ನಾಮಿನಿಯ ವಿಚಾರವಾಗಿ ಪತ್ನಿಯ ಕಥೆ ಮುಗಿಸಿದ ಪತಿರಾಯ, ಇಲ್ಲಿದೆ ನೋಡಿ ಅಸಲಿ ವಿಚಾರ!

ಈಗಿನ ಕಾಲದಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎನ್ನುವುದು ಅರ್ಥವಾಗಿಲ್ಲ. ನಂಬಿದರೆ ಎಲ್ಲಿ ಮೋಸ ಮಾಡಿಬಿಡುತ್ತಾರೆ ಎನ್ನುವ ಭಯ. ಇತ್ತೀಚೆಗಿನ ದಿನಗಳಲ್ಲಿ ಇಂತಹ ಸಾಕಷ್ಟು ಘಟನೆಗಳು ನಡೆಯುತ್ತಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುತ್ತಿವೆ. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಅಧಿಕಾರಿಯಾಗಿದ್ದ ತನ್ನ ಪತ್ನಿಯನ್ನು ನಿರುದ್ಯೋಗಿ ಪತಿ ಹ- ತ್ಯೆ ಮಾಡಿದ ಘಟನೆ ಮಧ್ಯಪ್ರದೇಶ (Madhyapradesh) ದಲ್ಲಿ ನಡೆದಿದೆ.

ಈ ರೀತಿಯ ಕೃತ್ಯ ಮಾಡಿ ಆ ಬಳಿಕ ಯಾವುದೇ ಸಾಕ್ಷಿಯನ್ನು ಉಳಿಸದೇ ಪೊಲೀಸರಿಗೆ ಸುಳ್ಳು ಹೇಳಿದ್ದು ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾನೆ.. ಅಂದಹಾಗೆ, ದಿಂದೋರಿ ಜಿಲ್ಲೆಯ ಶಹಾಪುರ (Dandori District Shahpur) ದಲ್ಲಿ ಉಪವಿಭಾಗಾಧಿಕಾರಿಯಾಗಿದ್ದ ನಿಶಾ ನಾಪಿತ್ (Nisha Napith) ತನ್ನ ಸೇವಾ ಪುಸ್ತಕ, ವಿಮೆ ಮತ್ತು ಬ್ಯಾಂಕ್ ಖಾತೆಯಲ್ಲಿ ತನ್ನನ್ನು ನಾಮಿನಿಯಾಗಿ ದಾಖಲಿಸದೇ ಇದ್ದದ್ದು ಈ ಘಟನೆಯೂ ನಡೆಯಲು ಕಾರಣ ಎನ್ನಲಾಗಿದೆ.

ಪತ್ನಿಯ ಸಹೋದರಿ ನಿರ್ಮಲಾ ನಾಪಿತ್ (Nirmala Napith) , ಮನೀಶ್ ಶರ್ಮಾ ವಿರುದ್ಧ ಕೊ-ಲೆ ಆರೋಪ ಹೊರಿಸಿ, ಹಣಕ್ಕಾಗಿ ಪತ್ನಿಯನ್ನು ಪೀ-ಡಿಸುತ್ತಿದ್ದ ಎಂದು ದೂರು ನೀಡಿದ್ದರು. ಅಕ್ಕನನ್ನು ಕಳೆದುಕೊಂಡ ನೋವಿನ ನಡುವೆಯೇ ಮೃ-ತ ವ್ಯಕ್ತಿಯ ಸಹೋದರಿಯು “ಹಣಕ್ಕಾಗಿ ನಿಶಾಗೆ ಕಿರುಕುಳ ನೀಡುತ್ತಿದ್ದ. ನಮ್ಮ ಅಕ್ಕನಿಗೆ ಯಾವುದೇ ಕಾಯಿಲೆ ಇರಲಿಲ್ಲ. ಮನೀಶ್ ಈ ಕೃ-ತ್ಯ ಎಸಗಿದ್ದಾನೆ. ಆಕೆಯ ನೆರವಿಗಾಗಿ ಆಕೆಯ ಕೋಣೆಗೆ ಹೋಗಲೂ ಬಿಡುತ್ತಿರಲಿಲ್ಲ” ಎಂದು ಸಹೋದರಿ ಆರೋಪ ಮಾಡಿದ್ದಾರೆ.

ಇದನ್ನೇ ಗಂಭೀರವಾಗಿ ತೆಗೆದುಕೊಂಡು ಆರೋಪಿ ಮನೀಶ್ ಶರ್ಮಾ (Manish Sharma) ದಿಂಬಿನ ಸಹಾಯದಿಂದ ಆಕೆಯನ್ನು ಉಸಿರುಗಟ್ಟಿಸಿ ಕಥೆ ಮುಗಿಸಿದ್ದಾನೆ. ಅದಲ್ಲದೇ, ರ-ಕ್ತಸಿಕ್ತ ಬಟ್ಟೆಗಳನ್ನು ತೊಳೆದು ಎಲ್ಲ ಸಾಕ್ಷಿಗಳನ್ನು ನಾಶ ಮಾಡಿದ್ದಾನೆ. ಕೊನೆಗೆ ಪೊಲೀಸರಿಗೆ ವಾಷಿಂಗ್ ಮೆಷಿಂಗ್ ನಿಂದ ಆರೋಪಿಯೂ ಸಿಕ್ಕಿಬಿದ್ದಿದ್ದಾನೆ. ಹೌದು, ಮನೆಯಲ್ಲಿದ್ದ ವಾಷಿಂಗ್ ಮೆಷಿನ್‍ನಲ್ಲಿ ದಿಂಬಿನ ಕವರ್ ಮತ್ತು ಬೆಡ್‍ಶೀಟ್ ಅನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕೊನೆಗೆ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ಅಸಲಿ ಸತ್ಯಗಳು ಹೊರ ಬಂದಿದೆ. ತನಿಖೆಯ ಬಳಿಕ ಆರೋಪಿಯೂ ಆತನೇ ಎನ್ನುವುದು ಖಾತರಿಯಾಗುತ್ತಿದ್ದಂತೆ ಶರ್ಮಾ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 302, 304ಬಿ ಮತ್ತು 201ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *