ಸಾಮಾನ್ಯರಂತೆ ತೋಟದಲ್ಲಿ ದನ ಕಾಯುತ್ತಿರುವ ಖ್ಯಾತ ತಮಿಳು ನಟ ಸೂರ್ಯ! ಹೇಗಿದೆ ಗೊತ್ತಾ ಈ ನಟನ ತೋಟ ಇಲ್ಲಿದೆ ನೋಡಿ!!

ಸಿನಿಮಾರಂಗವು ಅನೇಕರ ಬದುಕಿಗೆ ವರದಾನವಾಗಿದೆ. ಈ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಅದೃಷ್ಟ ಪರೀಕ್ಷೆಗೆ ಇಳಿಯುವುದು ಅಷ್ಟು ಸುಲಭದ ಮಾತಲ್ಲ. ಸಿನಿಮಾ ಲೋಕವೆಂದರೆ ಬಣ್ಣಗಳಿಂದ ಕೂಡಿರುತ್ತದೆ.ಆದರೆ ಈ ಬಣ್ಣದ ಬದುಕು ತುಂಬಾನೇ ಕಷ್ಟ. ಈ ಲೋಕಕ್ಕೆ ಬಂದವರು ಎಲ್ಲರೂ ಕೂಡ ಯಶಸ್ಸು ಕಾಣುವುದಿಲ್ಲ. ಅದಲ್ಲದೆ, ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ.

ಅದೃಷ್ಟ ಕೈ ಹಿಡಿದ ಸೆಲೆಬ್ರಿಟಿಗಳು ಐಷಾರಾಮಿ ಬದುಕನ್ನು ನಡೆಸುತ್ತಿದ್ದಾರೆ. ಅಂತಹ ನಟರ ಸಾಲಿಗೆ ಖ್ಯಾತ ನಟ ಸೂರ್ಯ ಕೂಡ ಸೇರಿಕೊಳ್ಳುತ್ತಾರೆ. ದೇಶ ವಿದೇಶದಲ್ಲಿಯೂ ಫ್ಯಾನ್ ಫಾಲೋವರ್ಸ್ ಇದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಸೂರ್ಯರವರ ಸಿನಿಮಾ ಎಂದರೆ ಸಿನಿಮಾ ನೋಡಲು ಕಾಯುವವರೇ ಹೆಚ್ಚು. 1997 ರಲ್ಲಿ ತೆರೆ ಕಂಡ ನೇರಕ್ಕೂ ನೇರ್ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು.

ಆದರೆ ಮೊದಲ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಡಲಿಲ್ಲ. ತದನಂತರದ ದಿನಗಲಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಂಡು ಇಂದು ಸ್ಟಾರ್ ನಟರ ಸಾಲಿನಲ್ಲಿದ್ದಾರೆ. ಸಿನಿಮಾರಂಗದಲ್ಲಿ ಗುರುತಿಸಿಕೊಂಡು ಸೆಲೆಬ್ರಿಟಿಯಾದರೂ ಕೂಡ ತಮ್ಮ ಸಾಮಾಜಿಕ ಕೆಲಸಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ನಟ ಸೂರ್ಯ ನಟಿ ಜ್ಯೋತಿಕಾ ಅವರನ್ನು ಪ್ರೀತಿಸಿ ಮದುವೆಯಾದರು. ನಾಯಕಿಯಾಗಿ ವೃತ್ತಿಜೀವನದಲ್ಲಿ ಬೇಡಿಕೆಯಲ್ಲಿರುವಾಗಲೇ ಜ್ಯೋತಿ ಸೂರ್ಯ ಅವರನ್ನು ಮದುವೆಯಾಗಿ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಸೂರ್ಯ ಹಾಗೂ ಜ್ಯೋತಿಕಾ ಇಬ್ಬರು ಸಹ ಕೆಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ.

ಈ ಜೋಡಿ 2006 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಇದೀಗ ಈ ದಂಪತಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗಳ ದಿಯಾ ಒಬ್ಬ ಮಗನ ಹೆಸರು ದೇವ್. ಸದ್ಯಕ್ಕೆ ನಟ ಸೂರ್ಯ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದರೆ ನಟಿ ಜ್ಯೋತಿಕಾರವರು ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ನಟ ಸೂರ್ಯರವರು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆಯುತ್ತಾರೆ.

ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟ ಸೂರ್ಯರವರ ಬಳಿ ಕೋಟಿಗಟ್ಟಲೆ ಆಸ್ತಿಯಿದೆ. ಅದರ ತನ್ನದೇ ಆದ ಸ್ವಂತ ಫಾರ್ಮ್ ಹೌಸ್ ಹೊಂದಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ನಟ ಸೂರ್ಯರವರು ಎತ್ತನ್ನು ಮೇಯಿಸುತ್ತ ನಡೆದುಕೊಂಡು ಹೋಗುತ್ತಿದ್ದಾರೆ. ನಟನ ಈ ವಿಡಿಯೋ ನೋಡಿ ಫ್ಯಾನ್ಸ್ ಗಳು ಶಾಕ್ ಆಗಿದ್ದಾರೆ. ಅದಲ್ಲದೇ ಸ್ಟಾರ್ ನಟನ ಸಿಂಪ್ಲಿಸಿಟಿಗೆ ಮನಸೋತಿದ್ದಾರೆ.

Leave a Reply

Your email address will not be published. Required fields are marked *