ಸೋಶಿಯಲ್ ಮೀಡಿಯಾ (Social Media) ವನ್ನೆ ಬಂಡವಾಳವಾಗಿಸಿಕೊಂಡು ಹಣ ವಸೂಲಿ ಮಾಡುವ ಜನರು ಇದ್ದಾರೆ. ಕೆಲವೊಮ್ಮೆ ಇಂತಹ ಜನರ ಕೈಗೆ ಸಿಕ್ಕಿಹಾಕಿಕೊಂಡು ಲಕ್ಷಾನುಗಟ್ಟಲೇ (Money) ವನ್ನು ಕಳೆದುಕೊಳ್ಳುತ್ತಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಶೇರ್ ಮಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುವವರು ಇದ್ದಾರೆ.ಆದರೆ ಫೈಸಲ್ (Faisal) ಎನ್ನುವವನಿಗೆ ಆಂಟಿಯರೇ ಟಾರ್ಗೆಟ್. ಈತನನ್ನು ಪೊಲೀಸರು ಬಂಧಿಸುವಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಸ್ಟೋರಿಯಲ್ಲಿದೆ. ಬೆಂಗಳೂರಿ (Banglore) ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಆಗಿ ಕೆಲಸ ಮಾಡಿಕೊಂಡಿದ್ದವನೇ ಈ ಅಸ್ಸಾಂ ಮೂಲದ ಟೆಕ್ಕಿ ಫೈಸಲ್. ಈ ಟೆಕ್ಕಿ ಫೈಸಲ್ ಇನ್‌ಸ್ಟಾಗ್ರಾಮ್ (Instagram), ಫೇಸ್‌ಬುಕ್ (Facebook) ನಲ್ಲಿ ನಕಲಿ ಖಾತೆ ಓಪನ್ ಮಾಡಿದ್ದು, ಚೆಂದದ ಆಂಟಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುತ್ತಿದ್ದನು.ಅಷ್ಟೇ ಅಲ್ಲದೇ ಪ್ರೀತಿ, ಪ್ರೇಮ ಎಂದು ನಂಬಿಸಿ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದನು.
ಅದರ ಜೊತೆಗೆ, ದೈ-ಹಿಕ ಸಂ-ಪರ್ಕ ಬೆಳೆಸಿ ಅದನ್ನು ವಿಡಿಯೋ ಮಾಡಿ, ಆ ವಿಡಿಯೋವನ್ನು ಇಟ್ಟುಕೊಂಡು ಹಣಕೊಡುವಂತೆ ಹೇಳುತ್ತಿದ್ದನು. ಒಂದು ವೇಳೆ ಹಣ ಕೊಡದೇ ಹೋದರೆ, ದೈ-ಹಿಕ ಸಂ-ಪರ್ಕದ ವೀಡಿಯೋ ಕಳಿಸಿ ನಿನ್ನ ಗಂಡನಿಗೆ ಕಳಿಸ್ತೀನಿ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡ್ತೀನಿ ಅಂತ ಹೆದರಿಸುತ್ತಿದ್ದನು.
ಹೀಗಿರುವಾಗ ಒಂದು ದಿನ ಹೆಚ್ಎಸ್ಆರ್ ಲೇಔಟ್ (HSR Layout) ನ ನಿವಾಸಿಯಾದ ಮಹಿಳೆಯನ್ನು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದಾನೆ. ಆಕೆಯನ್ನು ದೈ-ಹಿಕವಾಗಿ ಬಳಸಿಕೊಂಡಿದ್ದು, ಸುಮಾರು ನಾಲ್ಕೈದು ಬಾರಿ ದೈಹಿಕ ವಾಗಿ ಬಳಸಿಕೊಂಡು ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಅದಲ್ಲದೇ, ಆ ಮಹಿಳೆಯನ್ನು ಚೆನ್ನೈ (Chennai) ಗೆ ಬರುವಂತೆ ಹೇಳಿದ್ದಾನೆ. ಕೊನೆಗೆ ಭಯಗೊಂಡ ಮಹಿಳೆ ಪೊಲೀಸ್ ಠಾಣೆ (Police Station) ಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಆ ಕೂಡಲೇ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯಿಂದಲೇ ಚೆನ್ನೈನ ಒಂದು ಲಾಡ್ಜ್‌ಗೆ ಬರೋಕೆ ಹೇಳಿಸಿದ್ದಾರೆ ಪೊಲೀಸರು. ಆ ಲಾಡ್ಜ್ ನಲ್ಲಿ ಫೈಸಲ್‌ನನ್ನು ಬೆಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ.