ಬಾಲಿವುಡ್ ನಟಿ ಸ್ವರಾ ಭಾಸ್ಕರ್ ರಾ-ಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 16 ರಂದು ತನ್ನ ಟ್ವೀಟ್ ಮೂಲಕ ತಮ್ಮ ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ನಟಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಹಾಗೇಯೇ ನ್ಯಾಯಾಲಯದ ಮುಂದೆ ವಿವಾಹವಾದ ನಂತರ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಜೋಡಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಸ್ವರಾ ಭಾಸ್ಕರ್ ಕೂಡ ಇದೆ ಫೋಟೊವನ್ನು ಶೇರ್ ಮಾಡಿಕೊಂಡು ʻʻಅಮ್ಮನ ಮದುವೆಯ ಸಾರಿ,ಕಾನೂನು ಬದ್ಧವಾಗಿ ಮದುವೆಯಾಗಿದ್ದೇವೆ. ವಿಶೇಷ ವಿವಾಹ ಕಾಯಿದೆ ಅಡಿ, ಪ್ರೀತಿಸುವ ಹಕ್ಕು, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು, ಮದುವೆಯಾಗುವ ಹಕ್ಕುʼʼ ಎಂದು ಟ್ವೀಟ್ ಮಾಡಿದ್ದಾರೆ.
ನಟಿ ಸ್ವರಾ ಸ್ವತಃ ತಾವಿಬ್ಬರೂ ಭೇಟಿಯಾದ ಕ್ಷಣದಿಂದ ಹಿಡಿದುಕೊಂಡು ಮದುವೆಯವರೆಗಿನ ಕ್ಷಣಗಳ ವಿಡಿಯೋ ಶೇರ್ ಮಾಡಿದ್ದಾರೆ. ಜೊತೆಗೆ, ”ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ. ನಾವಿಬ್ಬರೂ ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ, ಇದಕ್ಕೂ ಮುನ್ನ ಸ್ನೇಹವನ್ನು ನಾವು ಕಂಡುಕೊಂಡೆವು.
ಇದರ ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಫಹಾದ್ ಅಹ್ಮದ್ ನನ್ನ ಹೃದಯದ ಕೋಣೆಯಲ್ಲಿ ನಿನಗೆ ಆತ್ಮೀಯ ಸ್ವಾಗತ. ನಾನು ಸ್ವಲ್ಪ ವಿಭಿನ್ನವಾಗಿದ್ದೇನೆ. ಆದರೆ, ಈಗ ನಾನು ನಿಮ್ಮವಳು” ಎಂದು ನಟಿ ಹೇಳಿದ್ದಾರೆ. ಆದರೆ ಈ ಹಿಂದೆ ನಟಿ ಸ್ವರಾರವರು ಫಹಾದ್ ಸಹೋದರ ಎಂದು ಕರೆದಿದ್ದರು.
ಈ ಹಿಂದಿನ ಪೋಸ್ಟ್ ಹಾಗೂ ಇವಗಿನ ಮದುವೆ ಪೋಸ್ಟ್ ಈ ಎರಡನ್ನು ಟ್ಯಾಗ್ ಮಾಡಿ ನೆಟ್ಟಿಗರು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ.
ಈ ಹಿಂದೆಯಷ್ಟೇ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದೂ, ಈ ಫೋಟೋ ನೋಡಿ ಶಾಕ್ ಆಗಿದ್ದರು. ನಟಿ ತನ್ನ ತಲೆಯನ್ನು ಯಾರೊಬ್ಬರ ತೋಳುಗಳಲ್ಲಿ ಆರಾಮದಾಯಕವಾಗಿ ಮಲಗಿರುವ ಚಿತ್ರವನ್ನು ಹಂಚಿಕೊಂಡಿದ್ದರು. “ಇದು ಪ್ರೀತಿ ಆಗಿರಬಹುದು” ಎಂದು ಸ್ವರಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು. ಇದೀಗ ತಮ್ಮ ವಿವಾಹದ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ನಟಿ ಸ್ವರಾ ಭಾಸ್ಕರ್ ಅವರು ಬರಹಗಾರ ಹಿಮಾಂಶು ಶರ್ಮಾ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂಬ ವದಂತಿಯೂ ಹರಿದಾಡಿತ್ತು.