಲ್ಲಿ ಮಗಳ ಕೊನೆಯ ಆಸೆಯನ್ನು ಪೂರ್ತಿ ಮಾಡಿ ಅದರಲ್ಲಿಯೇ ತಾನು ಖುಷಿ ಕಾಣುತ್ತಿದ್ದಾಳೆ.

Leave a Reply

Your email address will not be published. Required fields are marked *