ಶೈಕ್ಷಣಿಕ ಪ್ರವಾಸದಲ್ಲಿ ವಿದ್ಯಾರ್ಥಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿ ರೋ ಮ್ಯಾನ್ಸ್ ಮಾಡಿದ ಶಿಕ್ಷಕಿ, ಫೋಟೋಸ್ ವೈರಲ್

ಗುರು (Teacher) ವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವ ದೇಶ ನಮ್ಮದು. ಹೌದು, ಶಿಕ್ಷಕರು ಮಕ್ಕಳ ಜೀವನದಲ್ಲಿ ವಹಿಸುವ ಪಾತ್ರವು ಅಗಾಧವಾದದ್ದು. ದಾರಿ ತೋರುವ ಗುರುವಿನ ಬಗ್ಗೆ ಮಕ್ಕಳು ಅಷ್ಟೇ ಗೌರವ ಹೊಂದಿರುತ್ತಾರೆ. ಚಿಕ್ಕ ಮಕ್ಕಳಂತೂ ಶಿಕ್ಷಕರ ಹೊರತಾಗಿ ಯಾರ ಮಾತನ್ನು ಕೇಳಲು ಸಿದ್ಧರಿರುವುದಿಲ್ಲ. ಹೀಗಾಗಿ ಶಾಲಾ ಕಾಲೇಜಿ (School and College) ನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಭವಿಷ್ಯ ರೂಪು ಗೊಳ್ಳುತ್ತದೆ.

ಈ ಮಕ್ಕಳ ಭವಿಷ್ಯ ರೂಪುಗೊಳ್ಳಲು ಶಿಕ್ಷಕರು ಮುಖ್ಯವಾಗಿ ಬೇಕಾಗುತ್ತದೆ. ಉದ್ಯೋಗ ಪಡೆದುಕೊಂಡು ಉತ್ತಮವಾಗಿ ಬದುಕಲು ಶಿಕ್ಷಕರು ಬಹಳ ಮುಖ್ಯ ಎನ್ನುವುದನ್ನು ಮರೆಯುವಂತಿಲ್ಲ. ಅದಲ್ಲದೇ ಸಹಜವಾಗಿ ಶಿಕ್ಷಕರು ಮಕ್ಕಳನ್ನು ತಿದ್ದಿ ಬುದ್ಧಿ ಹೇಳುವ ಸಲುವಾಗಿ ಆತ್ಮೀಯರಾಗಿರಲು ಬಯಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಹಾಗೂ ಫೋಟೋ ನೋಡಿದರೆ ಮಕ್ಕಳ ಜೊತೆಗೆ ಶಿಕ್ಷಕರು ಹೀಗೂ ಇರುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡಬಹುದು.

ಆದರೆ ಇದೀಗ ವೈರಲ್ ಆಗಿರುವ ಫೋಟೋವೊಂದರಲ್ಲಿ ಟ್ರಿಪ್ (Trip) ಹೋದ ವೇಳೆ ವಿದ್ಯಾರ್ಥಿಯೋರ್ವನ ಜೊತೆ ಮುಖ್ಯ ಶಿಕ್ಷಕಿ ಅನುಚಿತವಾಗಿ ವರ್ತಿಸುವ ಮೂಲಕ ವಿದ್ಯಾರ್ಥಿಗೆ ಕಿಸ್ (Kiss) ಕೊಟ್ಟಿದ್ದಾಳೆ. ಹೌದು, ಶಾಲಾ ಶಿಕ್ಷಕಿಯೊಬ್ಬರು 10 ನೇ ತರಗತಿಯ ವಿದ್ಯಾರ್ಥಿಯೊಂದಿಗೆ ಚುಂಬಿಸುವುದು ಮತ್ತು ಆತ್ಮೀಯರಾಗಿರುವುದನ್ನು ಕಾಣಬಹುದು.

ಶಿಕ್ಷಕಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಬ್ಬರೂ “ಶೈಕ್ಷಣಿಕ ಪ್ರವಾಸ” (School trip) ದಲ್ಲಿದ್ದಾಗ ಈ ಚಿತ್ರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ಫೋಟೋವನ್ನು ನೆಟ್ಟಿಗನೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, “ಅಸಹ್ಯಕರ” ಎಂದು ಬರೆದುಕೊಂಡಿದ್ದಾರೆ. ಅಂದಹಾಗೆ, ಚಿಕ್ಕಬಳ್ಳಾಪುರ ಜಿಲ್ಲೆ (Chikkaballapura District) ಯ ಮುರುಗಮಲ್ಲ (Murugamalla) ದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು 10 ನೇ ತರಗತಿ ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಫೋಟೋಗಳು ಎನ್ನಲಾಗಿದೆ.

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಂತೆ ವಿದ್ಯಾರ್ಥಿಯ ಪೋಷಕರು ಶಿಕ್ಷಣ ಅಧಿಕಾರಿಗಳಿಗೆ (BEO) ದೂರು ನೀಡಿ, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾಯ ತುಂಬೆಲ್ಲ ಈ ಫೋಟೋಗಳು ಹರಿದಾದುತ್ತಿದ್ದಂತೆ ನೆಟ್ಟಿಗರು ಮಾತ್ರ ತಹರೇವಾರಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *