ಲೋಕಸಭೆ ಚುನಾವಣೆಯ ಬಗ್ಗೆ ಅಚ್ಚರಿ ಮೂಡಿಸುವ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು ಹೇಳಿದ್ದೇನು ಗೊತ್ತಾ? ನಿಜಕ್ಕೂ ಶಾಕಿಂಗ್!!

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು (Kodimata Shivananda Shivayogi Rajendra Shreegalu) ನುಡಿದಿರುವ ರಾಜಕೀಯ ಹಾಗೂ ಇನ್ನಿತ್ತರ ವಿಚಾರಗಳಿಗೆ ಸಂಬಂಧ ಪಟ್ಟಂತೆ ಭವಿಷ್ಯಗಳು ನುಡಿದಂತೆ ನಿಜವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದರು.

ಆದರೆ ಇದೀಗ ಮುಂಬರುವ ಇ ಲೋಕಸಭಾ ಚುನಾವಣೆಯ ಬಗ್ಗೆಯೂ ಭವಿಷ್ಯವನ್ನು ನುಡಿದಿದ್ದು, ಎಲ್ಲರಿಗೂ ಕೂಡ ಶಾ-ಕ್ ನೀಡಿದಂತೆ ಆಗಿದೆ. ದಾವಣಗೆರೆ (Davanagere) ಯ ಹೊನ್ನಾಳಿ (Honnali) ಯಲ್ಲಿ ಮಾತನಾಡಿದ ಹಾಸನದ ಅರಸೀಕೆರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ವಿಧಾನಸಭಾ ಚುನಾವಣೆಯಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಅಂತ ಹೇಳಿದ್ದೆ.

ಅದರಂತೆ ಆಗಿದೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷಾಂತರ ಹೆಚ್ಚಾದರೂ, ಒಂದೇ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಹೀಗೆನ್ನುತ್ತಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಶ್ರೀಗಳೇ ಹೇಳಿ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಂತೆ ಈ ಬಗ್ಗೆ ಕೋಡಿಮಠ ಶ್ರೀಗಳು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ಅಷ್ಟೇ ಅಲ್ಲದೇ ಅಮಾವಾಸ್ಯೆ (Amavasye) ನಂತರದಲ್ಲಿ ಕರ್ನಾಟಕ (Karnataka) ದಲ್ಲಿ ಭಾರೀ ಮಳೆಯಾಗಲಿದೆ. ಪ್ರಕೃತಿ ವಿಕೋಪದಿಂದ ಸಮಸ್ಯೆ ಉಂಟಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.ಈ ಹಿಂದೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕೋಡಿಮಠದ ಶ್ರೀಗಳು, ಈ ವರ್ಷವೂ ಮಳೆಗೂ ತೊಂದರೆ ಇಲ್ಲ. ಅನ್ನಕ್ಕೂ ಕೊರತೆಯಿಲ್ಲ. ದೇಶ, ರಾಜ್ಯದಲ್ಲಿ ವಿಪರೀತ ಮಳೆಯಾಗೋ ಲಕ್ಷಣವಿದೆ. ಮಳೆಗೆ ಯಾವುದೇ ತೊಂದರೆ ಇಲ್ಲ. ಮೊನ್ನೆ ಬಂದ ರೀತಿಯೇ ಇನ್ನೂ ಭಾರೀ ಮಳೆ ಬರಲಿದೆ.

ಗುಡುಗು ಸಹಿತ ಮಳೆಯಿಂದ ಅಪಮೃತ್ಯು ಉಂಟಾಗಲಿದೆ. ಪ್ರಕೃತಿಯಿಂದಲೂ ಬಹಳ ಹಾನಿಯಾಗಲಿದೆ ಎಂದಿದ್ದರು.ರಾಜ್ಯದ ರಾಜಕೀಯ ಸ್ಥಿತಿ ಹೇಗಿರಲಿದೆ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದ ಶ್ರೀಗಳು, ಸ್ಮ-ಶಾನದಲ್ಲಿ ಪಿ-ಶಾಚಿ ಕುಣಿದಂತೆ ಆಗ್ತಿದೆ. ಆದರೇ ಏನೂ ಆಗೋದಿಲ್ಲ. ನೋಡೋರಿಲ್ಲ, ಕೇಳೋರಿಲ್ಲ. ಆನಂದ ಪಡುವವರಿಲ್ಲ. ಜೊತೆಗೆ ರಾಜ್ಯ ಸರ್ಕಾರಕ್ಕೆ ಏನೂ ತೊಂದರೆ ಆಗೋದಿಲ್ಲ. ಇದನ್ನು ಬಿಟ್ಟು ನಾನು ಏನೂ ಹೇಳಲ್ಲ. ನನಗೆ ಎಲ್ಲರೂ ಬೇಕಾಗಿರುವವರುರುವವರು ಎಂದಿದ್ದರು. ಕೋಡಿಮಠದ ಶ್ರೀಗಳು ಈಗಾಗಲೇ ನುಡಿದಿರುವ ಎಲ್ಲಾ ಭವಿಷ್ಯಗಳು ನಿಜವಾಗಿದೆ.

Leave a Reply

Your email address will not be published. Required fields are marked *