46 ವಯಸ್ಸಿಗೆ ಕಿರುತೆರೆಯ ನಟಿಯನ್ನು ಮದುವೆಯಾಗಿ ಆಸೆ ತೀರಿಸಿಕೊಂಡ ನಟ ರೆಡಿನ್ ಕಿಂಗ್ಸ್ಲಿ, ಮದುವೆಯ ಫೋಟೋ ವೈರಲ್

ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ ರೆಡಿನ್ ಕಿಂಗ್ಸ್ಲಿ (Redin Kingsli) ಮತ್ತು ತಮಿಳು ಕಿರುತೆರೆ ನಟಿ ಸಂಗೀತಾ (Sangeetha) ರವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 46 ವರ್ಷದ ರೆಡಿನ್ ಕಿಂಗ್ಸಿ ಅವರು 25 ವರ್ಷದ ಸಂಗೀತಾ ಅವರನ್ನು ವರಿಸಿದ್ದಾರೆ. ಈ ಜೋಡಿಯು ಡಿಸೆಂಬರ್ 10 ರಂದು ಚೆನ್ನೈನಲ್ಲಿ ಮದುವೆ ಆಗಿದೆ.

ಈ ಜೋಡಿಯ ಮದುವೆಯ ಮುದ್ದಾದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರೆಡಿನ್ ಕಿಂಗ್ಸ್ಲಿ ಅವರು ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದರೆ ನಟಿ ಸಂಗೀತಾರವರು ಕಿರುತೆರೆ ಲೋಕದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಆದರೆ ಈ ರೆಡಿನ್ ಮತ್ತು ಸಂಗೀತಾ ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗಿದೆ.

ಈ ಜೋಡಿ ಒಂದೆರಡು ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾ ಹಾಗೂ ರೆಡ್ಡಿನ್ ಕಿಂಗ್ಸ್ಲೆ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸಿ ಈ ಜೋಡಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅದಲ್ಲದೇ ಈ ಜೋಡಿಯು ತಮ್ಮ ಮದುವೆಯ ಬಗ್ಗೆ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ರೆಡಿನ್ ಅವರು ತಮಿಳು ಸಿನಿಮಾರಂಗ (Tamil Industry) ದಲ್ಲಿ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರು.

ಮೊದಲು ಅವಳ್ ವರುವಾಳ’ (Aval Varuvala) ಚಿತ್ರದ ಹಾಡೊಂದರಲ್ಲಿ ರೆಡಿನ್ ಕಾಣಿಸಿಕೊಂಡಿದ್ದು, ಆದಾದ ಬಳಿಕ ನಟನಾಗಿ ಕೊಲಮಾವು ಕೋಕಿಲಾ (Kolamavu Kokila) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಕಳೆದ 5-6 ವರ್ಷಗಳ ಹಿಂದೆ ರೆಡಿನ್ ಅವರ ವೃತ್ತಿ ಜೀವನವೇ ಬದಲಾಗಿ ಹೋಯಿತು. ಸಿನಿಮಾರಂಗದಲ್ಲಿ ಸಾಲು ಸಾಲು ಅವಕಾಶಗಳು ಬರತೊಡಗಿದವು.

ಈಗಾಗಲೇ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅದಲ್ಲದೇ ಸದ್ಯಕ್ಕೆ ರೆಡಿನ್ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಇತ್ತ ಕಿರುತೆರೆಯ ನಟಿ ಸಂಗೀತಾರವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ತಮಿಳು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸಂಗೀತಾರವರು ಸದ್ಯಕ್ಕೆ ಆನಂದ ರಾಗಂ (Anand Ragam) ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಸುಖಕರವಾಗಿರಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *