ಸಿನಿಮಾ ಲೋಕವೇ ಅದ್ಭುತವೆನಿಸಬಹುದು. ಈ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದು ಅಷ್ಟು ಸುಲಭದ ಮಾತಲ್ಲ. ಸ್ಟಾರ್ ನಟರಾಗಿ ಬೆಳೆಯಬೇಕು ಎಂದು ಬಂದವರು ಎಲ್ಲರೂ ಕೂಡ ಯಶಸ್ಸು ಕಾಣುವುದಿಲ್ಲ. ಸಿನಿಮಾರಂಗದಲ್ಲಿ ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ. ಈ ಕನ್ನಡ ಸಿನಿಮಾರಂಗದತ್ತ ಕಣ್ಣು ಹಾಯಿಸಿದರೆ ಸಾಕಷ್ಟು ನಟ ನಟಿಯರು ನಟನೆಯ ಮೂಲಕ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ.
ಆದರೆ ಇಂದು ಸೆಲೆಬ್ರಿಟಿಗಳಾಗಿರುವ ಅನೇಕ ನಟ ನಟಿಯರ ಆರಂಭದ ಬದುಕು, ಅವರು ಉಂಡ ಕಷ್ಟಗಳ ಬಗ್ಗೆ ಯಾರು ಗಮನ ಹರಿಸುವುದಿಲ್ಲ. ನಟಿಯರು ತೆರೆ ಮೇಲೆ ಹಾಟ್ ಆಗಿ ಕಾಣಿಸಿಕೊಳ್ಳಬೇಕಾಗುತ್ತದೆ. ಕೆಲವು ನಟಿಯರು ಮೈ ಕೈ ಕಾಣುವ ತುಂಡು ಬಟ್ಟೆ ತೊಡಲು ಇಷ್ಟವಿಲ್ಲದೇ ಸಿನಿಮಾರಂಗದ ಸಹವಾಸ ಬೇಡ ಎಂದುಕೊಂಡು ದೂರ ಉಳಿದು ಬಿಡುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ಗ್ಲಾಮರಸ್ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತಿದೆ ನಟಿಯರು ಗ್ಲಾಮರಸ್ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಆದರೆ ಇದೀಗ ಮೊದಲ ಬಾರಿಗೆ ಸಿನಿಮಾದಲ್ಲಿ ತನಿಷ ಕುಪ್ಪಂಡ, ಸಿನಿಮಾ ಒಂದರಲ್ಲಿ ಸಕ್ಕತ್ ಬೋಲ್ಡ್ ಗಮನ ಸೆಳೆಯುತ್ತಿದ್ದಾರೆ. ಅದಲ್ಲದೇ, ನಾನು ಈ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದು ರೋಮ್ಯಾಂಟಿಕ್ ಸೀನ್ ನಲ್ಲಿ ಅಭಿನಯಿಸಿದ್ದೇನೆ ಎಂದಿದ್ದಾರೆ. ನಟಿ ತನುಷ ಕುಪ್ಪಂಡಯವರ ಬಗ್ಗೆ ಹೇಳುವುದಾದರೆ, ಕಿರುತೆರೆಯಲ್ಲಿ ನಟಿಸಿ ಪ್ರೇಕ್ಷಕ ಮನಸ್ಸು ಗೆದ್ದುಕೊಂಡವರು. ಕೊಡಗಿನ ಮೂಲದ ತನಿಷಾ ಅವರು ಮಂಗಳ ಗೌರಿ ಮದುವೆ ಧಾರವಾಹಿಯಲ್ಲಿ ಮಿಂಚು ಎನ್ನುವ ನೆಗೆಟಿವ್ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ನಟಿ ತನುಷ ಕುಪ್ಪಂಡ, ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಈ ಹಿಂದೆ ಸಿನಿಮಾವೊಂದರಲ್ಲಿ ನಟಿಸಿದ್ದರು. ಆದರೆ ಇದೀಗ ಪೆಂಟಗನ್ ಸಿನಿಮಾದ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡಲಿದ್ದಾರೆ. ಈ ಸಿನಿಮಾ ಬಹುನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಐದು ಕಥೆಗಳನ್ನು ಒಳಗೊಂಡಿರುವ ಐವರು ನಿರ್ದೇಶಕರನ್ನು ಒಳಗೊಂಡಿರುವುದು ವಿಶೇಷ ಎನ್ನಬಹುದು.
ಈ ಸಿನಿಮಾದ ಐದು ಕಥೆಗೆ ಸಂಬಂಧ ಪಟ್ಟಂತೆ ಒಂದೊಂದು ಟೀಸರ್ ರಿಲೀಸ್ ಮಾಡಲಾಗಿದ್ದು, ಸದ್ಯಕ್ಕೆ ಈ ಟೀಸರ್ ಎಲ್ಲರ ನಿರೀಕ್ಷೆ ಯನ್ನು ಹೆಚ್ಚು ಮಾಡಿದೆ. ಗುರು ದೇಶಪಾಂಡೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಕೊಂಡಿದ್ದು, ಸಿನಿಮಾದ 5ನೇ ಕಥೆ ಕನ್ನಡಪರ ಹೋರಾಟಗಾರರ ಕಥೆಯನ್ನು ಒಳಗೊಂಡಿದೆ ಇನ್ನು ಈ ಸಿನಿಮಾದಲ್ಲಿ ಒಂದೊಂದು ಕಥೆಯನ್ನು ಒಬ್ಬೊಬ್ಬ ನಿರ್ದೇಶಕರು ನಿರ್ದೇಶನ ಮಾಡುತ್ತಿರುವುದು ಮತ್ತೊಂದು ವಿಶೇಷ.
ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳುತ್ತಿರುವ ಕಥೆಯಲ್ಲಿ ಮುಖ್ಯ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗುರು ದೇಶಪಾಂಡೆ ನಿರ್ದೇಶನ ಮಾಡಿರುವ ಕಥೆಗೆ ಅಭಿಲಾಶ್ ಕಳತಿ ಛಾಯಾಗ್ರಹಣಯಿದ್ದು, ಮಣಿಕಾಂತ್ ಕದ್ರಿ ಅವರು ಸಂಗೀತ ಸಂಯೋಜನೆ ಇದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್, ಬಿಗ್ ಬಾಸ್ ಖ್ಯಾತಿಯ ರೂಪ ರಾಜಣ್ಣ, ಅಶ್ವಿನಿ ಗೌಡ ಮೊದಲಾದವರು ತೆರೆಹಂಚಿಕೊಂಡಿದ್ದಾರೆ.
ಪೆಂಟಗನ್ ಸಿನಿಮಾದಲ್ಲಿ ಒಟ್ಟು ಐದು ಕಥೆಗಳಿದ್ದು, ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್ ಶ್ರೀವತ್ಸ, ರಾಘು ಶಿವಮೊಗ್ಗ, ಕಿರಣ್ ಕುಮಾರ್, ಗುರು ದೇಶಪಾಂಡೆ, ಚಂದ್ರಮೋಹನ್ ಈ ಐದು ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ.ಅದಲ್ಲದೇ ನಟಿ ತನಿಷ ಕುಪ್ಪಂಡ, ಈ ಐದು ಕಥೆಯಲ್ಲಿ ಒಂದು ಕಥೆಯಲ್ಲಿ ಮುಖ್ಯ ಪಾತ್ರದಲ್ಲಿ ತೆರೆ ಮೇಲೆ ಮೋಡಿ ಮಾಡಲಿದ್ದಾರೆ. ಬಹುನಿರೀಕ್ಷೆಯನ್ನು ಹುಟ್ಟುಹಾಕಿರುವ ಪೆಂಟಗನ್ ಸಿನಿಮಾದ ಕಾಮನಬಿಲ್ಲು ಹಾಡು ರಿಲೀಸ್ ಆಗಿದೆ.
ಈ ಹಾಡು ಸಿಕ್ಕಾಪಟ್ಟೆ ವೀಕ್ಷಣೆಯನ್ನು ಕಾಣುತ್ತಿದ್ದು, ಈ ಹಾಡಿನಲ್ಲಿ ಬಹಳ ಬೋಲ್ಡ್ ಆಗಿ ನಟಿ ತನಿಷ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾರೆ. ಈ ಹಾಡಿನ ಲಿರಿಕ್ಸ್ ನಾಗಾರ್ಜುನ ಶರ್ಮಾ ಅವರು ಬರೆದಿದ್ದು, ಕದ್ರಿ ಮಣಿಕಾಂತ್ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ. ಕಾಮನಬಿಲ್ಲು ಹಾಡನ್ನು ಸಂತೋಷ ವೆಂಕಿ ಹಾಗೂ ಇಂಚರಾ ರಾವ್ ಅವರು ಧ್ವನಿ ನೀಡಿದ್ದಾರೆ.
ತನಿಷಾ ಕುಪ್ಪಂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಒಂದು ಕಥೆಯನ್ನು ರಾಘು ಶಿವಮೊಗ್ಗ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಾಡು ಸೆನ್ಸೇಷನ್ ಸೃಷ್ಟಿಸಿದ್ದು, ಈ ಹಾಡಿನಲ್ಲಿ ತನಿಷಾ ಕುಪ್ಪಂಡ ಅವರ ಸಖತ್ ಬೋಲ್ಡ್ ಆಕ್ಟಿಂಗ್ ಹಾಗೂ ಇಂಟಿಮೇಟ್ ಸೀನ್ ನೋಡಿ ಪಡ್ಡೆ ಹೈಕಳು ಫಿದಾ ಆಗಿದ್ದಾರೆ. ಸಿನಿಮಾದ ಹಾಡು ರಿಲೀಸ್ ಆಗಿರುವ ಬಗ್ಗೆ ನಟಿ ತನಿಷರವರು ಪೋಸ್ಟ್ ಮಾಡಿದ್ದಾರೆ. ತನಿಷ ನಟನೆಯ ಪೆಂಟಗನ್ ಸಿನಿಮಾವು ಬಹುನಿರೀಕ್ಷೆಯನ್ನು ಹುಟ್ಟುಹಾಕಿದೆ.