ಮೈ ಜುಮ್ ಅನ್ನಿಸುವಂತೆ ಫೋಟೋಶೂಟ್ ಮಾಡಿಸಿದ ನಟಿ ತನಿಶಾ ಕುಪ್ಪುಂದ! ಇಲ್ಲಿವೆ ನೋಡಿ!!

ಸಿನಿಮಾರಂಗ ಎಂದಮೇಲೆ ಇಲ್ಲಿ ಹೆಸರು ಕೀರ್ತಿ ಜೊತೆಗೆ ಗಾಸಿಫ್ ಗಳು ಕೂಡ ಕೇಳಿ ಬರುತ್ತವೆ. ಅದಲ್ಲದೇ ಕೆಲವೊಮ್ಮೆ ನೆಟ್ಟಿಗರು ನಟ ನಟಿಯರನ್ನು ಟ್ರೋಲ್ ಆಗುವುದು ಸರ್ವೇ ಸಾಮಾನ್ಯ. ಇದೀಗ ಪೆಂಟಗನ್ (Pentagan) ಸಿನಿಮಾದ ನಟಿಗೆ ಯೂಟ್ಯೂಬರ್ (Youtuber) ರೊಬ್ಬನು ಬಾಯಿಗೆ ಬಂತಂತೆ ಪ್ರಶ್ನೆ ಕೇಳಿದ್ದು, ನಟಿಯು ಗರಂ ಆಗಿದ್ದಾನೆ.

ಹೌದು, ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವವರಲ್ಲಿ ಪೈಕಿ ನಟಿ ತನಿಷಾ ಕುಪ್ಪಂಡ (Tanishaa Kuppunda) ಕೂಡ ಒಬ್ಬರು ಎಂದರೆ ತಪ್ಪಿಲ್ಲ. ಮಂಗಳ ಗೌರಿ (Mangala Gowri) ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿಯೂ ಬೆಳ್ಳಿತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ನಟಿಸುತ್ತಿದ್ದು, ಪೆಂಟಗನ್ (Pentagan) ಸಿನಿಮಾದ ಬೆಳ್ಳಿತೆರೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ನನಗೆ ಯಾವುದೇ ಮುಜಗರವಿಲ್ಲ. ಅಲ್ಲದೇ, ನೆಗೆಟಿವ್ ಕಾಮೆಂಟ್ ಗಳಿಗೆ ನಾನು ಕೇರ್ ಮಾಡುವುದಿಲ್ಲ ಎಂದಿದ್ದಾರೆ.

ನಿರ್ದೇಶಕ ಗುರು ದೇಶಪಾಂಡೆ (Director Gurudeshapande) ಅವರ ಸಾರಥ್ಯದಲ್ಲಿ ತೆರೆಗೆ ಬರುತ್ತಿರುವ ಪೆಂಟಗನ್ ಸಿನಿಮಾದ ಒಂದು ಕಥೆಯಲ್ಲಿ ನಟಿ ತನಿಷಾ ಕುಪ್ಪಂಡ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಜೊತೆ ಲಿಪ್ ಲಾಕ್ ಮತ್ತು ಬ್ಯಾಕ್ ಲೆಸ್ ನಿಂದ ಸಖತ್ ಸುದ್ದಿಯಲ್ಲಿದ್ದಾರೆ. ಹೀಗಿರುವಾಗ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟಿ ತನಿಷಾ ಮುಜುಗರದ ಸನ್ನಿವೇಶ ಎದುರಾಗಿದ್ದು, ಗರಂ ಕೂಡ ಆಗಿದ್ದಾರೆ.

ಹೌದು, ಸಂದರ್ಶನವೊಂದರಲ್ಲಿ ಯೂಟ್ಯೂಬರ್ ಅಸಭ್ಯ ಪ್ರಶ್ನೆಗೆ ತನಿಷಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನೀವು ನೀಲಿ ಚಿತ್ರದಲ್ಲಿ ನಟಿಸಲು ಸಿದ್ಧವಿದ್ದೀರಾ? ಎಂದು ಯೂಟ್ಯೂಬರ್ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗೆ ಸಿಟ್ಟಾದ ತನಿಷಾ ಕುಪ್ಪಂಡ, “ಹಾಗಿದ್ರೆ ನಾನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇರಬಾರದಿತ್ತು. ನೀಲಿ ಸಿನಿಮಾ ಇಂಡಸ್ಟ್ರಿಯಲ್ಲೇ ಇರಬೇಕಿತ್ತು. ಬೋಲ್ಡ್ ಆಗಿ ನಟಿಸಿದ್ದೀವಿ ಅಂದ ಮಾತ್ರಕ್ಕೆ. ಈ ತರಹ ಪ್ರಶ್ನೆ ಕೇಳೋದ್ರಲ್ಲಿ ಅರ್ಥವೇ ಇಲ್ಲ. ನೀಲಿ ಚಿತ್ರದ ತಾರೆಯರು ಬೆತ್ತಲಾಗುತ್ತಾರೆ.

ನಾನು ನೀಲಿ ಚಿತ್ರದ ತಾರೆಯಲ್ಲ. ಯಾಕೆ ಈ ರೀತಿ ಪ್ರಶ್ನೆ ಮಾಡ್ತಿದ್ದೀರಾ.? ಪ್ರಶ್ನೆ ಮಾಡೋಕೂ ಮುನ್ನ ನಿಮಗೆ ಕಾಮನ್ ಸೆನ್ಸ್ ಇರಬೇಕು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾರು ಬೆತ್ತಲೆ ಸಿನಿಮಾ ಮಾಡ್ತಿದ್ದಾರೆ? ಯಾಕೆ ಈ ರೀತಿ ಅಸಭ್ಯವಾಗಿ ಪ್ರಶ್ನೆಯನ್ನು ಕೇಳುತ್ತಿದ್ದೀರಾ? ಎಂದು ಕೋಪದಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆಯಲ್ಲಿ ಯೂಟ್ಯೂಬರನ್ನು `ಪೆಂಟಗನ್’ ಚಿತ್ರತಂಡ ತರಾಟೆಗೆ ತೆಗೆದುಕೊಂಡಿದ್ದು, ಆತನ ವಿರುದ್ಧ ಕಿಡಿಕಾರಿದೆ.

Leave a Reply

Your email address will not be published. Required fields are marked *