ಪತಿ ಹಾಗೂ ಮಗಳ ಜೊತೆಗೆ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡ ಕಿರುತೆರೆ ನಟಿ ರೇಖಾ ಕೃಷ್ಣಪ್ಪ, ನಟಿಯ ಮಗಳ ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು ನೋಡಿ ಅದ್ಭುತ ಎರಡು ಕಣ್ಣು ಸಾಲದು !!

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ತಮ್ಮನ್ನು ತೊಡಗಿಸಿಕೊಂಡಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಗುರುತಿಸಿಕೊಂಡಿರುವರಲ್ಲಿ ನಟಿ ರೇಖಾ ಕೃಷ್ಣಪ್ಪ ಕೂಡ ಒಬ್ಬರು. ನಟಿ ರೇಖಾ ಕೃಷ್ಣಪ್ಪ (Rekhaa Krishanappa) ಅವರು ಕನ್ನಡದ ಕಿರುತೆರೆಯ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಮಿಂಚಿದವರು. ರೇಖಾ ಕೃಷ್ಣಪ್ಪ ಅವರ ಪತಿಯೂ ಕಿರುತೆರೆ ನಟನಾಗಿದ್ದು, ಇವರ ಹೆಸರು ವಸಂತ್ ಕುಮಾರ್ (Vasanth Kumar). ಇವರು ಕೂಡ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಲಕ್ಷ್ಮೀ ಬಾರಮ್ಮ (Lakshmi Baramma) ಧಾರವಾಹಿಯಲ್ಲಿ ಗೊಂಬೆಯ ತಂದೆ ಕೈಲಾಶ್ ಪಾತ್ರದಲ್ಲಿ ವಸಂತ್ ಕುಮಾರ್ ಕಾಣಿಸಿಕೊಂಡಿದ್ದರು.

ಇದೀಗ ನಟಿ ರೇಖಾ ಕೃಷ್ಣಪ್ಪನವರ ಕುಟುಂಬದ ವಿಶೇಷ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋವು ಮಗಳ ಬರ್ತ್ಡೇ ಸೆಲೆಬ್ರೇಶನ್ (Birthday Celebration) ವೇಳೆ ತೆಗೆದ ಫೋಟೋ ಇದಾಗಿದ್ದು, ಈ ಫೋಟೋದಲ್ಲಿ ತಾಯಿ ಮಗಳು ಮಾಡ್ರನ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಟಿ ರೇಖಾ ಕೃಷ್ಣಪ್ಪನವರ ಹಿನ್ನಲೆಯನ್ನು ಗಮನಿಸುವುದಾದರೆ, ಬೆಂಗಳೂರಿನಲ್ಲಿ ಹುಟ್ಟಿದ ಇವರು ಎಂಬಿಎ (MBA) ಪದವಿಧರೆ. ಬದುಕಿಗಾಗಿ ನಂಬಿಕೊಂಡದ್ದು ಬಣ್ಣದ ಲೋಕವನ್ನು. ಕನ್ನಡದ ಖ್ಯಾತ ಕಿರುತೆರೆ ನಿರ್ದೇಶಕ ಟಿ ಎನ್ ಸೀತಾರಾಮ್ (T.N Seetharam) ಅವರ ಮಾಯಾಮೃಗ (Mayamruga) ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು.ಆದಾದ ಬಳಿಕ ವರ್ಷಗಳ ಕೊಂಚ ಗ್ಯಾಪ್ ನಂತರ ಮತ್ತೆ ಈ ಕಿರುತೆರೆಗೆ ಮರಳಿದರು.

ಈಗಾಗಲೇ, ನಟಿ ರೇಖಾ ಕೃಷ್ಣಪ್ಪ ಅವರು ಸುಮಾರು 40ಕ್ಕೂ ಹೆಚ್ಚು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ (Kannada), ತಮಿಳು (Tamil), ತೆಲುಗು (Telugu) ಹಾಗೂ ಮಲಯಾಳಂ (Malayalam) ಸೇರಿದಂತೆ ಅನೇಕ ಸೀರಿಯಲ್ ಗಳಲ್ಲೂ ಇವರು ಪಾತ್ರವನ್ನೂ ನಿಭಾಯಿಸಿದ್ದಾರೆ.

ರೇಖಾ ಕೃಷ್ಣಪ್ಪ ಹೆಚ್ಚಾಗಿ ವಿಲನ್ ಹಾಗೂ ನೆಗೆಟಿವ್ ಶೇಡ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಈ ಹಿಂದೆಯೊಮ್ಮೆ ಸಾವಿನ ಕುರಿತಾಗಿ ಕೆಲವು ವದಂತಿಗಳು ಹಬ್ಬಿದ್ದವು. ಈ ಕುರಿತಾಗಿ ರೇಖಾ ಕೃಷ್ಣಪ್ಪ ಅವರು ‘ನಾನೂ ಜೀವಂತವಾಗಿದ್ದು, ಪ್ರಸ್ತುತ ಕುಟುಂಬ ಸದಸ್ಯರೊಂದಿಗೆ ಶೃಂಗೇರಿಯಲ್ಲಿದ್ದೇನೆ ರೇಖಾ ಸಿಂಧು ಎಂಬ ಹೆಸರಿನ ಕಿರುತೆರೆ ನಟಿ ಸಾವನ್ನಪ್ಪಿದ ಬಳಿಕ ನನಗೆ ಸಾಕಷ್ಟು ಕರೆಗಳು ಬರುತ್ತಿವೆ ಎಂದಿದ್ದರು.

Leave a Reply

Your email address will not be published. Required fields are marked *