ಫಾರಿನ್ ಟ್ರಿಪ್ ಎಂಜಾಯ್ ಮಾಡುತ್ತಿರುವ ತೆಲುಗು ನಟಿ ಕಮ್ ನಿರೂಪಕಿ ಅನಸೂಯಾ ಭಾರಧ್ವಜ್, ನಟಿಯ ಫೋಟೋ ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ!!!

ಸಿನಿಮಾ ಲೋಕದಲ್ಲಿ ತನ್ನ ಮಾದಕ ನೋಟದಿಂದಲೇ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಟಿ ಅನಸೂಯಾ (Anasuya). ಆಗಾಗ ಹಾಟ್ ವಿಡಿಯೋ ಹಾಗೂ ಫೋಟೋ ಶೂಟ್ (Photo Shoot) ಗಳ ಮೂಲಕ ಸುದ್ದಿಯಾಗುವ ನಟಿಗೆ ಬಾರಿ ಬೇಡಿಕೆಯಿದೆ. ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ನೋಡಲು ಯಾವ ಯುವ ನಟಿಗೂ ಕಡಿಮೆಯಿಲ್ಲ ಎನ್ನುವ ಹಾಗೆ ಇದ್ದಾರೆ. ಹದಿನೆಂಟರ ಯುವತಿಯಂತೆ ಕಾಣುವ ಅನಸೂಯಾರವರು ಕಿರುತೆರೆಯಲ್ಲಿ ಸುದ್ದಿ ವಾಚಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದು, ನಿರೂಪಕಿಯಾಗಲು ಸಾಕಷ್ಟು ಕಷ್ಟಪಟ್ಟಿದ್ದಾರೆ.

ಹೌದು, ಎಂಬಿಎಯಲ್ಲಿ ಎಚ್‌ಆರ್‌ ಪದವಿ ಪಡೆದುಕೊಂಡಿರುವ ಅನಸೂಯಾ ಬ್ಯಾಂಕಿನಲ್ಲಿ ಕೆಲಸದಲ್ಲಿದ್ದರು. ಕಾಮಿಡಿ ಶೋ (Comdey Show) ವೊಂದನ್ನು ನಿರೂಪಣೆ ಮಾಡುವ ಅವಕಾಶವೊಂದು ಒದಗಿ ಬಂದಿತು. ಜನಪ್ರಿಯ ಮನರಂಜನಾ ವಾಹಿನಿಯಲ್ಲಿ 2013 ರಲ್ಲಿ ಪ್ರಾರಂಭವಾದ ಹಾಸ್ಯ ಕಾರ್ಯಕ್ರಮಕ್ಕೆ ಅನಸೂಯ ಅವರು ನಿರೂಪಕಿಯಾದರು. ಬಳಿಕ ಸಿನಿಮಾದಲ್ಲಿ ನಟಿಸುವ ಅವಕಾಶವು ಸಿಕ್ಕಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಇಂದು ಸೆಲೆಬ್ರಿಟಿಯಾಗಿದ್ದಾರೆ.

ತೆಲುಗು ಸಿನಿಮಾರಂಗದಲ್ಲಿ ನಟಿಯಾಗಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನಸೂಯಾರವರು ಬ್ಯುಸಿಯಾಗಿದ್ದಾರೆ. ಸಿನಿ ಕೆರಿಯರ್ ಬ್ಯುಸಿ ನಡುವೆ ಸುದ್ದಿಯಲ್ಲಿರುವ ನಟಿ ಇದೀಗ ವಿದೇಶಕ್ಕೆ ಹಾರಿದ್ದಾರೆ. ಆಯಂಕರ್ ಅನಸೂಯಾ ಸದ್ಯ ವೆಕೇಷನ್ (Vacation) ಎಂಜಾಯ್ ಮಾಡುತ್ತಿದ್ದು, ಆನಿವರ್ಸರಿ ಸೆಲೆಬ್ರೇಶನ್ ಗಾಗಿ ವಿದೇಶ ಪ್ರವಾಸದಲ್ಲಿದ್ದಾರೆ.

ವಿದೇಶದಲ್ಲಿ ಪತಿ ಹಾಗೂ ಮಕ್ಕಳ ಜೊತೆಯಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿಯೂ ಅನಸೂಯರವರು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಮುದ್ರ ತೀರದಲ್ಲಿ ಪತಿಯ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಡಲ ತೀರದಲ್ಲಿ ಪತಿಯ ಜೊತೆಗೆ ರೋಮ್ಯಾನ್ಸ್ ಮಾಡಿದ್ದಾರೆ.

 

View this post on Instagram

 

A post shared by Anasuya Bharadwaj (@itsme_anasuya)

ಫಾರಿನ್ ಪ್ರವಾಸದ ವೇಳೆಯಲ್ಲಿ ಪತಿಗೆ ಲಿಪ್ ಕಿಸ್ (Lip Kiss) ಮಾಡಿದ್ದಾರೆ. ತೆಲುಗು ನಟಿ ಕಮ್ ನಿರೂಪಕಿ ಅನಸೂಯಾರವರ ಟ್ರಿಪ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಸದ್ಯಕ್ಕೆ ನಟಿ ಅನಸೂಯಾ ಭಾರಧ್ವಜ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ 2 (Pushpa 2) ಸಿನಿಮಾದಲ್ಲಿ ನಟಿಸುತ್ತಿದ್ದು, ಇನ್ನು ಕೆಲವು ಸಿನಿಮಾಗಳಿಗೆ ಸಹಿ ಮಾಡಿದ್ದು, ಬ್ಯುಸಿಯಾಗಿದ್ದಾರೆ. ಹಾಟ್ ಬೆಡಗಿ ಅನಸೂಯಾರವರಿಗೆ ಇನ್ನಷ್ಟು ಅವಕಾಶಗಳು ಲಭಿಸಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *