ಇಂದು ಸಾಮಾಜಿಕ ಜಾಲತಾಣ ಎಷ್ಟು ಪ್ರಭಾವಶಾಲಿ ಮಾಧ್ಯಮ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಜನರು ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿಯೇ ಕಳೆಯುತ್ತಾರೆ ಆದರೆ ಕೆಲವರು ಸಾಮಾಜಿಕ ಜಾಲತಾಣವನ್ನು ಅನಗತ್ಯ ವಿಷಯಗಳಿಗೆ ಬಳಸಿಕೊಳ್ಳುತ್ತಾರೆ ಇದಕ್ಕೆ ಯುವತಿಯರು ಹೊರತಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾ ಯುವಕರನ್ನು ಬಲೆಗೆ ಬೀಳಿಸುತ್ತಿದ್ದ ಖತರ್ನಾಕ್ ಯುವತಿಯ ಕಥೆ ಇದು. ಆಕೆಯ ವಂ-ಚ-ನೆಯಲ್ಲಿ ಸಾಥ್ ನೀಡಿದ ಆಕೆಯ ಪತಿ ಕೂಡ ಇದೀಗ ಹೈದರಾಬಾದ್ ನ ಸೈಬರ್ ಕ್ರೈಂ ಪೊಲೀಸರ ವಶವಾಗಿದ್ದಾರೆ. 23 ವರ್ಷದ ಪರಾಸ ತನುಶ್ರೀ ಹಾಗೂ 32 ವರ್ಷದ ಪರಸ ರವಿತೇಜ ಬಂದಿತ ಆರೋಪಿಗಳು.
ಪ್ರಕಾಶಂ ಜಿಲ್ಲೆಯ ಗಿಡ್ಡಲೂರು ಮೂಲದ ಈ ಜೋಡಿ ಮದುವೆ ಆಗದೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ. ತನುಶ್ರೀ ತನ್ನ ಹೆಸರಿನಲ್ಲಿ ಅನೇಕ ಇನ್ಸ್ಟಾಗ್ರಾಮ್ ಐಡಿಯನ್ನು ತೆರೆದಿದ್ದಳು. ಜನರಿಗೆ ಇಂಪ್ರೆಸ್ ಮಾಡುವಂತಹ ಮನ ಸೆಳೆಯುವ ಫೋಟೋ ಹಾಗೂ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಈಕೆಗೆ ಯುವಕರೇ ಟಾರ್ಗೆಟ್.
ಬಣ್ಣ ಬಣ್ಣದ ಮಾತುಗಳನ್ನು ಆಡುತ್ತ ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಳು. ಕೊನೆಗೆ ತನುಶ್ರೀ ಮದುವೆಯಾಗುವುದಾಗಿ ನಂಬಿಸಿ ಅವರಿಂದ ತನಗೆ ಬೇಕಾದಷ್ಟು ಹಣ ಪೀಕಿಸುತ್ತಿದ್ದಳು. ತನುಶ್ರೀ ನೋಡಲು ಸುಂದರವಾದ ಯುವತಿ ಹಾಗಾಗಿ ಆಕೆಗೆ ಮಾರುಹೋಗಿ ಅನೇಕರು ಅವಳಿಗೆ ಹಣ ನೀಡಿದ್ದಾರೆ. ತನುಶ್ರೀಯಿಂದ ಮೋಸ ಹೋದ ಒಬ್ಬ ಯುವಕ ದೂರು ದಾಖಲಿಸಿ ಆಕೆಯ ಬಗ್ಗೆ ಮಾಹಿತಿ ನೀಡಿದ ಅದರ ಆಧಾರದ ಮೇಲೆ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಎಂಟು ತಿಂಗಳ ಹಿಂದೆ ಆ ಯುವಕ ಇನ್ಸ್ಟಾಗ್ರಾಮ್ ನಲ್ಲಿ ತನುಶ್ರೀಯನ್ನು ಭೇಟಿಯಾಗಿದ್ದನಂತೆ ಚಾಟಿಂಗ್ ಮಾಡುತ್ತಾ ಪರಿಚಯ ಮಾಡಿಕೊಂಡ ತನುಶ್ರೀ. ತಾನು ನಿನ್ನನು ಪ್ರೀತಿಸುತ್ತೇನೆ ಮದುವೆ ಆಗುತ್ತೇನೆ ಎಂದು ಹೇಳಿದಳಂತೆ. ಮದುವೆಗೆ ಒಪ್ಪಿಗೆ ಸೂಚಿಸಿದ ನಂತರ ತನ್ನ ತಾಯಿಯ ಅನಾರೋಗ್ಯ ಅದು ಇದು ಎಂದು ಸಾಕಷ್ಟು ಕಾರಣ ನೀಡಿ ಆತನಿಂದ ಬರೋಬ್ಬರಿ 31 ಲಕ್ಷ ರೂಪಾಯಿಗಳನ್ನು ತನುಶ್ರೀ ಲೂಟಿ ಮಾಡಿದ್ದಾಳೆ.
ಇದೀಗ ತನುಶ್ರೀ ಹಾಗೂ ಆತನ ಪತಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಇಬ್ಬರು ಸೇರಿ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಲಕ್ಷಾಂತರ ಹಣ ಲಪಟಾಯಿಸಿದ್ದಾರೆ. ಈ ಪ್ರಕರಣ ಸೈಬರ್ ಕ್ರೈಂ ಪೊಲೀಸರು ದಾಖಲಿಸಿ ಕೊಂಡು ತನಿಖೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.