ಕಾಂತಾರ ಸಿನಿಮಾ ಹಾಡಿಗೆ ಸೊಂಟ ಬಳುಕಿಸಿದ ಚಿಕ್ಕಮಗಳೂರಿನ ಶಿಕ್ಷಕಿಯರು!?

ಕಾಂತಾರ ಎನ್ನುವ ಕನ್ನಡ ಸಿನಿಮಾದ ಕಮಾಲ್ ಎಷ್ಟಿದೆ ಎನ್ನೋದನ್ನ ನಾವೇನೂ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಈಗಾಗಲೇ ಅದ್ಧೂರಿಯಾಗಿ 50 ದಿನಗಳನ್ನು ಪೂರೈಸಿರುವ ಕಾಂತಾರ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಕೂಡ ಹಿಟ್ ಆಗಿರುವುದು ಕನ್ನಡಿಗರಾಗಿ ನಮಗೆ ನಿಜಕ್ಕೂ ಹೆಮ್ಮೆಯ ವಿಷಯ.

ಹೌದು, ಕನ್ನಡದಲ್ಲಿ ಅಂದ್ರೆ ಕರ್ನಾಟಕದಲ್ಲಿ ಒಟ್ಟೂ ಒಂದು ಕೋಟಿಗೂ ಅಧಿಕ ಟಿಕೆಟ್ ಸೇಲ್ ಮಾಡಿದ ಖ್ಯಾತಿ ಕಾಂತಾರ ಸಿನಿಮಾದ್ದು. ಕಾಂತಾರ ಈಗಾಗಲೇ 350 ಕೋಟಿ ರುಪಾಯಿ ಮೀರಿ ಹಣ ಸಂಪಾದನೆ ಮಾಡಿದೆ. ಬಾಲಿವುಡ್ ವರೆಗೂ ಕನ್ನಡದ ಕಂಪು ಹಬ್ಬಿಸಿದೆ ಕಾಂತಾರ. ಕಾಂತಾರ ಸಿನಿಮಾವನ್ನು ನೋಡಿ ಈಗಾಗಲೇ ಸಾಕಷ್ಟು ಸೆಲಿಬ್ರೆಟಿಗಳೂ ಕೂಡ ಮೆಚ್ಚಿಕೊಂಡಿದ್ದಾರೆ. ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಸ್ವತಃ ರಿಷಬ್ ಶೆಟ್ಟಿಯವರನ್ನು ಮನಗೆ ಕರೆದು ಮಾತನಾಡಿಸಿ ದುಬಾರಿ ಗಿಫ್ಟ್ ಕೂಡ ಕೊಟ್ಟು ಪ್ರಶಂಸೆ ಮಾಡಿ ಕಳುಹಿಸಿದ್ದಾರೆ. ಅದೇ ರೀತಿ ತೆಲಗು ನಟ ಜ್ಯೂ. ಎನ್ ಟಿ ಆರ್, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್ ಹೀಗೆ ಎಲ್ಲಾ ಇತರ ಭಾಷೆಯ ನಟರೂ ಕೂಡ ಕಾಂತಾರ ಸಿನಿಮಾವನ್ನು ಥಿಯೇಟರ್ ನಲ್ಲಿಯೇ ನೋಡಿ ಹಾಡಿಹೊಗಳಿದ್ದಾರೆ.

ಇನ್ನು ಕಾಂತಾರ ಸಿನಿಮಾದ ಮೇಕಿಂಗ್ ಬಗ್ಗೆಯಂತೂ ಮಾತನಾಡುವ ಹಾಗೇ ಇಲ್ಲ. ಅಷ್ಟೊಂದು ನೈಜವಾಗಿ ಎಲ್ಲಾ ಸನ್ನಿವೇಶಗಳನ್ನೂ ಸೆರೆಹಿಡಿಯಲಾಗಿದೆ. ಕಾಂತಾರ ಸಿನಿಮಾದ ಪ್ರಮುಖ ಆಕರ್ಷಣೆ ಅದರ ಈ ಒಂದು ಹಾಡು.. ಹೌದು, ಸಪ್ತಮಿ ಗೌಡ ಹಾಗೂ ನಟ ರಿಷಬ್ ಶೆಟ್ಟಿಯವರ ಅಭಿನಯದ ಸಿಂಗಾರ ಸಿರಿಯೇ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಹಾಡಿಗಂತೂ ರೀಲ್ಸ್ ಮಾಡದವರೇ ಇಲ್ಲ.

ಹೌದು, ಅತ್ಯುತ್ತಮ ಲಿರಿಕ್ಸ್, ಮ್ಯೂಸಿಕ್ ಹಾಗೂ ಗಾಯನ ಇರುವ ಈ ಹಾಡನ್ನು ಸಾಮಾನ್ಯರಿಂದ ಹಿಡಿದು ಸೆಲಿಬ್ರೆಟಿಗಳ ವರೆಗೆ ಎಲ್ಲರೂ ರೀಲ್ಸ್ ಮಾಡಿದ್ದಾರೆ. ಅಷ್ಟು ಹಿಟ್ ಆಗಿದೆ ಈ ಹಾಡು. ಸಾಮಾನ್ಯವಾಗಿ ಇನ್ಟಾಗ್ರಾಮ್ ನಲ್ಲಿ ಯಾವುದೇ ಸಿನಿಮಾದ ಹೊಸ ಹಾಡುಗಳು ಟ್ರೆಂಡ್ ಆಗುತ್ತವೆ. ಸಿನಿಮಾ ಹಾಡುಗಳು ಹೆಚ್ಚು ಫೇಮಸ್ ಆಗುವುದೇ ಇನ್ಸ್ಟಾಗ್ರಾಮ್ ರೀಲ್ಸ್ ಗಳ ಮೂಲಕ ಅಂದ್ರೆ ತಪ್ಪಾಗಲ್ಲ. ಇಂದಿನ ಯುವತಿಯರು ಯಾವುದೇ ಹೊಸ ಹಾಡಿಗೆ ನೃತ್ಯ ಮಾಡುವುದರ ಮೂಲಕ ಆ ಹಾಡನ್ನು ಇನ್ನಷ್ಟು ಫೇಮಸ್ ಮಾಡುತ್ತಾರೆ.

ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಪೇಮಸ್ ಆಗಿರುವ, ಸೋಷಿಯಲ್ ಮಿಡಿಯಾ ಸ್ಟಾರ್ ಎನಿಸಿಕೊಂಡಿರುವ ಎಲ್ಳಾ ಯುವತಿಯರು ಸಿಂಗಾರ ಸಿರಿಯೇ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇತ್ತೀಚಿಗೆ ಚಿಕ್ಕಮಗಳೂರಿನ ಹುಡುಗಿ ಚಂದು ಗೌಡ ಕೂಡ ಸ್ನೇಹಿತೆಯರ ಜೊತೆ ಸೇರಿ ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಶಾಲೆಯೊಂದರಲ್ಲಿ ಬ್ಲ್ಯಾಕ್ ಬೋರ್ಡ್ ಮುಂಭಾದಗಲ್ಲಿ ನಿಂತು ತನ್ನ ಇತರ ಇಬ್ಬರು ಸ್ನೇಹಿತೆಯರ ಜೊತೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೀರೆ ಉಟ್ಟ ಈ ಮೂವರು ಪಕ್ಕಾ ಟೀಚರ್ ಗಳಂತೆಯೇ ಕಾಣುತ್ತಾರೆ. ಆದರೆ ನಾವು ಟೀಚರ್ಸ್ ಅಲ್ಲ, ಶೂಟಿಂಗ್ ಸಮಯದಲ್ಲಿ ಮಾಡಿದ ರೀಲ್ಸ್ ಇದು ಎಂದು ಸ್ವತಃ ಚಂದು ಗೌಡ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನೀವು ಕೂಡ ಈ ಯುವತಿಯರ ಅದ್ಭುತ ನೃತ್ಯವನ್ನು ಇಲ್ಲಿ ನೋಡಬಹುದು.

Leave a Reply

Your email address will not be published. Required fields are marked *