Tameem and tasleen : ಮನೆಯಲ್ಲಿ ಮಗನ ಬರ್ತ್ಡೇ ಆಚರಿಸಿದ್ದ ತಮೀಮ್ ಅನ್ಸಾರಿ ದಂಪತಿಗಳು, ಮರುದಿನ 44 ಲಕ್ಷ ಹಣ ನಾಪತ್ತೆ, ಪೊಲೀಸರ ತನಿಖೆಯ ವೇಳೆ ಹೊರ ಬಿತ್ತು ಅಸಲಿ ವಿಚಾರ.. ಮನುಷ್ಯನು ಅಪ್ಡೇಟ್ ಹೊಂದುತ್ತಿದ್ದಂತೆ ಸಂಬಂಧಗಳ ಬೆಲೆ ತಿಳಿದಿಲ್ಲ. ಎಲ್ಲಾ ಸಂಬಂಧಗಳನ್ನು ಒಂದೇ ತಕ್ಕಡಿಗಾಗಿ ತೂಗುತ್ತಿದ್ದಾನೆ. ಯಾರು ಇಲ್ಲದೇ ಹೋದರೂ ಕೂಡ ಬದುಕಬಲ್ಲೆ ಎನ್ನುವ ಬಂಡು ಧೈರ್ಯವು ಎಲ್ಲರನ್ನು ಆವರಿಸಿಬಿಟ್ಟಿದೆ.
ಅದಲ್ಲದೇ ತಾತ್ಕಾಲಿಕ ಸಂಬಂಧಗಳ ಮೋಹಕ್ಕೆ ಬಿದ್ದಿರುವ ಮನುಷ್ಯನು ಜೀವನ ಪರ್ಯಂತ್ಯ ಇರುವ ಸಂಬಂಧವನ್ನು ದೂರ ಮಾಡಿಕೊಳ್ಳುತ್ತಿದ್ದಾನೆ ಎನ್ನುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಮನುಷ್ಯನ ಮನಸ್ಥಿತಿಯೂ ಎಷ್ಟರ ಮಟ್ಟಿಗೆ ಬದಲಾಗಿದೆ ಎನ್ನುವುದಕ್ಕೆ ಈ ಘಟನೆಯೂ ಸಾಕ್ಷಿಯಾಗಿದೆ. ತಮೀಮ್ ಅನ್ಸಾರಿ ಚೆನ್ನೈನ ಮಂಟೈವೆಲ್ಲಿನವರು.
ತಮೀಮ್ ಅನ್ಸಾರಿ 40 ವರ್ಷ ವಯಸ್ಸಿನವರಾಗಿದ್ದು, ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ತಮೀಮ್ ಅನ್ಸಾರಿ ಪತ್ನಿ ತಸ್ಲೀನ್. ಈ ದಂಪತಿಗಳಿಗೆ 13 ವರ್ಷದ ಮಗಳು ಮತ್ತು 8 ವರ್ಷದ ಮಗ ಇದ್ದರು. 2020 ನ.20ರಂದು ಮನೆಯಲ್ಲೇ ಮಗನ ಹುಟ್ಟುಹಬ್ಬ ಆಚರಿಸಿದ್ದರು. ಆದರೆ. ಮರುದಿನ ತಸ್ಲಿನ್ ತನ್ನ ಮನೆಯಲ್ಲಿ 44 ಲಕ್ಷ ಹಣ ನಾಪತ್ತೆಯಾಗಿದೆ ಎಂದು ಪತ್ನಿಯು ತನ್ನ ಪತಿಗೆ ತಿಳಿಸಿದ್ದಳು. ಬರ್ತ್‌ಡೇ ಪಾರ್ಟಿಗೆ ಬಂದಿದ್ದ ತಮೀಮ್‌ನ ಕಿರಿಯ ಸಹೋದರನ ಪತಿಯೇ ಹಣ ಕದ್ದಿದ್ದು,
ಅದನ್ನು ನೋಡಿರುವುದಾಗಿ ತಸ್ಲಿನ್ ಹೇಳಿದ್ದಳು. ಬಳಿಕ ತಮೀಮ್ ಪೊಲೀಸರಿಗೆ ದೂ-ರು ನೀಡಿದ್ದು, ಆದರೆ, ಪೊಲೀಸರು ತಸ್ಲಿನ್ ಳನ್ನು ವಿಚಾರಿಸಿದಾಗ ಆಕೆಯ ಹೇಳಿಕೆಯೂ ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಕೊನೆಗೆ ಆಕೆಯ ಸೆಲ್ ಫೋನ್ ಪರಿಶೀಲಿಸಿದಾಗ ತಸ್ಲೀನ್ ಪುರಶೈವಕ್ ಮೂಲದ ರಿಯಾಜ್ ಅಹ್ಮದ್ ಜೊತೆಗೆ ಆಗಾಗ ಫೋನ್ ನಲ್ಲಿ ಮಾತನಾಡುತ್ತಿದ್ದಳು ಎನ್ನುವುದು ಬೆಳಕಿಗೆ ಬಂದಿತ್ತು.
ತದನಂತರ ರಿಯಾಸ್ ನನ್ನು ಹಿಡಿದು ತನಿಖೆ ನಡೆಸಿದಾಗ ತಸ್ಲಿನ್ ಪತಿ ವ್ಯಾಪಾರ ನಿಮಿತ್ತ ಆಗಾಗ ವಿದೇಶಕ್ಕೆ ಹೋಗುತ್ತಿದ್ದು, ಫೇಸ್ ಬುಕ್ ಮೂಲಕ ರಿಯಾಸ್ ಗೆ ತಸ್ಲಿನ್ ಪರಿಚಯವಾಗಿತ್ತು ಎನ್ನುವುದು ತಿಳಿದು ಬಂದಿತ್ತು. ಅಷ್ಟೇ ಅಲ್ಲದೇ ಈ ಪರಿಚಯವು ಪ್ರೇಮಕ್ಕೆ ತಿರುಗಿದ್ದು,
ಮದುವೆಯ ಸಂಬಂಧವನ್ನು ಮುರಿದು ಹಾಕಿತ್ತು. ಈ ಇಬ್ಬರೂ ಆಗಾಗ್ಗೆ ಖಾಸಗಿಯಾಗಿ ಭೇಟಿಯಾಗುತ್ತಿದ್ದರು. ಈ ವೇಳೆ ತಸ್ಲೀನ್ ತನ್ನ ಪತಿ ಸಂಪಾದಿಸಿದ ಹಣ, ಚಿನ್ನದ ನಾಣ್ಯ, ಆಭರಣಗಳನ್ನು ರಿಯಾಜ್‌ಗೆ ಧಾರೆ ಎರೆದಿದ್ದಳು. ಇಬ್ಬರೂ ಒಟ್ಟಿಗಿರಲು ಪ್ಲಾನ್ ಮಾಡಿದ್ದು, ಮನೆಯಲ್ಲಿದ್ದ 44 ಲಕ್ಷ ಹಣವನ್ನು ರಿಯಾಜ್ ಗೆ ನೀಡಿ ನಂತರ ಏನೂ ತಿಳಿಯದವರಂತೆ ನಟಿಸಿದ್ದಳು ಎನ್ನುವುದು ತಿಳಿದುಬಂದಿತ್ತು.
ಈ ಬಗ್ಗೆ ಈಕೆಯ ಮಕ್ಕಳೂ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಪೊಲೀಸರು ಇಬ್ಬರನ್ನು ಬಂಧಿಸಿ ರಿಯಾಜ್ ಬಳಿಯಿದ್ದ 44 ಲಕ್ಷ ರೂಪಾಯಿ ಹಾಗೂ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡು ತಮೀಮ್‌ಗೆ ಹಸ್ತಾಂತರಿಸಿದ್ದರು.