ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನಕ್ಕೂ ತಿರುವು ನೀಡುತ್ತದೆ. ಹೌದು, ಮದುವೆ ಎಂದರೆ ಹೆಣ್ಣಿರಲಿ ಗಂಡಿರಲಿ ಇವರಿಬ್ಬರ ಬದುಕಿನ ಹೊಸ ಅಧ್ಯಾಯದ ಆರಂಭ. ಇಲ್ಲಿ ಒಂದು ಗಂಡು ಒಂದು ಹೆಣ್ಣು ಜೊತೆಯಾಗಿ ಬದುಕುವುದು ಮಾತ್ರವಲ್ಲ. ಎರಡು ಕುಟುಂಬಗಳು ಒಂದಾಗುತ್ತವೆ. ಅಷ್ಟೇ ಅಲ್ಲದೇ ಕೆಲವು ಸಲ ಮದುವೆಯಾದ ಬಳಿಕ ಹೆಣ್ಣು ಮಕ್ಕಳು ಅಡುಗೆ ಮನೆಗೆ ಮಾತ್ರ ಸೀಮಿತವಾಗಿ ಬಿಡುತ್ತಾರೆ. ಆದರೆ ಇಲ್ಲೊಂದು ಜೋಡಿ ಮದುವೆಯ ಬಳಿಕ ಮಹತ್ತರ ಸಾಧನೆಯನ್ನು ಮಾಡಿದೆ. ಮದುವೆಯಾದ ಬಳಿಕ ಪತಿಯು ಪತ್ನಿಯನ್ನು ಏನು ಮಾಡಿದ್ದಾನೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ.
ಪತ್ನಿಯನ್ನು ಜೊತೆಯಾಗಿ ಮುನ್ನಡೆಸಿಕೊಂಡು ಹೋಗಿ ಒಳ್ಳೆಯ ಸ್ಥಾನಕ್ಕೆ ಏರಿಸಿದ ಜಯದೀಪ ಉದಾಹರಣೆಯಾಗಿದ್ದಾನೆ. ಜಯದೀಪ ತನ್ನ ಹುಟ್ಟೂರಿನ ಸೇವೆ ಮಾಡುವ ಹಂಬಲವಿತ್ತು. ಆದರೆ ಎರಡು ಸಲ ನೌಕರಿ ಬಂದರೂ ನೌಕರಿಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಊರಲ್ಲಿಯೇ ಹೋಂಡಾ ಕಂಪನಿಯ ಫ್ರೆಂಚಾಯಾಜಿ ತೆಗೆದುಕೊಂಡನು. ತದನಂತರದಲ್ಲಿ ರಾಜಕೀಯದಲ್ಲಿ ಸೇರಿ ತನ್ನೂರಾದ ಪಳಶಿಯ ಸರಪಂಚ್ ಆಗಿ ನೇಮಕಗೊಂಡನು.
ಊರಲ್ಲಿ ಸಾಕಷ್ಟು ಸುಧಾರಣೆ ತಂದನು. ಆದರೆ ಆ ವ್ಯಕ್ತಿ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ನಿವಾಸಿ ಜಯದೀಪ ಚಿಕ್ಕಂದಿನಿಂದಲೇ ಕಷ್ಟದ ಜೀವನದಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆದಿದ್ದನು. ಆದರೆ ಸಾತಾರಾ ಜಿಲ್ಲೆಯ ವಾಠಾರ್ ಎಂಬ ರೈಲ್ವೆ ಸ್ಟೇಶನ್ ನಲ್ಲಿ ಕಬ್ಬಿನ ಹಾಲು ಮಾರಿ ಜೀವನ ನಡೆಸುತ್ತಿದ್ದನು. ಈ ಸ್ಟೇಶನ್ ನಲ್ಲಿ ರೈಲು ಬರೀ ಮೂರು ನಿಮಿಷ ನಿಲ್ಲುತ್ತಿತ್ತು. ಆ ಮೂರು ನಿಮಿಷದಲ್ಲಿಯೇ 12 ರಿಂದ 15 ಗ್ಲಾಸ್ ಕಬ್ಬಿನ ಹಾಲನ್ನು ಮಾರಿ ಸ್ವಲ್ಪ ಹಣವನ್ನು ಸಂಪಾದನೆ ಮಾಡಿದನು.
ಹಾಗೇ ಆ ಹಣದಲ್ಲಿ ಬಹಳ ಪ್ರಯತ್ನ ಪಟ್ಟು ಎಂಪಿಎಸ್ ಸಿ ಪರೀಕ್ಷೆ ಬರೆದು ಅದರಲ್ಲಿ ಎರಡು ಸಲ ಪಾಸಾಗಿದ್ದು, ಒಂದು ಪಿಎಸ್ ಐ ಮತ್ತೊಂದು ಸಲ ಬೇರೆ ಪೋಸ್ಟ್ ಸಿಕ್ಕಿತು. ಆದರೆ ಆ ಕೆಲಸಕ್ಕೆ ಹೋಗಲು ಜಯದೀಪ ಮನಸ್ಸು ಮಾಡಲಿಲ್ಲ. ಹೀಗಿರುವಾಗ ಊರರವರು ನಾನಾ ರೀತಿ ಮಾತಾನಾಡಿಕೊಂಡರು. ಈ ವೇಳೆಯಲ್ಲಿ ಕಲ್ಯಾಣಿ ಹೆಸರಿನ ಯುವತಿಯ ಮೇಲೆ ಇಷ್ಟ ಆಯಿತು. ಹೆಣ್ಣು ಕೇಳಿದಾಗ ಕಲ್ಯಾಣಿಯ ಮನೆಯವರು ಹೆಣ್ಣು ಕೊಡಲು ನಿರಾಕರಿಸಿಬಿಟ್ಟರು.
ಕಲ್ಯಾಣಿಯ ತಂದೆ ಸಹಿತ ನೌಕರಿ ತ್ಯಜಿಸಿದ ಕಾರಣಕ್ಕಾಗಿ ಜಯದೀಪನ ಕಟುವಾಗಿಯೇ ಮಾತನಾಡಿಬಿಟ್ಟರು. ಕೊನೆಗೆ ಜಯದೀಪ ಮಾತ್ರ ಕಲ್ಯಾಣಿಯ ತಂದೆಗೆ ನಿಮ್ಮ ಮಗಳನ್ನು ಮದುವೆಯಾದ ಎರಡೇ ವರ್ಷಗಳಲ್ಲಿ ಪಿಎಸ್ ಐ ಮಾಡಿ ತೋರಿಸುವೆ ಎಂದು ಚಾಲೆಂಜ್ ಮಾಡಿಬಿಟ್ಟನು. ಕೊನೆಗೆ ಜಯದೀಪ ಹಾಗೂ ಕಲ್ಯಾಣಿಯ ಮದುವೆಯಾಯಿತು. ಮದುವೆ ಬಳಿಕ ಹನಿಮೂನಿಗೆ ಕರೆದೊಯ್ಯಲಿಲ್ಲ.
ಬದಲಾಗಿ ಆಕೆಗೆ ಒಂದು ಸ್ವತಂತ್ರ ರೂಮ್ ನೀಡಿ ಜೊತೆಗೆ ಕೆಲವು ಪುಸ್ತಕಗಳನ್ನು ನೀಡಿ ಹಾಗೆಯೇ ಅಭ್ಯಾಸ ಮಾಡಲು ಮಾಡಿಕೊಟ್ಟನು. ಪತ್ನಿಗೆ ತಾನೇ ಪಾಠ ಮಾಡುತ್ತಿದ್ದನು. ಎರಡು ವರ್ಷದ ಸಮಯದಲ್ಲಿ ಆಕೆಗೆ ಎಂಪಿ ಎಸ್ ಸಿ ಪರೀಕ್ಷೆ ಉತ್ತೀರ್ಣ ಮಾಡಲು ಎಲ್ಲಾ ತಯಾರಿ ಮಾಡಿದನು. ತದನಂತರದಲ್ಲಿ ಆಕೆಯ ಟ್ರೇನಿಂಗ್ ಪ್ರಾರಂಭವಾಯಿತು.
ಹೀಗಿರುವಾಗ ಕಲ್ಯಾಣಿ ತಂದೆ ಅಳಿಯನಿಗೆ, ಅಳಿಯರೆ ಹೋಂಡಾ ಶೋರೂಮ್ ವ್ಯವಸಾಯ ಚೆನ್ನಾಗಿ ನಡೆಯಿತು, ಊರಲ್ಲಿ ನೀವೇ ಸರಪಂಚ್, ಜನರು ನಮಸ್ಕಾರ ಮಾಡುತ್ತಾರೆ, ಹೆಂಡತಿ ಪಿಎಸ್ ಐ ಇನ್ನು ಯಾವ ಕನಸು ಬಾಕಿ ಉಳಿದಿದೆ? ಹೇಳಿಯೇ ಬಿಟ್ಟರು. ಆದರೆ ಅಳಿಯ ಜಯದೀಪನು, ಮಾವ ಎಲ್ಲವೂ ಸಿಕ್ಕರೂ ಇನ್ನೂ ಒಂದೇ ಒಂದು ಕನಸು ಬಾಕಿ ಉಳಿದಿದೆ ಅದನ್ನಿಷ್ಟು ಮಾಡಬೇಕಾಗಿದೆ ಎಂದಾಗ.

ಅದು ಯಾವುದು ಎಂದು ಮಾವ ಕೇಳಿದನು. ಕಲ್ಯಾಣಿ ಟ್ರೇನಿಂಗ್ ಮುಗಿಸಿ ಬಂದ ಮೇಲೆ ಯೂನಿಫಾರ್ಮ್ ನಲ್ಲಿದ್ದಾಗ ಆಕೆಗೆ ಒಂದು ಸೆಲ್ಯೂಟ್ ಹೊಡೆಯುವ ಆಸೆ ಇದೆ ಎಂದನು. ಮಾವನಿಗೆ ಮಾಡಿದ ಚಾಲೆಂಜ್ ಅನ್ನು ಅಳಿಯ ನಿಜ ಮಾಡಿದ್ದಾನೆ. ಆದರೆ ಇದೀಗ ಕಲ್ಯಾಣಿ ಮುಂಬಯಿ ಪೊಲೀಸ್ ನಲ್ಲಿ ಪಿಎಸ್ ಐ ಆಗಿ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತನ್ನ ಪತ್ನಿಯನ್ನು ಒಳ್ಳೆಯ ಹುದ್ದೆಗೆ ಅಲಂಕರಿಸಲು ಜಯದೀಪ ಮಾಡಿದ ಕೆಲಸನಿಜಕ್ಕೂ ಮೆಚ್ಚುವಂತಹದ್ದು.