ಕಿರುತೆರೆಯ ಯಂಗ್ ಅಮ್ಮ ಸ್ವಾತಿ ಗುರುದತ್ತ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ನಟಿಯ ಅಪರೂಪದ ಫೋಟೋಸ್!!

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರ ಪೈಕಿ ಸ್ವಾತಿ ಗುರುದತ್ತ್ (Swathi Gurudatt) ಕೂಡ ಒಬ್ಬರು. ಒಂದೂ ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಸ್ವಾತಿ ಇದೀಗ ತಾಯಿ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಸ್ವಾತಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿಮಣಿಯರಲ್ಲಿ ಒಬ್ಬವರೆಂದರೆ ತಪ್ಪಾಗಲ್ಲ. ಇವರು ನಟಿ ಪಂಡರಿಭಾಯಿ (Pandaribhayi) ಸಹೋದರಿ ನಟಿ ಮೈನಾವತಿ (Mainaavati) ಯುವರ ಸೊಸೆಯಾಗಿದ್ದು ಕಿರುತೆರೆ ಲೋಕದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.

ಸ್ವಾತಿಯವರ ಪತಿ ಗುರುದತ್ತ್ ಕೂಡ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಬ್ರಹ್ಮ ಗಂಟು (Brahma Gantu) , ಶ್ರೀರಸ್ತು ಶುಭಮಸ್ತು (Shreerastu Shubhamastu) ಮುಂತಾದ ಕಿರುತೆರೆ ಧಾರಾವಾಹಿಗಳಿಂದ ಪ್ರಸಿದ್ದರಾಗಿದ್ದಾರೆ. ಅನಂತು vs ನುಸ್ರತ್ (Anantu VS Nusrat) ರಾಜಕುಮಾರ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ನಟಿ ಸ್ವಾತಿಯವರು ‘ಗಟ್ಟಿಮೇಳ’ (Gattimela) ಧಾರಾವಾಹಿಯಲ್ಲಿ ವೇದಾಂತ್ ತಾಯಿ ವೈದೇಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ.

ಇದೀಗ ನಟಿ ಸ್ವಾತಿ ಗುರುದತ್ತ್ ಅವರ ಫ್ಯಾಮಿಲಿ ಜೊತೆಗಿನ ಫೋಟೋ (Family Photo) ವೊಂದು ವೈರಲ್ ಆಗಿದೆ. ಈ ಫೋಟೋದಲ್ಲಿ ನಟಿ ಸ್ವಾತಿ ಗುರುದತ್ತ್ ಅವರು ತನ್ನ ಮುದ್ದಾದ ಮಕ್ಕಳ ಜೊತೆಗೆ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಮೆಚ್ಚುಗೆ ಕೂಡ ವ್ಯಕ್ತವಾಗಿವೆ. ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ನಟಿ ಸ್ವಾತಿ ಗುರುದತ್ತ್ ಅವರು ತಮ್ಮ ಸಿನಿ ಬದುಕಿನ ಬಗ್ಗೆ ರಿವೀಲ್ ಮಾಡಿದ್ದರು.

ಈ ವೇಳೆಯಲ್ಲಿ ಮಾತನಾಡಿದ್ದ ಸ್ವಾತಿಯವರು, “ನಟನೆ ನನಗೆ ಬಹಳ ಖುಷಿ ನೀಡಿದೆ. ನಟನೆಯ ಹೊರತಾಗಿ ನನಗೇನೂ ಗೊತ್ತಿಲ್ಲ. ಹುಚ್ಚಿ ಪಾತ್ರದಿಂದ ಹಿಡಿದು ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಡಾಕ್ಟರ್‌ ಆಗಬೇಕು ಅಥವಾ ಐಎಎಸ್‌ ಆಗಬೇಕೆಂಬ ಆಸೆ ಇತ್ತು. ಅದು ನೆರವೇರಲಿಲ್ಲ. ಹಾಗಾಗಿ ಪಾತ್ರದಲ್ಲಾದರೂ ಐಎಎಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿತ್ತು. ಇತ್ತೀಚಿಗೆ ‘ಸಂಘರ್ಷ’ ಧಾರಾವಾಹಿಯಲ್ಲಿ ಐಎಎಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಅದು ನೇರವೇರಿದೆ” ಎಂದಿದ್ದರು.

“ಮದುವೆ ನಂತರ ನಾನು ನಟನೆಯಿಂದ ದೂರ ಉಳಿಯುವುದಕ್ಕೆ ಕಾರಣ ನನ್ನ ಮಗ. ಅವನ ಲಾಲನೆ ಪಾಲನೆಗೆ ಸಮಯ ಕೊಡಬೇಕಿತ್ತು. ಹಾಗಾಗಿ ನಾನು ಬ್ರೇಕ್‌ ತೆಗೆದುಕೊಂಡೆ. ನಟನೆಗೆ ಪುನಃ ಬರಲು ಕಾರಣ ನಟಿ ಹರಿಣಿ. ಅವರು ನನಗೆ ಯಾವಾಗಲೂ ಸ್ಫೂರ್ತಿ. ಮತ್ತೆ ನಟನೆಗೆ ಅವಕಾಶ ನೀಡಿದವರು ಅಶು ಬೆದ್ರ ಮತ್ತು ಶ್ರುತಿ ನಾಯ್ಡು. ಶ್ರುತಿ ನಾಯ್ಡು ಅವರಿಗೆ ನಾನು ಆಸ್ಥಾನ ಕಲಾವಿದೆ ಇದ್ದ ಹಾಗೆ. ಯಾವುದೇ ಹೊಸ ಪ್ರಾಜೆಕ್ಟ್ ಇದ್ದರೂ ನನ್ನ ಮೇಲಿನ ಅಭಿಮಾನದಿಂದ ಮೊದಲು ನನ್ನನ್ನೇ ಪಾತ್ರ ಮಾಡಿ ಎಂದು ಕೇಳುತ್ತಾರೆ. ಹಾಗಾಗಿ ಖುಷಿಯಿಂದ ಅಭಿನಯಿಸುತ್ತೇನೆ” ಎಂದಿದ್ದರು.

‘ಸಾಗರ ಸಂಗಮ’ ನಾನು ಕಮ್‌ಬ್ಯಾಕ್‌ ಮಾಡಿದ ಮೊದಲ ಧಾರಾವಾಹಿ. ಅಲ್ಲಿಂದ ಇಲ್ಲಿಯವರೆಗೂ ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ಈಗ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ತೃಪ್ತಿ ನೀಡಿದೆ” ಎಂದು ಹೇಳಿಕೊಂಡಿದ್ದರು. ಈಗಲೂ ಕೂಡ ನಟಿ ಸ್ವಾತಿ ಗುರುದತ್ತ್ ಅವರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ನಟಿಯೆನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *