ಫಸ್ಟ್ ನೈಟ್ ಫೋಟೋ ಶೇರ್ ಮಾಡಿಕೊಂಡು ಮೊದಲ ರಾತ್ರಿಯ ಅನುಭವವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಬಾಲಿವುಡ್ ನಟಿ ಸ್ವರಾ ಭಾಸ್ಕರ್, ನೆಟ್ಟಿಗರು ಫುಲ್ ಶಾಕ್ !!

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಪೊಲಿಟಿಕಲ್ ಲೀಡರ್ ಫಹಾದ್ ಅಹ್ಮದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಎಲ್ಲರಿಗೂ ಶಾಕ್ ನೀಡಿದ್ದರು. ಸಮಾಜವಾದಿ ಪಕ್ಷದ ಯುವ ಅಧ್ಯಕ್ಷ ಫಹಾದ್ ಜೊತೆ ಸ್ವರಾ ವಿಶೇಷ ಕಾಯ್ದೆಯಡಿ ಜ.6ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ತದನಂತರದಲ್ಲಿ ತಮ್ಮ ಮದುವೆಯ ಬಗ್ಗೆ ಸ್ವರಾ ಅಧಿಕೃತವಾಗಿ ತಿಳಿಸಿದ್ದರು.

ಅಣ್ಣ ಎಂದು ಕರೆದು ಈಗ ಅವರನ್ನೇ ಮದುವೆಯಾಗಿದ್ದೀರಾ ಎಂದು ಟ್ರೋಲಿಗರ ಕೈಯಲ್ಲಿ ಟ್ರೋಲ್ ಕೂಡ ಆಗಿದ್ದರು. ಅದಲ್ಲದೇ ನಟಿ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದರು. ಹಾಗೇಯೇ ನ್ಯಾಯಾಲಯದ ಮುಂದೆ ವಿವಾಹವಾದ ನಂತರ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಜೋಡಿ ಶೇರ್‌ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿತ್ತು.

ಹೌದು, ನಟಿ ಸ್ವರಾ ಭಾಸ್ಕರ್ ಕೂಡ ಇದೆ ಫೋಟೊವನ್ನು ಶೇರ್‌ ಮಾಡಿಕೊಂಡು ʻʻಅಮ್ಮನ ಮದುವೆಯ ಸಾರಿ,ಕಾನೂನು ಬದ್ಧವಾಗಿ ಮದುವೆಯಾಗಿದ್ದೇವೆ. ವಿಶೇಷ ವಿವಾಹ ಕಾಯಿದೆ ಅಡಿ, ಪ್ರೀತಿಸುವ ಹಕ್ಕು, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕು, ಮದುವೆಯಾಗುವ ಹಕ್ಕುʼʼ ಎಂದಿದ್ದರು. ಅದರ ಜೊತೆಗೆ ನಟಿ ಸ್ವರಾ ಸ್ವತಃ ತಾವಿಬ್ಬರೂ ಭೇಟಿಯಾದ ಕ್ಷಣದಿಂದ ಹಿಡಿದುಕೊಂಡು ಮದುವೆಯವರೆಗಿನ ಕ್ಷಣಗಳ ವಿಡಿಯೋ ಶೇರ್​ ಮಾಡಿದ್ದರು.

ಜೊತೆಗೆ, ”ಕೆಲವೊಮ್ಮೆ ನಾವು ಏನನ್ನಾದರೂ ಹುಡುಕುತ್ತಾ ಅಲೆದಾಡುತ್ತೇವೆ. ಆದರೆ, ಅದು ಯಾವಾಗಲೂ ನಮ್ಮ ಸುತ್ತಲೂ ಇರುತ್ತದೆ. ನಾವಿಬ್ಬರೂ ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ, ಇದಕ್ಕೂ ಮುನ್ನ ಸ್ನೇಹವನ್ನು ನಾವು ಕಂಡುಕೊಂಡೆವು. ಇದರ ನಂತರ ನಾವು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡೆವು. ಫಹಾದ್ ಅಹ್ಮದ್​ ನನ್ನ ಹೃದಯದ ಕೋಣೆಯಲ್ಲಿ ನಿನಗೆ ಆತ್ಮೀಯ ಸ್ವಾಗತ. ನಾನು ಸ್ವಲ್ಪ ವಿಭಿನ್ನವಾಗಿದ್ದೇನೆ. ಆದರೆ, ಈಗ ನಾನು ನಿಮ್ಮವಳು” ಎಂದಿದ್ದರು.

ಆದರೆ ಇದೀಗ ನಟಿ ಸ್ವರಾ ಭಾಸ್ಕರ್ ತನ್ನ ಫಸ್ಟ್ ನೈಟ್ ಫೋಟೋ ಶೇರ್ ಮಾಡಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಹೌದು, ಫಸ್ಟ್‌ ನೈಟ್‌ ಮತ್ತು ಹನಿಮೂನ್‌ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದು ಹನಿಮೂನ್ ಬಗ್ಗೆ ಯೂ ಹೇಳಿಕೊಂಡಿದ್ದಾರೆ. ಹೂವಿನಿಂದ ಅಲಂಕೃತಗೊಂಡ ಹಾಸಿಗೆಯ ಫೋಟೋವನ್ನು ಶೇರ್‌ ಮಾಡಿದದ್ದು, ಈ ಹಾಸಿಗೆಯನ್ನು ಸ್ವರಾ ಅವರ ತಾಯಿ ಇರಾ ಭಾಸ್ಕರ್‌ ಅಲಂಕಾರ ಮಾಡಿದ್ದರು ಎಂದು ಹೇಳಿಕೊಂಡಿದ್ದಾರೆ.

ಹೋಮ್ ಡೆಕೋರ್ ಸ್ಟೈಲಿಸ್ಟ್ ಪ್ರಿಯಾಂಕಾ ಯಾದವ್ ಅವರಿಗೆ ಸ್ವರಾ ಅವರ ಮಲಗುವ ಕೋಣೆಯನ್ನು ಅಲಂಕರಿಸುವ ಕೆಲಸವನ್ನು ನೀಡಲಾಗಿತ್ತಂತೆ. ಈ ವೇಳೆ ಇರಾ ಭಾಸ್ಕರ್‌ ಸಹ ಇವರಿಗೆ ಸಾಥ್‌ ನೀಡಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಯಾದವ್ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವರಾ ಅವರ ತಾಯಿ ಇರಾ ಭಾಸ್ಕರ್‌ಗೆ ಈ ಅಲಂಕಾರದ ಕ್ರೆಡಿಟ್‌ ನೀಡಿದ್ದು, ಈ ಫೋಟೋಕ್ಕೆ “ಹಹಹಾ ಐ ಲವ್ ಇಟ್!!” ಎಂದು ಸ್ವರಾ ಶೇರ್‌ ಮಾಡಿದ್ದಾರೆ. ಈ ಫೋಟೋವೊಂದು ವೈರಲ್‌ ಆಗುತ್ತಿದ್ದು, ಕೆಲವು ಟೀಕೆಗಳೂ ವ್ಯಕ್ತವಾಗಿದ್ದು ಆ ಕೂಡಲೇ ನಟಿ ಫೋಟೋ ಡಿಲೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *