ಮೊದಲ ಮಗುವಿನ ನಿರೀಕ್ಷೆಯಲ್ಲಿ ಸತ್ಯ ಧಾರಾವಾಹಿ ಖ್ಯಾತಿಯ ಸಾಗರ್ ಬಿಳಿಗೌಡ ದಂಪತಿ, ಫ್ಯಾನ್ಸ್ ಫುಲ್ ಖುಷ್

ಕನ್ನಡ ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿರುವ ನಟ ಸಾಗರ್ ಬಿಳಿ ಗೌಡ (Sagar Bili Gowda) ಕಳೆದ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಇವರು ಇದೀಗ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಐದು ವರುಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಜೋಡಿ ಕಳೆದ ವರ್ಷ ಮದುವೆ ಎಂಬ ಮುದ್ರೆಯನ್ನು ಅಧಿಕೃತವಾಗಿ ಒತ್ತಿದ್ದರು.

ಆದರೆ ಈ ವರ್ಷದ ಪ್ರಾರಂಭದಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಸಾಗರ್ ಬಿಳಿ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಸಿರಿ ರಾಜು (Siri Raju) ತಮ್ಮ ಇನ್ಸ್ಟಾಗ್ರಾಮ್ (Instagram) ನಲ್ಲಿ ತಾನು ತಾಯಿ ಆಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿಗಳು ಇಬ್ಬರು ಮಗುವಿನ ಶೂ ಹಿಡಿದು ಕೊಂಡು ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಆ ಫೋಟೋದ ಕೆಳಗಡೆ , “ಪವಾಡಗಳಿಗೂ ಸಮಯ ಹಿಡಿಯುತ್ತದೆ “ಎಂಬ ಸಾಲನ್ನು ನಟಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಕೆಂಪು ಡ್ರೆಸ್ ನಲ್ಲಿ ಸಿರಿ ಮತ್ತು ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ತೊಟ್ಟಿದ್ದು, ಇವರಿಬ್ಬರ ಕೈಗಳು ಮತ್ತು ಅರ್ಧ ದೇಹ ಮಾತ್ರ ಕಾಣಿಸುತ್ತಿದೆ.

ಅದಲ್ಲದೇ ಈ ಜೋಡಿಯು ಕೈಗಳಲ್ಲಿ ಒಂದು ಪುಟ್ಟ ಶೂ ಹಿಡಿದುಕೊಂಡಿದ್ದಾರೆ. ಈ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇಪೂರವೇ ಹರಿದು ಬಂದಿದೆ. ಕನ್ನಡ ಕಿರುತೆರೆಯ ಸಾಗರ್ ಬಿಳಿ ಗೌಡ ಸತ್ಯ (Satya) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ನಟನೆಯ ಮೇಲಿನ ಆಸಕ್ತಿಯಿದ್ದ ಕಾರಣ ತರಬೇತಿಯನ್ನು ಪಡೆದು ನಟನ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಕಿನ್ನರಿ’ (Kinnari) ಧಾರಾವಾಹಿ ಮೂಲಕ ಮೊದಲ ಬಾರಿಗೆ ತೆರೆ ಮೇಲೆ ನಟಿಸಿದ್ದರು. ಆದಾದ ಬಳಿಕ ಮನಸಾರೆ (Manasare) ಧಾರಾವಾಹಿಯಲ್ಲಿ ನಟಿಸಿದ್ದು, ಸತ್ಯ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದ ಮೂಲಕ ತೆರೆ ಮೇಲೆ ಫ್ಯಾನ್ಸ್ ಗಳನ್ನು ರಂಜಿಸುತ್ತಿದ್ದಾರೆ.

ಇತ್ತ ನಟಿ ಸಿರಿ ರಾಜು ಕೂಡ ಮಾಡೆಲ್ ಕಮ್ ಕಿರುತೆರೆ ನಟಿಯಾಗಿ ಗುರುತಿಸಿಕೊಂಡವರು. ಸ್ವಂತ ಬಿಸಿನೆಸ್ (Own Business) ಮಾಡುತ್ತಿದ್ದು ಅದರ ಜೊತೆಗೆ ನಟನೆಯನ್ನು ಮಾಡುತ್ತಿದ್ದು, ಹೀಗಾಗಿ ಧಾರಾವಾಹಿ ಹಾಗೂ ವೆಬ್ ಸಿರೀಸ್ ನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಗರ್ ಬಿಳಿಗೌಡ ಹಾಗೂ ಸಿರಿರಾಜು ಇಬ್ಬರೂ ನಟನೆಯಲ್ಲಿ ಬ್ಯುಸಿಯಾಗಿದ್ದು ವೈವಾಹಿಕ ಜೀವನದಲ್ಲಿ ಮುದ್ದು ಕಂದಮ್ಮನನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *