ಪ್ರೀತಿಯೂ ಮಾಯೆ, ಒಮ್ಮೆ ಬಿದ್ದರೆ ಅದರಿಂದ ಹೊರಬರುವುದು ಕಷ್ಟ ಹೌದು, ನಾಲ್ಕು ವರ್ಷಗಳ ಕಾಲ ಆಕೆಯನ್ನು ಹಿಂಬಾಲಿಸಿ, ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯೂ ಚಿಕ್ಕಮ್ಮನ ಜೊತೆಗೆ ಅ-ಕ್ರಮ ಸಂಬಂಧ ಹೊಂದಿದ್ದನು. ಅಷ್ಟೇ ಅಲ್ಲದೇ ಪ್ರೀತಿಸಿದ ಹುಡುಗಿಯೂ ತಂದಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾನೆ. ತಾಯಿ ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಪೀಡಿಸಿದ್ದಾನೆ. ಆದರೆ ಈತನು ನೀಡುತ್ತಿದ್ದ ಹಿಂ-ಸೆ ತಾಳಲಾರದ ಚಿತ್ರಾ (Chitraa) ತೆಗೆದುಕೊಂಡ ನಿರ್ಧಾರ ಕೇಳಿದರೆ ಶಾಕ್ ಆಗುವುದು ಪಕ್ಕಾ.
ಅನ್ಬರಸನ್ (Anbarasan) (27) ಎಂಬ ಯುವಕ ತಮಿಳುನಾಡಿ (Tamilunadu)ನ ತೇಣಿ ಜಿಲ್ಲೆಯ ಚಿನ್ನಮನ್ನೂರು (Chinnamannuru) ಪ್ರದೇಶದಲ್ಲಿ ನವಾಸಿಸುತ್ತಿದ್ದಾನೆ. ಇತ್ತ ಚಿನ್ನಮಣ್ಣೂರು ಬಡಾವಣೆಯಲ್ಲಿ ವಾಸವಾಗಿರುವ ಯುವತಿ ಚಿತ್ರಾ (24), ಅನ್ಬರಸನಿಗೆ ಮೊದಲೇ ಗೊತ್ತಿತ್ತು. ನಾಲ್ಕು ವರ್ಷಗಳ ಕಾಲ ಚಿತ್ರಾಳನ್ನು ಹಿಂಬಾಲಿಸಿದ್ದ ಅನ್ಬರಸನ್ ಅವಳನ್ನು ಪ್ರೀತಿಸಿ ಮದುವೆಯಾಗಿದ್ದನು.
ಮದುವೆಯ ನಂತರ ಅನ್ಬರಸನ್ (Anbarasan) ಕೊಯಮತ್ತೂರಿನ ಕರುಮತ್ತಂಪಟ್ಟಿ ಬಳಿಯ ಇಂದಿರಾನಗರದಲ್ಲಿ ಚಿತ್ರಾ ದಂಪತಿ ಕ್ಯಾಂಪುರಂ ನಲ್ಲಿ ವಾಸವಾಗಿದ್ದರು. ಅನ್ಬರಸನ್ ಮತ್ತು ಚಿತ್ರಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮದುವೆಯಾದಾಗಿನಿಂದ ಇಬ್ಬರು ಹೆಣ್ಣುಮಕ್ಕಳು ಹುಟ್ಟುವವರೆಗೂ ಅನ್ಬರಸನ್ ತನ್ನ ಪತ್ನಿ ಚಿತ್ರಾ ಸುಖವಾಗಿ ಸಂಸಾರ ಮಾಡುತ್ತಿದ್ದರು. ಆದರೆ ಈ ದಂಪತಿಗಳ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅನ್ಬರಸನ್ ತನ್ನ ಪತ್ನಿ ಚಿತ್ರಾ ಮದುವೆಯಾಗಿದ್ದ ವೇಳೆಯಲ್ಲಿ ತಂದಿದ್ದ ಚಿನ್ನಾಭರಣಗಳನ್ನು ಹಾಕಿಕೊಂಡು ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಖುಷಿ ಪಡಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ, ಅನ್ಬರಸನ್ ಕೆಲವು ವಿವಾಹಿತ ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ (Affair) ಕೂಡ ಹೊಂದಿದ್ದಾನೆ.
*ಅನ್ಬರಸನ್ ಗೆ ಎಚ್ಚರಿಕೆ ನೀಡಿದ್ದ ಚಿತ್ರಾ ಕುಟುಂಬಸ್ಥರು*
ಅನ್ಬರಸನ್ ತನ್ನ ಗಂಡನ ವಿವಾಹಿತ ಮಹಿಳೆಯರು ಮತ್ತು ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದು ಚಿತ್ರಾ ಜಗಳವಾಡಿದ್ದಾಳೆ. ತಾನು ತಪ್ಪಿಸಿಕೊಳ್ಳುವ ಸಲುವಾಗಿ ಅನ್ಬರಸನ್ ಚಿತ್ರಾಳಿಗೆ ವರದಕ್ಷಿಣೆ ತರುವಂತೆ ಪೀಡಿಸಲು ಪ್ರಾರಂಭಿಸಿದ್ದಾನೆ. ಹೀಗಿರುವಾಗಹಿರಿಯರು ಸೇರಿಕೊಂಡು ಅನ್ಬರಸನ್‌ಗೆ ಬುದ್ಧಿ ಹೇಳಿ ಸಂಸಾರವನ್ನು ಸರಿ ಮಾಡಲು ಪ್ರಯತ್ನ ಪಟ್ಟಿದ್ದಾರೆ. ಅದಲ್ಲದೇ, ಚಿತ್ರಾ ಕುಟುಂಬಸ್ಥರು ಅನ್ಬರಸನ್‌ಗೆ ಎಚ್ಚರಿಕೆ ನೀಡಿದ್ದು, ಇನ್ನೊಮ್ಮೆ ಈ ರೀತಿ ಮಾಡಿದರೆ ಸುಮ್ಮಬನೆ ಇರುವುದಿಲ್ಲ ಎಂದಿದ್ದಾರೆ.
*ಜೀವ ತೆಗೆದುಕೊಂಡ ಚಿತ್ರಾ*
ಪತಿ ಅನ್ಬರಸನ್ ಬದಲಾಗುವುದಿಲ್ಲ ಎಂದು ಚಿತ್ರಾ ನಿರ್ಧರಿಸಿದ್ದು, ಅಕ್ಕಪಕ್ಕದಲ್ಲಿ ವಾಸವಾಗಿರುವ ಸಂಬಂಧಿಕರು ದೇವಸ್ಥಾನಕ್ಕೆ ಹೋಗುತ್ತಿರುವ ವಿಷಯ ತಿಳಿದ ಚಿತ್ರಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅವರ ಜೊತೆ ಕಳುಹಿಸಿದ್ದಾಳೆ. ತದನಂತರದಲ್ಲಿ ಚಿತ್ರಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇ-ಣು ಬಿ-ಗಿದುಕೊಂಡು ಜೀವ ತೆಗೆದುಕೊಂಡಿದ್ದಾಳೆ.
*ಪ್ರಕರಣ ದಾಖಲಿಸಿಕೊಂಡು ಅನ್ಬರಸನ್ ಗಾಗಿ ಶೋಧ ನಡೆಸುತ್ತಿರುವ ಪೊಲೀಸರು*
ರಾತ್ರಿ ಮನೆಗೆ ತೆರಳಿದ ಅನ್ಬರಸನ್ ಪತ್ನಿ ನೇ-ಣು ಬಿಗಿದುಕೊಂಡಿರುವುದನ್ನು ಕಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾನೆ. ಅನ್ಬರಸನ್, ಆತನ ಪೋಷಕರು ಮತ್ತು ಅನ್ಬರಸನ್ ಸಹೋದರಿ ರೋಹಿಣಿ ಚಿತ್ರಹಿಂಸೆ ನೀಡಿದ್ದು, ಹೀಗಾಗಿ ಚಿತ್ರಾ ಆತ್ಮಹತ್ಯೆ (Sucide) ಮಾಡಿಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇತ್ತ ಅನ್ಬರಸನ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೋಲಿಸರು ತಿಳಿಸಿದ್ದಾರೆ.