15 ವರ್ಷದ ಬಾಲಕನ ಮನೆಗೆ ಟ್ಯೂಷನ್ ಹೇಳಿಕೊಡಲು ಬರುತ್ತಿದ್ದ 27 ವರ್ಷದ ಶಿಕ್ಷಕಿ, ಕೊನೆಗೆ ಶಿಕ್ಷಕಿ ಜೊತೆಗೆ ಬಾಲಕ ಪರಾರಿ, ಮುಂದೇನಾಯಿತು ಗೊತ್ತಾ? ಇಲ್ಲಿದೆ ಅಸಲಿ ವಿಚಾರ!!

ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದ್ದರೂ ಕೂಡ ಶಿಕ್ಷಕ (Teachers) ರು ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅದಲ್ಲದೇ, ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಶಿಕ್ಷಕರದ್ದು ಪ್ರಮುಖ ಪಾತ್ರವಿದೆ. ವಿದ್ಯಾರ್ಥಿಗಳಲ್ಲಿ ನೈತಿಕತೆ ಹಾಗೂ ಉತ್ತಮ ಮೌಲ್ಯಗಳನ್ನು ತುಂಬುತ್ತಾರೆ.

ಶಿಕ್ಷಕರಾದವರಿಗೆ ಯುವಕ ಯುವತಿಯರನ್ನು ರೂಪಿಸುವ ಹಾಗೂ ಆ ಮೂಲಕ ಉತ್ತಮ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯೂ ಇದೆ. ಆದರೆ ಇಲ್ಲೊಬ್ಬಳು ಶಿಕ್ಷಕಿ ಮಾಡಿದ ಕೆಲಸ ಕೇಳಿದರೆ ಅಚ್ಚರಿಯಾಗುತ್ತದೆ. ಇಲ್ಲೊಂದು ಕಡೆಯಲ್ಲಿ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಪ್ರೇಮ (Love) ದಲ್ಲಿ ಬಿದ್ದಿದ್ದಾಳೆ. ತದನಂತರದಲ್ಲಿ ತನ್ನ ವಿದ್ಯಾರ್ಥಿ ಜೊತೆಗೆ ಓಡಿ ಹೋಗಲು ಯತ್ನಿಸಿದ ಘಟನೆಯೊಂದು ನಡೆದಿದೆ.

ಈ ಘಟನೆಯು ನಡೆದಿರುವುದು ದೆಹಲಿ (Dehli) ಯಲ್ಲಿ. ಹೌದು, ಶಿಕ್ಷಕಿ ಮತ್ತು ವಿದ್ಯಾರ್ಥಿ ಇಬ್ಬರು ಮುಂಬೈ (Mumbai) ಗೆ ಹೋಗಲು ಪ್ಲಾನ್ ಮಾಡಿಕೊಂಡಿದ್ದು, ಆ ಬಳಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ರೈಲ್ವೆ ಪೊಲೀಸರು ಇಬ್ಬರನ್ನು ಬಂ-ಧಿಸಿದ್ದಾರೆ. ಕೊನೆಗೆ ಈ ಬಗ್ಗೆ ವಿದ್ಯಾರ್ಥಿಯ ಪೋಷಕರಿಗೆ ವಿಷಯವನ್ನು ಮುಟ್ಟಿಸಿದ್ದಾರೆ.

ಅಂದಹಾಗೆ, ಬಾಲಕ ಕಾಣುತ್ತಿಲ್ಲ ಎನ್ನುವ ಕಾರಣಕ್ಕೆ ಆತನ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇತ್ತ ಶಿಕ್ಷಕಿಯ ಪೋಷಕರು ಕೂಡ ಪೊಲೀಸ್ ಠಾಣೆಗೆ ಧಾವಿಸಿದ್ದಾರೆ. 14 ವರ್ಷದ ಹುಡುಗನ ಕುಟುಂಬವು ಹೈದರಾಬಾದ್ (Hyderbad) ನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಅನ್ನು ದಾಖಲಿಸಿದೆ. ಈ ಬಾಲಕನ ಪೋಷಕರು ಮಗನು ಕಾ-ಣೆಯಾಗಿರುವ ಬಗ್ಗೆ ಹೈದ್ರಾಬಾದ್ ಪೊಲೀಸ್ ಠಾಣೆ (Hyderbad Police Station) ಯಲ್ಲಿ ದೂರು ದಾಖಲಿಸಿದ್ದಾರೆ.

ನಂತರ ಬಾಲಕನ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ಆದರೆ ಇಬ್ಬರೂ ಮುಂಬೈಗೆ ಎಕ್ಸ್‌ಪ್ರೆಸ್ ರೈಲಿ (Mumbai Express train) ನಲ್ಲಿ ಹೋಗಿದ್ದಾರೆ ಎನ್ನುವ ಮಾಹಿತಿಯು ಪೊಲೀಸ್ ತಂಡಕ್ಕೆ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೆಹಲಿ ಪೊಲೀಸರು ಬಾಲಕನನ ಫೋಟೋವನ್ನು ವಾಟ್ಸಪ್‌ ಮೂಲಕ ರೈಲ್ವೆ ಪೊಲೀಸ್‌ಗೆ ರವಾನಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶಿಕ್ಷಕಿ ತಮ್ಮ ಪುತ್ರನನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿದ್ದಾಳೆ ಎಂದು ಹುಡುಗನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹೀಗಾಗಿ ತನಿಖೆಯು ಬಿರುಸಿನಿಂದ ನಡೆಯುತ್ತಿದ್ದ ಹಿನ್ನಲೆಯಲ್ಲಿ ಕೊನೆಗೂ ವಿದ್ಯಾರ್ಥಿ ಹಾಗೂ ಶಿಕ್ಷಕಿಯು ಸಿಕ್ಕಿ ಬಿದ್ದಿದ್ದಾರೆ. ರೈಲ್ವೆ ಪೊಲೀಸರ ಪ್ರಕಾರ, ಇಬ್ಬರು ದೆಹಲಿ ಮೂಲದವರಾಗಿದ್ದು 28 ವರ್ಷ ವಯಸ್ಸಿನ ಶಿಕ್ಷಕಿ ಟ್ಯೂಶನ್ ಹೇಳಿಕೊಡಲು ಬಾಲಕನ ಮನೆಗೆ ಬರುತ್ತಿದ್ದಳು. ಈ ವೇಳೆಯಲ್ಲಿ ಶಿಕ್ಷಕಿಗೆ ಬಾಲಕ ಮೇಲೆ ಪ್ರೀತಿಯಾಗಿದೆ. ಆದಾದ ಬಳಿಕ ಮುಂಬೈಗೆ ಓಡಿಹೋಗಲು ನಿರ್ಧರಿಸಿದ್ದರು. ಆದರೆ ರೈಲಿನಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದು, ಒಟ್ಟಿನಲ್ಲಿ ಈ ಪ್ರೇಮ ಪ್ರಕರಣವು ಹೆತ್ತವರನ್ನು ಬೆ-ಚ್ಚಿ ಬೀಳಿಸಿದೆ.

Leave a Reply

Your email address will not be published. Required fields are marked *