Tamannaah bhatia boyfriend : ಬಾಲಿವುಡ್ ಹಾಗೂ ಸೌತ್ ಇಂಡಿಯಾ ಫಿಲ್ಮ್ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯಾಗಿರುವವರು ನಟಿ ತಮನ್ನಾ ಭಾಟಿಯಾ. ಹೌದು, ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಸದ್ಯಕ್ಕೆ ನಟಿ ತಮನ್ನಾ ಲವ್ ಸ್ಟೋರಿ ಸದ್ಯ ವೈರಲ್ ಆಗಿದೆ.
ಗಾಸಿಫ್ ಗಳಿಂದ ಅಂತರ ಕಾಯ್ದುಕೊಂಡಿದ್ದ ನಟಿ ಹೆಸರು ಇದೀಗ ನಟನ ಜೊತೆಗೆ ಥಳುಕು ಹಾಕಿಕೊಂಡಿದೆ. ಹೊಸ ವರ್ಷದ ವಿಡಿಯೋದಲ್ಲಿ ತಮನ್ನಾ ಲವ್ ಸ್ಟೋರಿಯ ಸುಳಿವು ಸಿಕ್ಕಿದ್ದು, ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ತಮನ್ನಾ. ನಟಿ ತಮನ್ನಾ ಡೇಟಿಂಗ್ ಮಾಡುತ್ತಿರುವ ನಟ ಯಾರೆಂದರೆ ಅದುವೇ ಮಿರ್ಜಾಪುರ್ ಖ್ಯಾತಿಯ ನಟ ವಿಜಯ್ ವರ್ಮ.

ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಒಟ್ಟಿಗೆ ಹೊಸ ವರ್ಷ ಆಚರಿಸಿದ್ದು, ಈ ಇಬ್ಬರೂ ಗೋವಾದಲ್ಲಿ 2023ರನ್ನು ಸ್ವಾಗತಿಸಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿದ್ದಾರೆ. ಅಂದಹಾಗೆ, ತಮನ್ನಾ ಪಾರ್ಟಿಯಲ್ಲಿ ಪಿಂಕ್ ಬಣ್ಣದ ಡ್ರೆಸ್ ಧರಿಸಿದ್ದರು.
ವಿಜಯ್ ವರ್ಮಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಈ ಹಿಂದೆ ತಮನ್ನಾ ಮತ್ತು ವಿಜಯ್ ವರ್ಮಾ ಆಗಗಾ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಆದರೆ ಎಲ್ಲಿಯೂ ಈ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎನ್ನುವುದರ ಕ್ಲೂ ಕೂಡ ಇರಲಿಲ್ಲ. ಆದರೆ ಇದೀಗ ಹೊಸ ವರ್ಷ ಒಟ್ಟಿಗೆ ಆಚರಿಸಿದ್ದು ಸುದ್ದಿಯಾಗಿದ್ದಾರೆ ಎನ್ನಬಹುದು. ಹೊಸ ವರ್ಷ ಆಚರಣೆ ಮೂಲಕ ತಮನ್ನಾ ತನ್ನ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎನ್ನಲಾಗಿದೆ.
ಸದ್ಯಕ್ಕೆ ತಮನ್ನಾ ಹಾಗೂ ವಿಜಯ್ ಅವರು ಹೊಸ ವರ್ಷವನ್ನು ಜೊತೆಯಾಗಿ ಬರ ಮಾಡಿಕೊಂಡಿರುವ ವಿಡಿಯೋವೊಂದು ಗಮನ ಸೆಳೆಯುತ್ತಿದ್ದು, ಆದರೆ ಈ ವಿಡಿಯೋವನ್ನು ಇಬ್ಬರೂ ಕೂಡ ಶೇರ್ ಮಾಡಿಕೊಂಡಿಲ್ಲ. ತಮನ್ನಾ ಹಾಗೂ ವಿಜಯ್ ವರ್ಮಾರವರ ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದು,
ಕೆಲವರು ತಮನ್ನಾ ಮತ್ತು ವಿಜಯ್ ಜೋಡಿಗೆ ವಿಶ್ ಮಾಡುತ್ತಿದ್ದಾರೆ. ಮತ್ತೋರ್ವ ನೀವು ತುಂಬಾ ಅದೃಷ್ಟವಂತ ವಿಜಯ್ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಈ ಸೆಲೆಬ್ರಿಟಿ ಜೋಡಿ ಅಧಿಕೃತ ಪಡಿಸುತ್ತಾರಾ ಎಂದು ಕಾದು ನೋಡಬೇಕು.
ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ತಮನ್ನಾ ತಮ್ಮ ಹದಿಮೂರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಟ್ಟರು. 2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ ಚಾಂದ್ ಸಾ ರೋಷನ್ ಚೆಹರಾ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳಲ್ಲಿ ನಟಿಸುವ ಮೂಲಕ ತಮನ್ನಾ ಭಾಟಿಯ ಫೇಮಸ್ ಆದರು.
ಅಲ್ಪಾವಧಿಯಲ್ಲಿ ತಮನ್ನಾ ಅವರು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು. ತೆಲುಗು ಮಾತ್ರವಲ್ಲದೆ ತಮಿಳಿನಲ್ಲಿ ಸಹ ಎಲ್ಲಾ ಸ್ಟಾರ್ ಗಳ ಜೊತೆ ನಟಿಸಿ, ಬ್ಲಾಕ್ ಬಸ್ಟರ್ ಹೀರೋಯಿನ್ ಎಂದು ಕರೆಸಿಕೊಂಡರು. ಆದರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ತಮನ್ನಾನವರ ಸಿನಿಮಾಗಳು ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ.

ಇತ್ತೀಚೆಗಷ್ಟೇ ತೆಲುಗಿನಲ್ಲಿ ತಮನ್ನಾ `ಗುರ್ತುಂದಾ ಶೀತಕಾಲಂ’ ಸಿನಿಮಾ ತೆರೆ ಕಂಡಿತ್ತು. ಕನ್ನಡದ ಲವ್ ಮಾಕ್‌ಟೇಲ್ ಸಿನಿಮಾದ ರಿಮೇಕ್ ಇದಾಗಿದ್ದು ತಮನ್ನಾ ಜೊತೆ ದಕ್ಷಿಣದ ನಟ ಸತ್ಯ ದೇವ್ ಅವರು ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು. ಡಿಸೆಂಬರ್ 9 ಕ್ಕೆ ತೆರೆ ಕಂಡ ಈ ಸಿನಿಮಾ ಅಂದುಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಸದ್ಯಕ್ಕೆ ತಮನ್ನಾ ಸಿನಿ ಲೋಕದಲ್ಲಿ ಸಕ್ರಿಯರಾಗಿದ್ದಾರೆ.