ಮಗನ ಹುಟ್ಟುಹಬ್ಬಕ್ಕೆ ಭಾವುಕ ಪೋಸ್ಟ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್, ಪೋಸ್ಟ್ ವೈರಲ್

ಕಳೆದ ಕೆಲವು ವರ್ಷಗಳಿಂದ ಸೆಲೆಬ್ರಿಟಿಗಳ ವೈವಾಹಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದ್ದು ಡೈ-ವೋರ್ಸ್ ಹಂತಕ್ಕೆ ಬಂದು ತಲುಪುತ್ತಿದೆ. ಹೌದು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳ ವೈವಾಹಿಕ ಜೀವನ (Marriage life) ದಲ್ಲಿ ಸ್ವಲ್ಪ ಮಟ್ಟಿಗೆ ಬಿ-ರುಕು ಮೂಡಿದರೂ ಕೂಡ ವಿಚ್ಛೇಧನ ಎನ್ನುವ ಮನಸ್ಥಿತಿಗೆ ಬಂದು ತಲುಪುತ್ತಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ (Shikhar Dhawan) ವೈವಾಹಿಕ ಜೀವನದಲ್ಲಿ ಬಿ-ರುಕು ಮೂಡಿದ್ದು, ಪತ್ನಿ ಮಕ್ಕಳಿಂದ ದೂರವಿದ್ದಾರೆ. ಹೌದು, ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಅವರ ಮುದ್ದಿನ ಮಗ ಝೊರಾವರ್ (Zoravar) ಮಾಜಿ ಪತ್ನಿ ಆಯೆಷಾ (Ayesha) ಜೊತೆ ಆಸ್ಟ್ರೇಲಿಯಾ ( ದಲ್ಲಿ ನೆಲೆಸಿದ್ದಾನೆ.

ವಿ-ಚ್ಛೇದನ ವೇಳೆ ಧವನ್ ನನಗೆ ಮಗನನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ಕೋರ್ಟ್ ನಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದರು.ಆದರೆ ಇದೀಗ ತಮ್ಮ ಮಗನ ಹುಟ್ಟುಹಬ್ಬಕ್ಕೆ ಶುಭಾಶಯ (Birthday wishes) ಗಳನ್ನು ಕೋರಿದ್ದು, ಮಗನನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವುದನ್ನು ಬರೆದುಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಗನ ಫೋಟೋವೊಂದನ್ನು ಶೇರ್ ಮಾಡಿಕೊಂಡು “ನಿನ್ನ ಜೊತೆಗೆ ಸದಾ ನನಗೆ ಇರಲು ಅವಕಾಶವಿಲ್ಲ. ಹಾಗಿದ್ದರೂ ಪ್ರತಿನಿತ್ಯ ನಿನ್ನ ಜೊತೆಗಿರುವ ಹಾಗೆ ಕಲ್ಪಿಸುತ್ತೇನೆ. ನಿನ್ನ ಜೊತೆಗೆ ಮನಸ್ಸಿನಲ್ಲೆ ಮಾತನಾಡುತ್ತೇನೆ.

ನಿನ್ನನ್ನು ಸಂಪರ್ಕಿಸುವ ಎಲ್ಲಾ ಹಾದಿಗಳನ್ನು ಬಂದ್ ಮಾಡಲಾಗಿದೆ. ಆದರೂ ನಿನಗೆ ಜೀವನದಲ್ಲಿ ಎಲ್ಲಾ ಖುಷಿ, ಯಶಸ್ಸು ಸಿಗಲೆಂದು ಹಾರೈಸುತ್ತೇನೆ ಎಂದು ಸುದೀರ್ಘವಾಗಿ ಸಂದೇಶ ಬರೆದಿದ್ದಾರೆ. ಅವರ ಸಂದೇಶಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಇಷ್ಟೊಂದು ನೋವನ್ನು ಎದೆಯಲ್ಲಿಟ್ಟುಕೊಂಡು ಹೇಗೆ ನಗು ನಗುತ್ತಾ ಬದುಕುತ್ತಿದ್ದೀರಿ” ಎಂದು ನೋವಿನಿಂದ ಬರೆದುಕೊಂಡಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ಶಿಖರ್ ಧವನ್ ಮತ್ತು ಪತ್ನಿ ಆಯಿಶಾ ಮುಖರ್ಜಿ ಸ್ವಇಚ್ಛೆಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಇದೀಗ ಈಗ ಮಗನ ಹುಟ್ಟುಹಬ್ಬಕ್ಕೆ ಅವರು ಶೇರ್ ಮಾಡಿಕೊಂಡಿರುವ ಪೋಸ್ಟ್ ವೊಂದು ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *