ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯ ಖ್ಯಾತ ನಟಿ ಹರಿಣಿಯವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?

ಕನ್ನಡ ಕಿರುತೆರೆ ಲೋ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿರುವ ನಟಿಯರಲ್ಲಿ ನೋಡಲು ಯಂಗ್ ಆಗಿರುವ ನಟಿ ಹರಿಣಿ (Harini) ಕೂಡ ಒಬ್ಬರು. ಕಲರ್ಸ್ ಕನ್ನಡವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಥುನ ರಾಶಿ (Mithuna Rashi) ಧಾರವಾಹಿಯಲ್ಲಿ ಗಿರಿಜಾ ಪಾತ್ರದ ಮೂಲಕ ಪ್ರೇಕ್ಷಕವರ್ಗಕ್ಕೆ ಹತ್ತಿರವಾಗಿದ್ದಾರೆ. ಅದಲ್ಲದೆ ಕಳೆದ ಕೆಲವು ವರ್ಷಗಳಿಂದಲೂ ನಟನ ಬದುಕಿನಲ್ಲಿ ಸಕ್ರಿಯರಾಗಿದ್ದಾರೆ.

ಈ ಹಿಂದೆಯಷ್ಟೇ ಪತಿ ಶ್ರೀಕಾಂತ್ (Shreekanth) ಜೊತೆಗೆ ರಾಜಾ ರಾಣಿ (Raja Rani) ಶೋನಲ್ಲಿ ಭಾಗವಹಿಸಿದ್ದರು. ಈ ಶೋ ಬಳಿಕ ನಟಿ ಹರಿಣಿ ಪತಿ ಶ್ರೀಕಾಂತ್ ಕೂಡ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಹರಿಣಿಯವರು ಪತಿ ಹಾಗೂ ಮಕ್ಕಳ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ನಟಿ ಹರಿಣಿಯವರ ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ.ಈ ಫೋಟೋದಲ್ಲಿ ನಟಿ ಹರಿಣಿ ದಂಪತಿಗಳು ಪೂಜಾ ಕಾರ್ಯದಲ್ಲಿ ತೊಡಗಿಕೊಂಡಿರುವುದನ್ನು ಕಾಣಬಹುದು.

ನಟಿ ಹರಿಣಿಯವರು ಶ್ರೀಕಾಂತ್ ಎಂಬುವವರನ್ನು ಮದುವೆಯಾಗಿದ್ದಾರೆ. ಇನ್ನು ಶ್ರೀಕಾಂತವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದು, ಈ ದಂಪತಿಗಳಿಗೆ ಅಭಿಮನ್ಯು (Abhimanyu) ಎಂಬ ಮುದ್ದಾದ ಮಗನಿದ್ದಾನೆ. ಅಭಿಮನ್ಯು ಬೆಂಗಳೂರಿನ ಶಾಲೆಯೊಂದರಲ್ಲಿ ಓದುತ್ತಿದ್ದು, ತಾಯಿಯಂತೆ ಓದುವುದರಲ್ಲಿ ಬಹಳ ಬುದ್ಧಿವಂತನಾಗಿದ್ದಾನೆ.

ನಟಿ ಹರಿಣಿಯವರು ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 2013 ರಲ್ಲಿ ತೆರೆಕಂಡ `ಭಜರಂಗಿ’ (Bhajarangi) ಚಿತ್ರದಲ್ಲಿ ಶಿವರಾಜಕುಮಾರ್ ಹೆಂಡತಿ ಪಾತ್ರವನ್ನು ನಿಭಾಯಿಸಿದರು. 2018 ರಲ್ಲಿ ತೆರೆಕಂಡ `ಪತಿಬೇಕು. ಕಾಮ್’ (Pathibeku.com) ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಮಿಂಚಿದರು. ಹೀಗೆ ಪೋಷಕ ಪಾತ್ರಗಳಲ್ಲಿ ಮಿಂಚಿರುವ ಹರಿಣಿ ನಟಿ ಮಾತ್ರವಲ್ಲದೇ ಗಾಯಕಿ ಹಾಗೂ ಭರತನಾಟ್ಯ ಡಾನ್ಸರ್ ಕೂಡ ಹೌದು.

ನಟಿ ಹರಿಣಿಯವರ ಪ್ರಾರಂಭದ ದಿನಗಳ ಬಗ್ಗೆ ಹೇಳುವುದಾದರೆ, 1994 ರಲ್ಲಿ ದೂರದರ್ಶನ (Duradarshan) ದಲ್ಲಿ ನಿರೂಪಣೆ ಮಾಡುವ ಮೂಲಕ ಎಂಟ್ರಿ ಕೊಟ್ಟರು. ಕಿರುತೆರೆ ಲೋಕದಲ್ಲಿಯೂ ಅವಕಾಶ ಗಿಟ್ಟಿಸಿಕೊಂಡ ಇವರು, ಪುಟ್ಟಗೌರಿ ಮದುವೆ, ನಾಗಿಣಿ, ಅರುಂಧತಿ, ಬಲು ಸೂಪರ್ ನಮ್ ಜೋಡಿ, ಸಾಗರ ಸಂಗಮ, ಆತ್ಮ, ಮಿಂಚು ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿದರು.

ಅಂಜನಿಪುತ್ರ, ಮಂಗಳವಾರ ರಜಾದಿನ, ಜೈ ಮಾರುತಿ 800, ಸಂಜು ವೆಡ್ಸ್ ಗೀತಾ, ಮೀರಾ ಮಾಧವ ಸೇರಿದಂತೆ ಅನೇಕ ಸಿನಿಮಾಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಕಿರುತೆರೆಲೋಕದ ನೆಚ್ಚಿನ ಅಮ್ಮ ಎನ್ನುವ ಟ್ಯಾಗ್ ಲೈನ್ ಅನ್ನು ಪಡೆದುಕೊಂಡಿದ್ದಾರೆ. ಹೀಗೆ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಆಫರ್ ಗಳು ಬರುತ್ತಿದ್ದು, ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ ಎನ್ನಬಹುದು.

Leave a Reply

Your email address will not be published. Required fields are marked *