ಸ್ವಾತಿಮುತ್ಯಂ ಚಿತ್ರದಲ್ಲಿ ಕಮಲ್ ಹಾಸನ್ ಮತ್ತು ನಟಿಯ ನಡುವೆ ಮೂಡ್ ಬರಲು ನಿರ್ದೇಶಕ ಮಾಡಿದ್ದ ಪ್ಲಾನ್ ಏನಿತ್ತು ಗೊತ್ತಾ!! ರಸಿಕ ನಿರ್ದೇಶಕ ಮಾಡಿದ್ದೇನು ನೋಡಿ!!

Swati mutyam shooting stroy : ಸಿನಿಮಾ ಲೋಕ, ಬಣ್ಣದ ಬದುಕು ಈ ಹೆಸರು ಕೇಳುವಾಗ ಕಿವಿಗೆ ಇಂಪೆನಿಸುತ್ತದೆ. ಅದಲ್ಲದೇ ದೂರದಲ್ಲಿ ನಿಂತು ನೋಡುವವರಿಗೆ ಎಲ್ಲವೂ ಚೆನ್ನಾಗಿಯೇ ಕಾಣಿಸುತ್ತದೆ. ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ ಸಿನಿ ಲೋಕದಿಂದ ದೂರ ಸರಿಯುವುದು ಕಷ್ಟಕರ. ಸಿನಿ ಬದುಕು ಒಮ್ಮೆ ಒಬ್ಬ ಕಲಾವಿದರನ್ನು ಕೈ ಹಿಡಿದರೆ, ಅದೃಷ್ಟ ಒಲಿದು ಬಂದರೆ ನೇಮ್ ಫೇಮ್ ಎರಡು ಕೂಡ ತಾನಾಗಿಯೇ ಬಂದು ಬಿಡುತ್ತದೆ.

ಈ ಸಿನಿಮಾರಂಗಕ್ಕೆ ಬಂದವರಿಗೆಲ್ಲಾ ಅವಕಾಶಗಳ ಹಿಂದೆ ಅವಕಾಶಗಳು ಸಿಗಬೇಕೆಂದೇನಿಲ್ಲ. ಕೆಲವೊಮ್ಮೆ ಅವಕಾಶ ಸಿಗದೇ ಸಿನಿಮಾರಂಗದಿಂದ ದೂರ ಉಳಿಯಬಹುದು. ಈ ಬಣ್ಣದ ಜಗತ್ತು, ಎಲ್ಲರನ್ನೂ ಒಂದು ಕ್ಷಣವಾದರೂ ಸೆಳೆಯದೇ ಇರದು. ಈ ಬಣ್ಣದ ಜಗತ್ತಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಮತ್ತೆ ಆದರಿಂದ ಹೊರ ಬರುವುದು ತುಂಬಾನೇ ಕಷ್ಟ ಎಂದೇ ಹೇಳಬಹುದು. ತೆರೆ ಮೇಲೆ ನಟ ನಟಿಯರ ನಟನೆಯನ್ನು ನೋಡಲು ಖುಷಿಯೆನಿಸುತ್ತದೆ.

ಆದರೆ ಆ ನಟಿಯರು ತೆರೆ ಹಿಂದೆ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ.ಯೂನಿವರ್ಸಲ್ ಹೀರೋ ಎಂದೇ ಹೆಸರಾಗಿರುವ ಕಮಲ್ ಹಾಸನ್ ಅವರ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಹಲವು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ನೇಮ್ ಫೇಮ್ ಸೃಷ್ಟಿಸಿಕೊಂಡವರು. ಸ್ವಾತಿಮುತ್ಯಂ ಮತ್ತು ಸಾಗರ ಸಂಗಮ ಕಮಲ್ ಹಾಸನ್ ಅವರ ವೃತ್ತಿ ಜೀವನಕ್ಕೆ ತಿರುವು ಕೊಟ್ಟ ಸಿನಿಮಾ.

ಈ ಎರಡು ಸಿನಿಮಾಗಳಲ್ಲಿ ಕಮಲಹಾಸನ್ ಎಷ್ಟು ಅದ್ಭುತವಾಗಿ ನಟಿಸಿದ್ದಾರೆಂದು ಹೇಳಬೇಕಾಗಿಲ್ಲ. ಅವರ ಸ್ವಾತಿಮುತ್ಯಂ ಚಿತ್ರವೂ ಆ ಸಮಯದಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಹೌದು, ಕಲಾತಪಸ್ವಿ ಕೆ.ವಿಶ್ವನಾಥ್ ಅವರು ಸ್ವಾತಿಮುತ್ಯಂ ಚಿತ್ರವನ್ನು ನಿರ್ದೇಶಿಸಿದ್ದು, ಕಮಲ ಹಾಸನ್ ಅವರು ರಾಧಿಕಾರವರು ತೆರೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಮುಗ್ಧ ಹಾಗೂ ಮಂದಬುದ್ಧಿಯ ವ್ಯಕ್ತಿಯಾಗಿ ನಟಿಸಿದ್ದರು.

ಆ ಸಮಯದಲ್ಲಿ ಕಮಲ್ ಹಾಸನ್ ಅಂತಹ ಪಾತ್ರದಲ್ಲಿ ನಟಿಸುವುದು ಸಾಹಸ ಎನ್ನಬಹುದು. ಈ ಚಿತ್ರ ಬಂದ ನಂತರ ಚಿರಂಜೀವಿ ಕೂಡ ತಮ್ಮ ಆರಾಧನಾ ಚಿತ್ರದಲ್ಲಿ ಕಮಲ್ ಹಾಸನ್ ಅವರನ್ನು ಅನುಕರಣೆ ಮಾಡಿದ್ದರು. ಆದರೆ ಚಿರಂಜೀವಿಯವರಿಗೆ ಕಮಲ್ ಹಾಸನ್ ಅವರನ್ನು ಅನುಕರಣೆ ಮಾಡುವುದು ಸಾಧ್ಯವಾಗಲಿಲ್ಲ.ಅಂದಹಾಗೆ, ಕಲಾತಪಸ್ವಿ ಕೆ ವಿಶ್ವನಾಥ್ ಅವರ ನಿರ್ದೇಶನ ಆ ಕಾಲಕ್ಕೆ ಸಂಚಲನ ಮೂಡಿಸಿತ್ತು.

ಈ ಚಿತ್ರವು ಅನೇಕ ಪ್ರಶಸ್ತಿಗಳು ಮತ್ತು ಬಹುಮಾನಗಳನ್ನು ಸಹ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದಲ್ಲಿ ನಾಯಕ ಕಮಲ್ ಹಾಸನ್ ಗೆ ರಾಧಿಕಾ ತೆರೆ ಮೇಲೆ ಮೋಡಿ ಮಾಡಿದ್ದರು. ಆದರೆ ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಹಾಡಿನಲ್ಲಿ ನಟಿಸುವಾಗ ರಾಧಿಕಾ ಹಾಗೂ ಕಮಲ್ ಹಾಸನ್ ಅವರಿಗೆ ಸವಲೊಂದು ಎದುರಾಗಿತ್ತು. ಈ ಬಗ್ಗೆ ನಟಿ ರಾಧಿಕಾರವರು ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದರು.

ಇಬ್ಬರ ನಡುವಿನ ಆಪ್ತತೆಯನ್ನು ತೋರಿಸುವ ಹಾಡನ್ನು ಚಿತ್ರೀಕರಿಸುವಾಗ ನಿರ್ದೇಶಕರು ಅನೇಕ ಟೇಕ್‌ಗಳನ್ನು ತೆಗೆದುಕೊಳ್ಳಬೇಕಾಯಿತಂತೆ. ಇದರಿಂದ ಬೇಸತ್ತ ನಿರ್ದೇಶಕ ವಿಶ್ವನಾಥ್ , ರಾಧಿಕಾಳನ್ನು ತಮ್ಮ ಬಳಿಗೆ ಕರೆದು ಸುಗಂಧ ದ್ರವ್ಯವನ್ನು ಎರಚಿ ಕಮಲ್ ಹಾಸನ್ ಆ ಸೀನ್ ಮಾಡುವಾಗ ಮೂಡ್ ಬರುವಂತೆ ಮಾಡಿದ್ದರಂತೆ.

ಕೊನೆಗೆ ನಿರ್ದೇಶಕರು ಅಂದುಕೊಂಡಂತೆ ಆ ಹಾಡಿನ ಅಭಿನಯ ಮೂಡಿ ಬಂದಿದ್ದಂತೆ. ಆದರೆ ಕಮಲ ಹಾಸನ್ ಆ ವಿಚಾರದಲ್ಲಿ ರಾಧಿಕಾ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಂತೆ. ಈ ವಿಚಾರವನ್ನು ನಟಿ ರಾಧಿಕಾರವರೇ ಹೇಳಿಕೊಂಡಿದ್ದು, ಅಚ್ಚರಿಯೆನಿಸಿದರೂ ನಂಬಬೇಕಾದ ವಿಚಾರವಾಗಿದೆ.

Leave a Reply

Your email address will not be published. Required fields are marked *