ಯುವಕನ ಬಳಿಯಿದ್ದ ಹಣವನ್ನು ದೋಚಿದ ಯುವತಿ, ಪ್ರೇಮಿಗೆ ಪಂಗನಾಮ ಹಾಕಿದ ಯುವತಿ, ಇಲ್ಲಿದೆ ನೋಡಿ ಅಸಲಿ ವಿಚಾರ

ಪ್ರೀತಿ ಪ್ರೇಮದ ವಿಚಾರದಲ್ಲಿ ನಂಬಿಕೆಗೆ ಅರ್ಥ ಇಲ್ಲ ಎನ್ನುವ ಕಾಲವಾಗಿದೆ. ತನ್ನ ಪ್ರೇಮಿಯನ್ನು ಭೇಟಿಯಾಗಲು ಹೋಗಿ ಪಂಗನಾಮ ಹಾಕಿಕೊಂಡ ಘಟನೆಯೊಂದು ಮಹಾರಾಷ್ಟ್ರ (Maharastra) ದ ಥಾಣೆ (Thane) ಯ ಶಹಾಪುರ ಹೆದ್ದಾರಿ (Shahpur Highway)ಯಲ್ಲಿ ನಡೆದಿದೆ. ತನ್ನ ಪ್ರೇಮಿಯನ್ನು ಭೇಟಿ ಮಾಡಲು ಯುವಕನು ಹೋಗಿದ್ದಾನೆ. ಪ್ರೇಯಸಿಯೂ ನಾಲ್ಕು ಮಂದಿ ಯುವಕರ ಜೊತೆ ಸೇರಿಕೊಂಡು, ಈ ಯುವಕನ ಬಳಿಯಿದ್ದ ಲಕ್ಷಾಂತರ ರೂಪಾಯಿ ದೋಚಿದ್ದಾಳೆ. ಅಷ್ಟೇ ಅಲ್ಲದೇ, ಯುವಕನ ಮೇಲೆ ಹ-ಲ್ಲೆ ನಡೆಸಿದ್ದಾಳೆ. ಕೊನೆಗೆ ಯುವಕನನ್ನು ಶಹಾಪುರ ಹೆದ್ದಾರಿಯಲ್ಲಿ ಆತನನ್ನು ಬೆ-ತ್ತಲೆಯಾಗಿ ನೂಕಿದ್ದಾಳೆ.

ಶಹಾಪುರ ನಿವಾಸಿಯಾಗಿರುವ ಬಾಲಾಜಿ ಶಿವಭಗತ್ (Balaji Shivabhagath) ಎಂಬ ಪ್ರೇಮಿಯಿಂದಲೇ ಹ-ಲ್ಲೆಗೊಳಗಾಗಿದ್ದು, ಈ ಯುವಕನ ಪ್ರೇಮಿಯೂ ಭವಿಕಾ ಭೋಯಿರ್ (Bavika Bhoyir). ಆದರೆ ಹಣವನ್ನು ಕಳೆದುಕೊಂಡು ಹೆದ್ದಾರಿಯಲ್ಲಿ ಬಿದ್ದಿದ್ದ ಯುವಕ ಬಾಲಾಜಿ ಪೊಲೀಸ್ ಠಾಣೆಗೆ ತೆರಳಿ ನಡೆದ ಎಲ್ಲಾ ವಿಚಾರವನ್ನು ತಿಳಿಸಿದ್ದಾನೆ. ಆ ವೇಳೆಯಲ್ಲಿ ಸ್ನೇಹಿತರಿಗೆ ಕರೆ ಮಾಡಿದ್ದಾನೆ. ಕೊನೆಗೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡುತ್ತಿದ್ದಾರೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಾಜಿಯೂ ನಡೆದ ಘಟನೆಯಿಂದ ಅಘಾತಕ್ಕೆ ಒಳಗಾಗಿದ್ದಾನೆ.

ಪ್ರೇಯಸಿಯಿಂದ ದುಡ್ಡು ಕಳೆದುಕೊಂಡ ಯುವಕ ಬಾಲಾಜಿ (Balaji)ಯೂ ಎಲ್ಲದನ್ನು ವಿವರಿಸಿದ್ದು, “ನಾನು ಆಕೆಗಾಗಿ ಎಲ್ಲವನ್ನೂ ಮಾಡಿದ್ದೆ. ಆಕೆಯ ಇಷ್ಟದಂತೆ ಪುಟ್ಟದೊಂದು ಮನೆ ಕೂಡ ಕಟ್ಟಿಕೊಟ್ಟಿದ್ದೆ. ಎಲ್ಲಾ ಸಮಯವೂ ಆಕೆಗೆ ಶಾಪಿಂಗ್ ಮಾಡಿಸುತ್ತಿದ್ದೆ. ಆಕೆಯ ಆಸೆಯೇ ನನಗೆ ಅಪ್ಪಣೆಯಂತೆ ಇತ್ತು. ಬೇರೆ ವ್ಯಕ್ತಿಗಾಗಿ ಅವಳು ನನಗೆ ದ್ರೋಹ ಎಸಗಿದ್ದಾಳೆ. ನನ್ನನ್ನು ಭಯಾನಕವಾಗಿ ಹೊಡೆದಿದ್ದಾಳೆ” ಎಂದಿದ್ದಾನೆ.

“ಸೀರೆ, ಚಿನ್ನದ ಓಲೆಗಳು, ಚಿನ್ನದ ಕಾಲ್ಚೈನುಗಳು, ಹೊಸ ಮಾನ್ಸೂನ್ ಶೂ ಹಾಗೂ ಚತ್ರಿ ಸೇರಿದಂತೆ ತನಗಾಗಿ ಹಲವು ಉಡುಗೊರೆಗಳನ್ನು ತಂದುಕೊಡುವಂತೆ ಭವಿಕಾ ಕೇಳಿದ್ದಳು. ನಾನು ಈ ಎಲ್ಲಾ ಉಡುಗೊರೆಗಳನ್ನು ಖರೀದಿಸಿ ಆಕೆ ಹೇಳಿದ ಸ್ಥಳಕ್ಕೆ ತೆರಳಿದ್ದೆ. ಅಟ್ಗಾನ್ ಹೆದ್ದಾರಿಯಲ್ಲಿ ನನ್ನ ಕ್ರೆಟಾ ಕಾರ್‌ನಲ್ಲಿ ಕುಳಿತ ಆಕೆ ಎಲ್ಲಾ ಉಡುಗೊರೆಗಳನ್ನು ತೆಗೆದುಕೊಂಡಿದ್ದಳು. ಹಠಾತ್ತನೆ ನಾಲ್ಕು ಮಂದಿ ಕಾರಿನ ಒಳಗೆ ನುಗ್ಗಿದ್ದರು. ಅವರಲ್ಲಿ ಮೂವರು ನನಗೆ ಅಪರಿಚಿತರು. ನನ್ನನ್ನು ಪಕ್ಕಕ್ಕೆ ತಳ್ಳಿ ಚಾಪರ್‌ನಿಂದ ನನ್ನ ತಲೆಗೆ ಬಾರಿಸಿದರು. ಅವರಲ್ಲಿ ಒಬ್ಬಾತ ಕಾರು ಡ್ರೈವ್ ಮಾಡಲು ಆರಂಭಿಸಿದ” ಎಂದು ಹೇಳಿದ್ದಾನೆ.

ಪೊಲೀಸ್ ಅಧಿಕಾರಿ (Police Officer) ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು , “ಜೂನ್ 28ರಂದು ಸಂಜೆ 4.30ರ ವೇಳೆಗೆ ಶಹಾಪುರದ ಅಟ್ಗಾನ್ ಹೆದ್ದಾರಿಯಲ್ಲಿನ ಸ್ಥಳವೊಂದಕ್ಕೆ ಬರುವಂತೆ ಬಾಲಾಜಿಗೆ ಭವಿಕಾ ಕರೆ ಮಾಡಿದ್ದಳು. ಅವರಿಬ್ಬರೂ ಅಲ್ಲಿ ಮಾತನಾಡುತ್ತಾ ಇದ್ದಾಗ, ಇದ್ದಕ್ಕಿದ್ದಂತೆ ನಾಲ್ಕು ಮಂದಿ ಅಲ್ಲಿಗೆ ಬಂದಿದ್ದಾರೆ. ಆತನನ್ನು ಹಿಡಿದು ಮರುದಿನ ಬೆಳಿಗ್ಗೆವರೆಗೂ ಹೊಡೆದು ಚಿತ್ರ ಹಿಂಸೆ ನೀಡಿದ್ದಾರೆ. ಆತನ ಬಟ್ಟೆಗಳನ್ನು ಕಳಚಿ, ಮರುದಿನ ಮುಂಜಾನೆ ಶಹಾಪುರ ಹೆದ್ದಾರಿಯಲ್ಲಿ ಬೆತ್ತಲಾಗಿ ಎಸೆದು ಹೋಗಿದ್ದಾರೆ” ಎಂದಿದ್ದಾರೆ.

ಶಹಾಪುರ ಪೊಲೀಸ್ ಠಾಣೆ (Shahapura Police Station) ಯ ಹಿರಿಯ ಇನ್‌ಸ್ಪೆಕ್ಟರ್ ರಾಜ್‌ಕುಮಾರ್ ಉಪಾಸೆ (Senior Inspector Rajkumar Upase) ಮಾಹಿತಿ ನೀಡಿದ್ದು, “ಈ ಆರೋಪಿಗಳು ಬಾಲಾಜಿಯನ್ನು ಮುಚ್ಚಿದ್ದ ಅಪರಿಚಿತ ರೆಸ್ಟೋರೆಂಟ್ ಒಂದರ ಒಳಗೆ ಕರೆದೊಯ್ದಿದ್ದರು. ಅಲ್ಲಿ ಮರುದಿನ ಬೆಳಿಗ್ಗೆಯವರೆಗೂ ಹಲ್ಲೆ ನಡೆಸಿದ್ದರು. ತನ್ನ ಬಟ್ಟೆಗಳನ್ನು ಕಳಚಿದ ಬಳಿಕ ಆರೋಪಿಗಳು ವಿಡಿಯೋಗಳನ್ನು ಮಾಡಿದ್ದಾರೆ. ಆತನ ಎರಡು ಚಿನ್ನದ ಸರಗಳು, ಏಳು ಉಂಗುರಗಳನ್ನು ತೆಗೆದುಕೊಂಡು ಬೆಳಿಗ್ಗೆ 5 ಗಂಟೆ ಸುಮಾರಿಗೆ ಆತನ ಕಣ್ಣುಗಳಿಗೆ ಖಾರದ ಪುಡಿ ಎರಚಿ ಪರಾರಿಯಾಗಿದ್ದಾರೆ” ಎಂದಿದ್ದಾರೆ.

ಈಗಾಗಲೇ ಈ ಐವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 365 ಹಾಗೂ 506 (ಅಪರಾಧ ಬೆದರಿಕೆ) ಹಾಗೂ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಾಜಿ ಪ್ರೇಯಸಿ ಭವಿಕಾ ಜೊತೆಗೆ ಮತ್ತೊಬ್ಬ ಆರೋಪಿಯನ್ನು ನದೀಮ್ ಖಾನ್ (Nadim Khan) ಎನ್ನಲಾಗಿದೆ. ಸದ್ಯಕ್ಕೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುವಲ್ಲಿ ಕಾರ್ಯನಿರತರಾಗಿದ್ದಾರೆ.

Leave a Reply

Your email address will not be published. Required fields are marked *