ದಕ್ಷಿಣ ಭಾರತದ ಖ್ಯಾತ ನಟ ಕಮ್ ನಿರ್ದೇಶಕ ಅರ್ಜುನ್ ಸರ್ಜಾ (Arjun Sarja) ರವರ ಮುದ್ದಿನ ಮಗಳು ಐಶ್ವರ್ಯ ಅರ್ಜುನ್ (Aishwarya Arjun) ಅವರು ಎಲ್ಲರಿಗೂ ಕೂಡ ಚಿರಪರಿಚಿತರು. ವಿಶಾಲ್ ಅಭಿನಯದ ಪಟ್ಟತ್ತು ಯಾನೈ (Pattattu Yanai) ಚಿತ್ರದ ಮೂಲಕ ತಮಿಳಿನಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದ ಐಶ್ವರ್ಯಾರವರು ನಾಯಕಿಯಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರು. ಸದ್ಯದಲ್ಲೇ ನಟಿ ಐಶ್ವರ್ಯ ಅರ್ಜುನ್ ಅವರು ಪ್ರೀತಿಸಿದ ಹುಡುಗನ ಕೈ ಹಿಡಿಯಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟಿ ಐಶ್ವರ್ಯ ಅರ್ಜುನ್ ಅವರು ಉಮಾಪತಿ (Umapati) ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಚೆನ್ನೈನಲ್ಲಿ ಅರ್ಜುನ್ ಸರ್ಜಾ (Arjun Sarja) ನಿರ್ಮಿಸಿರುವ ಅರ್ಜುನ್ ಸರ್ಜಾ ಅವರ ಆರಾಧ್ಯ ದೈವ ಆಂಜನೇಯ (Anjaneya) ನ ದೇವಸ್ಥಾನದಲ್ಲಿರುವ ಸೀತಾರಾಮರ ಸನ್ನಿಧಾನದಲ್ಲಿ ಐಶ್ವರ್ಯ ಹಾಗೂ ಉಮಾಪತಿ (Umapati) ಅವrರು ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.
ಐಶ್ವರ್ಯಾ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಅವರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಇದೀಗ ಹಿರಿಯರ ಒಪ್ಪಿಗೆ ಪಡೆದು ವಿವಾಹ ಮಾಡಿಕೊಳ್ಳಲು ಸಜ್ಜಾಗಿದ್ದು ಡಿಸೆಂಬರ್ (December) ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ನಟಿ ಐಶ್ವರ್ಯ ಹಾಗೂ ನಟ ಉಮಾಪತಿ ರಾಮಯ್ಯರವರ ಎಂಗೇಜ್ಮೆಂಟ್ ಫೋಟೋಗಳು (Photos) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಉಮಾಪತಿ ರಾಮಯ್ಯರವರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದು, 2017ರಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟರು. ಈವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದು, ಸರ್ವೈವರ್ ತಮಿಳ್ (Survivor Tamil) ಎಂಬ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು. ಉಮಾಪತಿ ರಾಮಯ್ಯರವರ ತಂದೆ ತಂಬಿ ರಾಮಯ್ಯ (Tambi Ramayya) ರವರು ಜನಪ್ರಿಯ ನಟರಾಗಿದ್ದು ಆದರೆ ತಮ್ಮ ಮುದ್ದಿನ ಸೊಸೆಗೆ ಮದುವೆಗೆ ಮುನ್ನವೇ ಕಂಡೀಷನ್ (Condition) ಹಾಕಿದ್ದು ನಟಿ ಐಶ್ವರ್ಯರವರು ಆ ಕಂಡೀಷನ್ ಗೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಯೊಂದು ಸದ್ಯಕ್ಕೆ ಹರಿದಾಡುತ್ತಿವೆ.
ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಐಶ್ವರ್ಯ ಅರ್ಜುನ್ ಅವರಿಗೆ ನಟ ತಂಬಿ ರಾಮಯ್ಯನವರು ಮದುವೆಯ ಬಳಿಕ ಸಿನಿಮಾದಲ್ಲಿ ನಟಿಸಬಾರದು ಎನ್ನುವ ಷರತ್ತನ್ನು ಹಾಕಿದ್ದಾರೆ ಎನ್ನಲಾಗುತ್ತಿದೆ. ಮಾವ ತಂಬಿ ರಾಮಯ್ಯನವರ ಈ ಷರತ್ತಿಗೆ ಐಶ್ವರ್ಯಾ ಕೂಡ ಒಪ್ಪಿಕೊಂಡಿದ್ದು, ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ. ಆದರೆ ಈ ಷರತ್ತಿನ ಸುದ್ದಿಯು ಎಷ್ಟರ ಮಟ್ಟಿಗೆ ನಿಜ ಎನ್ನುವುದನ್ನು ಕಾದು ನೋಡಬೇಕು ಅಷ್ಟೇ.