ಗಂಡ ಊರಲ್ಲಿ ಇಲ್ಲದಾಗ ಬೇರೊಬ್ಬನ ಜೊತೆಗೆ ನಡೆಯುತ್ತಿತ್ತು ಹೆಂಡತಿಯ ಕಳ್ಳಾಟ! ಇವರ ಆಟಕ್ಕೆ ಮಗು ಅಡ್ಡ ಬಂತೆಂದು ಏನು ಮಾಡಿದ್ಲು ಗೊತ್ತಾ? ಐನಾತಿ ಆಂಟಿ ನೋಡಿ!!

ದಾಂಪತ್ಯ ಜೀವನ ಎನ್ನುವುದೇ ಅರ್ಥವನ್ನು ಕಳೆದುಕೊಂಡಿದೆ. ಸತಿ ಪತಿಗಳ ನಡುವಿನ ಸಂಬಂಧಕ್ಕೆ ಮೌಲ್ಯವಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಸಂಸಾರದಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದೆ. ತಮ್ಮಿಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಗುವಿನ ಜೀ’ವ ತೆಗೆದ ದಾ’ರುಣ ಘ’ಟನೆಯೊಂದು ನಡೆದಿದೆ. ಹೌದು, ಕಾರ್ತಿಕ್ ಎಂಬ ವ್ಯಕ್ತಿ ತಮಿಳುನಾಡಿನ ನಾಗೈ ಜಿಲ್ಲೆಯ ಅಪ್ಪರ್ ವಂಜೂರ್ ಪ್ರದೇಶದಲ್ಲಿ ನೆಲೆಸಿದ್ದಾರೆ. 2014 ರಲ್ಲಿ ಕಾರ್ತಿಕ್ ರವರು ಅಪರ್ಣಾ (23) ಎಂಬ ಯುವತಿಯನ್ನು ವಿವಾಹವಾದರು.

ಈ ಅಪರ್ಣಾ ಮೂರು ತಿಂಗಳಿಂದ ಪತಿ ಕಾರ್ತಿಕ್ ಜೊತೆ ಜಗಳ ಮಾಡಿಕೊಂಡು ಅತ್ತೆ ಮನೆಗೆ ಹೋಗಿದ್ದಳು. ತದನಂತರದಲ್ಲಿ ಪಂಚಾಯಿತಿ ಮಾಡಿ ಹಿರಿಯರು ಹಾಗೂ ಸಂಬಂಧಿಕರು ಕಾರ್ತಿಕ್ ಮತ್ತು ಅಪರ್ಣಾ ಅವರನ್ನು ಮತ್ತೆ ಒಂದಾಗಿಸಿದ್ದಾರೆ. ಪಂಚಾಯತಿಯಲ್ಲಿ ಹಿರಿಯರು ರಾಜಿ ಮಾಡಿಕೊಂಡ ನಂತರ ಪತ್ನಿ ಅಪರ್ಣಾ ಪತಿ ಕಾರ್ತಿಕ್ ಮನೆಗೆ ತೆರಳಿ ಗರ್ಭಿಣಿಯಾಗಿದ್ದಾಳೆ. ಈ ದಂಪತಿಗಳ ಬದುಕಿನಲ್ಲಿ ಗಂಡು ಮಗುವಿನ ಆಗಮನವಾಗಿದೆ. ಆದಾದ ಬಳಿಕ ಅಪರ್ಣಾ ತನ್ನ ಪತಿ ಕಾರ್ತಿಕ್ ಜೊತೆ ತನಗೆ ಇಷ್ಟವಿಲ್ಲ ಎನ್ನುವ ಹಾಗೆ ಇರುತ್ತಿದ್ದಳು.

ಹೌದು ಈ ಕಾರ್ತಿಕ್ ಚೆನ್ನೈನಲ್ಲಿ ಕಾರ್ ಟಿಂಕರ್ ಆಗಿ ಕೆಲಸ ಮಾಡುತ್ತಿದ್ದನು. ಪತಿ ಕಾರ್ತಿಕ್ ಎರಡು ವಾರಕ್ಕೊಮ್ಮೆ ಮತ್ತು ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದನು. ಮೂರು ವರ್ಷಗಳ ಹಿಂದೆ ಸುರೇಶ್ (25) ಎಂಬ ಆಟೋ ಚಾಲಕ ಅಪರ್ಣಾ ಅವರನ್ನು ಭೇಟಿಯಾಗಿದ್ದ. ಸುರೇಶನ ಆಟೋದಲ್ಲಿಯೇ ಬರುತ್ತಿದ್ದ ಅಪರ್ಣಾ ಆತನ ಜೊತೆಗೆ ಸಂಬಂಧವನ್ನು ಹೊಂದಿದ್ದಳು.

ಕೊನೆಗೆ ಅಪರ್ಣಾ ತನ್ನ ಗೆಳೆಯ ಸುರೇಶನನ್ನು ಮನೆಗೆ ಕರೆಸಿ ಚೆಲ್ಲಾಟ ಆಡುತ್ತಿದ್ದಳು. ಆದರೆ ಈ ವಿಚಾರವು ದೂರ ಊರಿಗೆ ಕೆಲಸಕ್ಕೆ ಹೋಗಿದ್ದ ಕಾರ್ತಿಕ್ ಗೆ ಗೊತ್ತೇ ಇರಲಿಲ್ಲ. ಪತಿ ಕಾರ್ತಿಕ್ ಚೆನ್ನೈನಿಂದ ಹೊರಡುವಾಗ ಮೊದಲು ಪತ್ನಿ ಅಪರ್ಣಾಗೆ ಹೇಳುತ್ತಿದ್ದ. ಕಾರ್ತಿಕ್ ಮನೆಗೆ ಬರುವ ಸುದ್ದಿ ಬರುತ್ತಿದ್ದಂತೆ ಅಪರ್ಣಾ ತನ್ನ ಗೆಳೆಯ ಸುರೇಶ್ ನಿಂದ ದೂರ ಉಳಿದು ತನ್ನ ಅಕ್ರಮ ಸಂಬಂಧ ಆತನಿಗೆ ತಿಳಿಯದಂತೆ ಎಚ್ಚರ ವಹಿಸಿದ್ದಳು.

ಆದರೆ ಕಾರ್ತಿಕ್ ಗೆ, ನೀವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಟೋ ಡ್ರೈವರ್ ಸುರೇಶ್ ನಿಮ್ಮ ಮನೆಗೆ ಬಂದು ಗಂಟೆಗಟ್ಟಲೆ ಇರುತ್ತಾರೆ, ನೀವು ಹುಷಾರಾಗಿರಿ ಎಂದು ಸುತ್ತಮುತ್ತಲಿನವರು ಹೇಳಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅರ್ಪಣಾ ಮತ್ತೊಂದು ಮುಖದ ಪರಿಚಯವಾಯಿತು. ಈ ವಿಚಾರವಾಗಿ ಪತ್ನಿ ಅಪರ್ಣಾಳಿಗೆ ಎಚ್ಚರಿಕೆ ಕೂಡ ನೀಡಿದ್ದಾನೆ. ಆದರೆ ಅಪರ್ಣಾ ಮಾತ್ರ ತನ್ನ ನಡವಳಿಕೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಿಲ್ಲ.

ಪತಿಗೆ ಕೆಲಸಕ್ಕೆಂದು ಚೆನ್ನೈ ಗೆ ಹೋದ ಮೇಲು ತನ್ನ ಚಾಳಿಯನ್ನು ಮುಂದುವರೆಸಿದ್ದಾಳೆ. ಒಂದು ಬೆಡ್ ರೂಮಿನಲ್ಲಿ ಅಪರ್ಣಾ ಮತ್ತು ಆಕೆಯ ಗೆಳೆಯ ಸುರೇಶ್ ಚೆಲ್ಲಾಟದಲ್ಲಿ ಮುಳುಗಿದ್ದಾರೆ. ಆ ವೇಳೆ ಅಪರ್ಣಾ ಮಗುವು ಜೋರಾಗಿ ಕೂಗಿದೆ. ಇದರಿಂದ ಕೋಪಗೊಂಡ ಅಪರ್ಣಾ, ಪ್ರಿಯಕರ ಜೊತೆಗೆ ಚೆಲ್ಲಾಟ ಕ್ಕೆ ಅಡ್ಡಿಯಾದ ಮಗುವಿನ ಕಥೆ ಮುಗಿಸಿದ್ದಾಳೆ.

ಹೌದು, ತನ್ನ ಪ್ರಿಯಕರ ಸುರೇಶ್ ಜೊತೆ ಸೇರಿ ತನ್ನ ನಾಲ್ಕು ವರ್ಷದ ಮಗನ ಕುತ್ತಿಗೆಯನ್ನು ಬಿಗಿದು ಬರ್ಬರವಾಗಿ ಹ-ತ್ಯೆ ಮಾಡಿದ್ದಾಳೆ. ಈ ಘಟನೆಯ ಬಳಿಕ ಪತಿ ಕಾರ್ತಿಕ್ ಪತ್ನಿ ಹಾಗೂ ಸುರೇಶ್ ವಿರುದ್ಧ ಕೇಸ್ ದಾಖಲಿಸಿದ್ದಾನೆ. ಆದರೆ ಅಪರ್ಣಾ ಹಾಗೂ ಆಕೆಯ ಪ್ರಿಯಕರ ಜಾಮೀನು ಸಿಗದ ಕಾರಣ ಇನ್ನೂ ಜೈಲಿನಲ್ಲಿದ್ದಾರೆ.

Leave a Reply

Your email address will not be published. Required fields are marked *