Tamilnadu tirappur yuvaraja and sangeeta : ವಿವಾಹೇತರ ಸಂಬಂಧಗಳು ಜೀವವನ್ನು ಬ ಲಿಕೊಡುತ್ತವೆ. ತಾತ್ಕಾಲಿಕ ಸುಖಕ್ಕಾಗಿ ತನ್ನನ್ನು ಕಟ್ಟಿಕೊಂಡವರನ್ನು, ಪ್ರೀತಿಸಿದವರನ್ನು ಕೊ ಲ್ಲಲೂ ಹಿಂಜರಿಯುವುದಿಲ್ಲ. ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯನ್ನು ಆತನಿಂದಲೇ ಬ ರ್ಬರವಾಗಿ ಹ ತ್ಯೆ ಮಾಡಿರುವ ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಮುತ್ತುಕೂರು ಕೊಡುಮುಡಿ ಪ್ರದೇಶದ ಯುವರಾಜ್ (37) ಕೆಲ ಸಮಯದ ಹಿಂದೆ ಸಂಗೀತಾ (34) ಅವರನ್ನು ವಿವಾಹವಾಗಿದ್ದರು.
ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದರು. ಬ್ಯೂಟಿಷಿಯನ್ ಕೋರ್ಸ್ ಮಾಡಿರುವ ಸಂಗೀತ್ ಅವರು ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಈ ವೇಳೆ ಆಕೆಗೆ ಅದೇ ಪ್ರದೇಶದ ವಿವೇಕ್ (25) ಎಂಬ ಯುವಕನ ಜೊತೆಗೆ ಸ್ನೇಹ ಬೆಳೆದಿತ್ತು. ದಿನವೂ ಬ್ಯೂಟಿ ಪಾರ್ಲರ್ ಗೆ ಹೋಗುವ ಸಲುವಾಗಿ ಆಗಾಗ ಮಾತನಾಡುತ್ತಾ ದಿನಕಳೆದಂತೆ ಆತ್ಮೀಯರಾದರು. ಕೊನೆಗೆ ದೈಹಿಕವಾಗಿ ಇಬ್ಬರೂ ಸೇರಿದ್ದು, ಇವರಿಬ್ಬರ ನಡುವೆ ಗಾಢವಾದ ಸಂಬಂಧವೊಂದು ಹುಟ್ಟಿಕೊಂಡಿತ್ತು.
ಸಂಗೀತಾ ಆಗಾಗ್ಗೆ ತನ್ನ ಪತಿ ಕಣ್ಣುಮುಚ್ಚಿ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಳು. ಅಷ್ಟೇ ಅಲ್ಲದೇ ಸುತ್ತಾಡುತ್ತಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಯುವರಾಜ್ ತನ್ನ ಹೆಂಡತಿಯನ್ನು ಬುದ್ಧಿ ಹೇಳಿದ್ದು, ಸರಿಮಾಡಿಕೊಳ್ಳುವಂತೆ ಹೇಳಿದ್ದನು. ಸಂಗೀತಾ ಮಾತ್ರ ತನ್ನ ನಡವಳಿಕೆಯಲ್ಲಿ ಸ್ವಲ್ಪವು ಬದಲಾವಣೆಯನ್ನು ಮಾಡಿಕೊಳ್ಳಲಿಲ್ಲ. ಕೊನೆಗೆ ಸಂಗೀತಾ ಗಂಡನನ್ನು ಬಿಟ್ಟು ಗೆಳೆಯನ ಜೊತೆ ಹೋಗಲು ನಿರ್ಧರಿಸಿದಳು.
‘ನಾನು ನನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋಗುತ್ತೇನೆ. ಒಟ್ಟಿಗೆ ಎಲ್ಲೋ ಹೋಗಿ ಮದುವೆಯಾಗೋಣ. ಬ್ಯೂಟಿ ಪಾರ್ಲರ್ ಖರೀದಿಸಿ ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಸಂಗೀತಾ ಹೇಳಿದ್ದರು. ಆದರೆ ಟೈಂಪಾಸ್ ಗಾಗಿ ಸಂಗೀತಾ ಜೊತೆಗೆ ಅ ಕ್ರಮ ಸಂಬಂಧ ಮುಂದುವರಿಸಿದ್ದ ವಿವೇಕ್ ಆಕೆಯನ್ನು ಮದುವೆಯಾಗಲು ಇಷ್ಟವಿರಲಿಲ್ಲ.
ತನಗಿಂತ ದೊಡ್ಡವನಾದ ಎರಡು ಮಕ್ಕಳ ತಾಯಿಯನ್ನು ಮದುವೆಯಾಗುವ ಯೋಚನೆ ಕೂಡ ಮಾಡಿರಲಿಲ್ಲ. ಆದರೆ ಸಂಗೀತಾ ಕೆಲ ತಿಂಗಳಿಂದ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಈ ಮಧ್ಯೆ, ಲಾಕ್‌ಡೌನ್ ಪ್ರಾರಂಭವಾದ ಕಾರಣ ಸಂಗೀತಾ ಬ್ಯೂಟಿ ಪಾರ್ಲರ್ ಅನ್ನು ಮುಚ್ಚ ಬೇಕಾಯಿತು. ಈ ವೇಳೆಯಲ್ಲಿ ವಿವೇಕ್ ಜೊತೆಗೆ ಮಾತಾನಾಡಲು ಸಾಧ್ಯವಾಗಿರಲಿಲ್ಲ.
ಇತ್ತ ವಿವೇಕ್ ಗೆ ಕರೆ ಮಾಡಿ ಆತನ ಆಸೆ ಈಡೇರಿಸುವಂತೆ ಕಿರುಕುಳ ನೀಡಿದ್ದಳು. ಆದರೆ ಒಂದು ದಿನ ಪತಿ ಯುವರಾಜ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರಿಂದ ಸಂಗೀತಾಗೆ ಅವಕಾಶ ಸಿಕ್ಕಿತು. ಆ ಕೂಡಲೇ ವಿವೇಕ್ ಗೆ ಫೋನ್ ಮಾಡಿ ಮನೆಗೆ ಕರೆಸಿಕೊಂಡಳು. ಈ ಇಬ್ಬರೂ ಏಕಾಂಗಿಯಾಗಿ ಸಮಯ ಕಳೆಯುತ್ತಿದ್ದ ವೇಳೆ ಸಂಗೀತಾ ತನ್ನನ್ನು ಎಲ್ಲೋ ಕರೆದುಕೊಂಡು ಹೋಗುವಂತೆ ಒತ್ತಡ ಹೇರಿದ್ದಳು.
ಸಂಗೀತಾಳ ಜೊತೆಗೆ ಹೋಗಲು ಇಷ್ಟಪಡದ ವಿವೇಕ್ ತಂದಿದ್ದ ವಿ ಷದ ಮಾತ್ರೆಗಳನ್ನು ಕೂಲ್ ಡ್ರಿಂಕ್ ನಲ್ಲಿ ಬೆರೆಸಿ ಕುಡಿಸಿದ್ದನು.ಬಳಿಕ ಆಕೆಯ ಕತ್ತು ಹಿ ಸುಕಿ ಕೊ ಲೆ ಮಾಡಿ ಪರಾರಿಯಾಗಿದ್ದನು. ಸ್ವಲ್ಪ ಸಮಯದ ಮನೆಗೆ ಬಂದ ಯುವರಾಜ್ ತನ್ನ ಹೆಂಡತಿ ಹಾಸಿಗೆಯ ಮೇಲೆ ಮಲಗಿರುವುದನ್ನು ನೋಡಿ ಶಾಕ್ ಆಗಿದ್ದು, ಸಂಗೀತಾ ಮೃ-ತಪಟ್ಟಿರುವುದು ಖಚಿತವಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದನು.
ತನಿಖೆ ವೇಳೆ ಅಕ್ರಮ ಸಂಬಂಧದ ಅಂಶ ಬೆಳಕಿಗೆ ಬಂದಿದ್ದರಿಂದ ಪೊಲೀಸರು ವಿವೇಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆತ ತಪ್ಪೊಪ್ಪಿಕೊಂಡಿದ್ದನು. ಪೊಲೀಸರು ಆತನ ವಿರುದ್ಧ ಕೊ ಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಅಕ್ರಮ ಸಂಬಂಧವು ಅನಾಹುತಕ್ಕೆ ಕಾರಣವಾದದ್ದು ನಿಜಕ್ಕೂ ವಿಪರ್ಯಾಸ.