ಒಂದು ತಿಂಗಳು ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರ, ಈ ಐದು ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ, ಇಲ್ಲಿದೆ ನೋಡಿ!!

ಗ್ರಹಗಳ ಬದಲಾವಣೆಗಳು ರಾಶಿ ಚಕ್ರದ ಮೇಲೆ ಸಾಕಷ್ಟು ಪರಿಣಾಮ (Positive And Negative Effect) ಗಳನ್ನು ಬೀರುತ್ತದೆ. ಆದರೆ ಇದೀಗ ಗ್ರಹಗಳ ರಾಜ ಸೂರ್ಯ (Surya) ನು ತಿಂಗಳಿಗೊಮ್ಮೆ ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಸೂರ್ಯನ ಸಂಚಾರದಿಂದ ರಾಶಿಯಲ್ಲಿ ಬದಲಾವಣೆಯಾಗುತ್ತದೆ.

ಆದರೆ ಇದೀಗ ಸೆಪ್ಟೆಂಬರ್ 17 ರಿಂದ ಕನ್ಯಾ ರಾಶಿಯಲ್ಲಿ ಸಂಚಾರ ಆರಂಭಿಸಿರುವ ಸೂರ್ಯ ಅಕ್ಟೋಬರ್ 18 (October 18) ರ ವರೆಗೆ ಈ ರಾಶಿಯಲ್ಲಿ ಇರುತ್ತಾನೆ. ಹಾಗಾಗಿ ಸುಮಾರು 1 ತಿಂಗಳು 5 ರಾಶಿಯವರಿಗೆ ಅದೃಷ್ಟವು ಒದಗಿ ಬರಲಿದೆ. ಹಾಗಾದ್ರೆ ಯಾವ ರಾಶಿ ಏನೆಲ್ಲಾ ಫಲಗಳಿಗೆ ಏನೆಲ್ಲಾ ಲಾಭಗಳಿವೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಧನು ರಾಶಿ: ಈ ರಾಶಿಯವರಿಗೆ ಒಂದು ತಿಂಗಳು ಅದೃಷ್ಟದ ಹೊಳೆ ಎನ್ನಬಹುದು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಜಯ ಸಿಗುತ್ತದೆ. ಜೀವನದಲ್ಲಿರುವ ಕಷ್ಟಗಳಿಗೆ ಪರಿಹಾರ ಸಿಗುವ ಮೂಲಕ ಎಲ್ಲಾ ತೊಂದರೆಗಳಿಂದ ಪಾರಾಗಬಹುದು. ಸಾಲದ ಸಮಸ್ಯೆಗೆ ಮುಕ್ತಿ ಸಿಕ್ಕಿ, ಆದಾಯವು ಅಧಿಕವಾಗಲಿದೆ.

ಕಟಕ ರಾಶಿ : ಸೂರ್ಯನ ಸಂಚಾರದಿಂದ ಈ ರಾಶಿಯವರಿಗೆ ಲಾಭದಾಯಕವಾಗಲಿದೆ. ಅಂದುಕೊಂಡಿದ್ದ ಕೆಲಸಗಳು ಸರಾಗವಾಗಿ ನಡೆದು ಯಶಸ್ಸು ಸಿಗುತ್ತದೆ. ಯಶಸ್ಸಿನ ಜೊತೆಗೆ ಸಂಪತ್ತು ದೊರೆಯಲಿದ್ದು , ಯಾವುದಾದರೂ ಯೋಜನೆಗಳಿಗೆ ಹಣ ಹೂಡಿಕೆ ಮಾಡಿದ್ದರೆ ಲಾಭವು ದೊರೆಯಲಿದೆ.

ಸಿಂಹ ರಾಶಿ : ಈ ರಾಶಿಯವರಿಗೆ ಈ ಒಂದು ತಿಂಗಳು ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಅದಲ್ಲದೇ ಈ ರಾಶಿಯವರು ವಾಹನ ಮತ್ತು ಆಸ್ತಿಯನ್ನು ಖರೀದಿ ಮಾಡಲಿದ್ದಾರೆ. ಐಷಾರಾಮಿ ವಸ್ತುಗಳನ್ನು ಖರೀದಿಸುವುದರ ಜೊತೆಗೆ ವ್ಯಾಪಾರವ್ಯವಹಾರಗಳಲ್ಲಿ ಲಾಭವನ್ನು ಪಡೆಯಲಿದ್ದಾರೆ. ಉದ್ಯೋಗ ಸ್ಥಳದಲ್ಲಿ ಜವಾಬ್ದಾರಿಯ ಜೊತೆಗೆ ಗೌರವವು ಸಿಗಲಿದೆ.

ಮಿಥುನ ರಾಶಿ : ಈ ಬಾರಿ ಅದೃಷ್ಟವು ಈ ರಾಶಿಯವರ ಪರವಾಗಿರುತ್ತದೆ. ಈಗಾಗಲೇ ಬಾಕಿ ಉಳಿದಿರುವ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ. ಹಣಕಾಸಿನ ಯೋಜನೆಯತ್ತ ಗಮನ ಹರಿಸುತ್ತಿದ್ದರೆ ಈ ಸಮಯವು ಪ್ರಸಕ್ತವಾಗಿದೆ. ವ್ಯಾಪಾರಗಳಲ್ಲಿ ಲಾಭವನ್ನು ಪಡೆಯಲಿದ್ದಾರೆ.

ವೃಷಭ ರಾಶಿ : ಉದ್ಯೋಗಕ್ಕಾಗಿ ಕಾಯುತ್ತಿರುವವರು ಒಳ್ಳೆಯ ಉದ್ಯೋಗ ಸಿಗಬಹುದು. ಅದಲ್ಲದೇ ಉದ್ಯೋಗದಲ್ಲಿರುವವರಿಗೆ ಪ್ರಮೋಷನ್ ಸೇರಿದಂತೆ ಇನ್ನಿತ್ತರ ಶುಭ ಸುದ್ದಿಯನ್ನು ಕೇಳಲಿದ್ದಾರೆ. ಆರ್ಥಿಕವಾಗಿ ಲಾಭದಾಯಕ ತಿಂಗಳು ಆಗಿದ್ದು ಕಷ್ಟಗಳು ದೂರವಾಗಿ ಸುಖ ಶಾಂತಿ, ನೆಮ್ಮದಿಯು ಲಭಿಸುತ್ತದೆ.

Leave a Reply

Your email address will not be published. Required fields are marked *