ತಾನು ಪ್ರೀತಿಸಿದ ಹುಡುಗನ ಜೊತೆಗೆ ಮದುವೆಯಾಗಲಿದ್ದಾರಾ ನಟಿ ತಮನ್ನಾ, ಈ ಬಗ್ಗೆ ಸುಳಿವು ಕೊಟ್ಟ ನಟಿ ಹೇಳಿದ್ದೇನು ಗೊತ್ತಾ?

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ತೆಲುಗು (Telugu), ತಮಿಳು (Tamil) ಹಾಗೂ ಹಿಂದಿ (Hindi) ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಾ, ಪಡ್ಡೆ ಹುಡುಗರ ನಿದ್ದೆ ಕದಿಯುತ್ತಾರೆ. ವೈಯುಕ್ತಿಕ ವಿಚಾರ ಗಳನ್ನು ಗುಟ್ಟಾಗಿ ಇಟ್ಟುಕೊಳ್ಳುವ ತಮನ್ನಾ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಇದೀಗ ಮಿಲ್ಕಿ ಬ್ಯೂಟಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ.

ಈ ವರ್ಷ ಹೊಸ ವರ್ಷವನ್ನು ತಮ್ಮ ಪ್ರೀತಿಪಾತ್ರರೊಂದಿಗೆ ಗೋವಾದಲ್ಲಿ ಸ್ವಾಗತಿಸಿದ್ದರು. ನಟ ವಿಜಯ್ ಅವರನ್ನು ತಬ್ಬಿಕೊಂಡು ಮುತ್ತನಿಟ್ಟಿದ್ದರು. ಆದರೆ ಈ ವೀಡಿಯೋದಲ್ಲಿ ನಟಿ ತಮನ್ನಾ ಅಥವಾ ನಟ ವಿಜಯ್ ವರ್ಮಾ ಅವರ ಮುಖಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ ಆದರೂ ಸಹ ಅಭಿಮಾನಿಗಳು ಇದು ತಮನ್ನಾ ಹಾಗೂ ವಿಜಯ್ ವರ್ಮ ಎನ್ನುತ್ತಿದ್ದರು. ಹೀಗಾಗಿ ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ (Actor Vijay Sharmaa) ನಡುವೆ ಕೆಲವು ಸಂಬಂಧವಿದೆ ಎನ್ನಲಾಗಿದೆ.

ನಟಿ ಇಷ್ಟು ದಿನ ಪ್ರೀತಿಯ ವಿಚಾರವನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ಕೊನೆಗೂ ತಮ್ಮ ಡೇಟಿಂಗ್ ಕುರಿತು ಸುಳಿವು ಬಿಟ್ಟುಕೊಂಡಿದ್ದು, ನನಗೆ ಸಹ ನಟ ವಿಜಯ್ ವರ್ಮಾ ಎಂದರೆ ತುಂಬಾ ಇಷ್ಟ ಎಂದಿದ್ದಾರೆ. ಇತ್ತೀಚೆಗಸ್ಟೇ ತಮನ್ನಾ ಗೆಳೆಯ ವಿಜಯ್ ವರ್ಮಾ (Vijay Sharmaa) ರವರ ಜೊತೆಗೆ ಹೆಚ್ಚಾಗುತ್ತಿದೆ. ಮುಂಬೈನ ಬೀದಿಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಆದರೆ ನಟಿ ತಮನ್ನಾ ಮದುವೆಯ ಕುರಿತು ಅಧಿಕೃತವಾಗಿ ಯಾವಾಗ ಘೋಷಿಸುತ್ತಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.ಅಂದಹಾಗೆ, ಮುಂಬೈ (Mumbai) ನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟು, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ಚಾಂದ್ ಸಾ ರೋಷನ್ ಚೆಹರಾ ಚಿತ್ರದಲ್ಲಿ ನಟಿಸಿದ್ದರು.

ಹೀಗೆ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳಲ್ಲಿ ನಟಿಸುವ ಮೂಲಕ ತಮನ್ನಾ ಭಾಟಿಯ ಫೇಮಸ್ ಆದರು. ಇತ್ತೀಚೆಗಿನ ದಿನಗಳಲ್ಲಿ ನಟಿ ತಮನ್ನಾ ಭಾಟಿಯಾರವರ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ, ಆದರೆ ನಟಿಯು ಸಿನಿಮಾದ ಜೊತೆಗೆ ವೆಬ್ ಸಿರೀಸ್ ನಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *