ತೆಲುಗು ಬಿಗ್​ಬಾಸ್ ಸೀಸನ್ 7 ವಿನ್ನರ್ ಪಲ್ಲವಿ ಪ್ರಶಾಂತ್ ಗೆ ಜೈಲಿನ ಭೀತಿ, ತಲೆಮರೆಸಿಕೊಂಡಿದ್ದಾರಾ ಯುವ ರೈತ? ಈತ ಮಾಡಿದ್ದೇನು ಗೊತ್ತಾ? ಇಲ್ಲಿದೆ ನೋಡಿ!!

ತೆಲುಗು ಬಿಗ್​ಬಾಸ್ ಸೀಸನ್ 7 ರ (BiggBoss Sisan 7) ಗ್ರ್ಯಾಂಡ್ ಫಿನಾಲೆ ಇದೇ ಶನಿವಾರ ನಡೆದಿದ್ದು, ಕೊನೆಗೂ ಯಾರು ವಿನ್ನರ್ ಎನ್ನುವುದು ವೇದಿಕೆಯ ಮೇಲೆ ಘೋಷಣೆಯಾಗಿತ್ತು. 105 ದಿನಗಳ ಕಾಲ ನಡೆದ ರಿಯಾಲಿಟಿ ಶೋನಲ್ಲಿ ಅಂತಿಮವಾಗಿ ರೈತ ಯುವಕ ಪಲ್ಲವಿ ಪ್ರಶಾಂತ್ ಅವರು ವಿನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ರೈತ ಯುವಕ, ಬಡ ಮಧ್ಯಮ ವರ್ಗದ ಯುವಕನಾಗಿದ್ದ ಪಲ್ಲವಿ ಪ್ರಶಾಂತ್ (Pallavi Prashanth) ಅವರು ಬಿಗ್ ಬಾಸ್ ಮನೆಯಲ್ಲಿ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದರು. ವಿನ್ನರ್ ಪಟ್ಟವನ್ನು ಗಳಿಸಿದ್ದು, ಆದರೆ ಅಮರ್‌ದೀಪ್ (Amar deep) ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇದೇ ವೇಳೆಯಲ್ಲಿ ವಿನ್ನರ್ ಮತ್ತು ರನ್ನರ್ ಅಪ್ ಫ್ಯಾನ್ಸ್‌ಗಳ ನಡುವೆ ಭಾರಿ ಜಗಳವು ನಡೆದಿದೆ.

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಂತರ ಅನ್ನಪೂರ್ಣ ಸ್ಟುಡಿಯೋದಲ್ಲಿ ಗಲಾಟೆ ಸೃಷ್ಟಿಸಿ ವಾಹನಗಳಿಗೆ ಹಾನಿ ಮಾಡಲಾಗಿದೆ. ವಿನ್ನರ್ ಪಲ್ಲವಿ ಪ್ರಶಾಂತ್ ಅನ್ನು ಅದ್ಧೂರಿಯಾಗಿ ಮೆರವಣಿಗೆಯನ್ನೂ ಮಾಡಿದ್ದಾರೆ. ಈ ವೇಳೆಯಲ್ಲಿ ಕೆಲವು ಪುಂಡ ಅಭಿಮಾನಿಗಳು ಸರ್ಕಾರಿ ಬಸ್ಸುಗಳ ಮೇಲೆ ಕ-ಲ್ಲು ತೂರಿದ್ದು ಇದರಿಂದಾಗಿ ಸುಮಾರು ಆರು ಬಸ್ಸಿಗಳಿಗೆ ಹಾ-ನಿ ಕೂಡ ಆಗಿದೆ. ಅದಲ್ಲದೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರವನ್ನು ಕೂಡ ಮಾಡಿದ್ದು, ಪರಿಸ್ಥಿತಿಯು ಬಿಗಾಡಯಿಸಿದೆ. ಅದಲ್ಲದೆ, ವಿರುದ್ಧ 9 ಸೆಕ್ಷನ್‌ಗಳ ಅಡಿಯಲ್ಲಿ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಅದಲ್ಲದೇ ಅನುಮತಿ ಪಡೆಯದೆ ಮೆರವಣಿಗೆ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಕೇಸ್​ ದಾಖಲಿಸಿದ್ದು, ಇದರಲ್ಲಿ ಪಲ್ಲವಿ ಪ್ರಶಾಂತ್ (Pallavi Prashant) ಮೊದಲ ಆ-ರೋಪಿಯಾದರೆ, ಸಹೋದರ ಮನೋಹರ್ (Manohar) ಹಾಗೂ ಸ್ನೇಹಿತ ವಿನಯ್ (Vinay) ಇಬ್ಬರೂ ಎರಡು ಹಾಗೂ ಮೂರನೇ ಆ-ರೋಪಿಯಾಗಿದ್ದಾರೆ.ಈಗಾಗಲೇ ಇಬ್ಬರೂ ಆರೋಪಿಗಳಾದ ಮನೋಹರ್, ವಿನಯ್​ನನ್ನು ಪೊಲೀಸರು ಬಂ-ಧಿಸಿದ್ದಾರೆ.

ಇತ್ತ ತೆಲುಗು ಬಿಗ್​ ಬಾಸ್​ ಸೀಸನ್​-7ರ ವಿನ್ನರ್​ ಪಲ್ಲವಿ ಪ್ರಶಾಂತ್ ಅವರು ಬಂಧನದ ಭೀ-ತಿಯು ಎದುರಾಗಿದ್ದು, ಈ ಗಲಾಟೆಯ ಬಳಿಕ ಪಲ್ಲವಿ ಸಂತೋಷ್ ಅವರು ತ-ಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಹಾನಿಗೊಳಗಾಗಿರುವ ಬಸ್ಸುಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಎಸ್ ಆರ್ ಟಿಸಿ ಉನ್ನತಾಧಿಕಾರಿ ವಿಸಿ ಸಜ್ಜನರ್ (VC Sajjanar), ”ಬಿಗ್ ಬಾಸ್ 7 ರ ಫಿನಾಲೆ ವೇಳೆ, ಹೈದರಾಬಾದ್‌ನ ಕೃಷ್ಣನಗರ ಅನ್ನಪೂರ್ಣ ಸ್ಟುಡಿಯೋ ಬಳಿ ಭಾನುವಾರ ರಾತ್ರಿ ಕೆಲವರು ಟಿಎಸ್​ಆರ್​ಟಿಸಿ ಬಸ್‌ಗಳ ಮೇಲೆ ದಾ-ಳಿ ಮಾಡಿದ್ದಾರೆ.

ಈ ದಾಳಿಯಲ್ಲಿ 6 ಬಸ್‌ಗಳಿಗೆ ಹಾ-ನಿಯಾಗಿದೆ. ಘಟನೆ ಕುರಿತು ಆರ್‌ಟಿಸಿ ಅಧಿಕಾರಿಗಳು ಜುಬ್ಲಿ ಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ.ದೂರಿನನ್ವಯ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಭಿಮಾನದ ಹೆಸರಿನಲ್ಲಿ ಮಾಡುವ ಹುಚ್ಚುತನ ಸಮಾಜಕ್ಕೆ ಒಳ್ಳೆಯದಲ್ಲ.

ಜನರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ಕರೆದೊಯ್ಯುವ ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ಮಾಡುವುದು ಸಮಾಜದ ಮೇಲಿನ ದಾಳಿಯಾಗಿದೆ. ಇಂತಹ ಘಟನೆಗಳನ್ನು ಟಿಎಸ್‌ಆರ್‌ಟಿಸಿ ಆಡಳಿತ ಸಹಿಸುವುದಿಲ್ಲ. ಟಿಎಸ್​ಆರ್​ಟಿಸಿ ಬಸ್ಸುಗಳು ಸಾರ್ವಜನಿಕ ಆಸ್ತಿ. ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದಿದ್ದಾರೆ. ಈ ಪ್ರಕರಣವು ತೆಲುಗು ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅವರಿಗೆ ನುಂಗಲಾರದ ತುತ್ತಾಗಿರುವುದು ಮಾತ್ರ ನಿಜ.

Leave a Reply

Your email address will not be published. Required fields are marked *