ಪ್ರಿಯಕರ ಮೋಹಕ್ಕೆ ಬಿದ್ದ ವಿವಾಹಿತ ಮಹಿಳೆ, ತನ್ನ ಎರಡು ವರ್ಷದ ಮಗುವಿಗೆ ಮಾಡಿದ್ದೇನು ಗೊತ್ತಾ, ಇಂತಹ ತಾಯಿ ನು ಇದ್ದಾಳಾ!!

ದೇವರ ಪ್ರತಿರೂಪವಾಗಿರುವ ಜೀವವೆಂದರೆ ಅದುವೇ ತಾಯಿ. ಹೀಗಾಗಿ ತಾಯಿಯ ಪ್ರೀತಿಯೂ ಯಾವ ಪ್ರೀತಿಗೂ ಸರಿಸಮಾನವಾಗದು. ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಮಕ್ಕಳ ಏಳಿಗೆಯನ್ನೇ ಬಯಸುತ್ತಾಳೆ. ಹೀಗಾಗಿ ಪ್ರಪಂಚದಲ್ಲಿ ಕೆ-ಟ್ಟ ಮಕ್ಕಳು ಇರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತ ಎನಿಸುವ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಪ್ರಿಯಕರನ ಪ್ರೀತಿಗೆ ಬಿದ್ದು, ತನ್ನ 2 ವರ್ಷದ ಮಗುವಿನ ಕಥೆ ಮುಗಿಸಿರುವ ಘಟನೆಯೊಂದು ಗುಜರಾತ್​ನ ಸೂರತ್​ (Gujarat Surath) ನಲ್ಲಿ ನಡೆದಿದೆ.

ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂ-ದು ಮಗು ಕಾಣೆಯಾಗಿರುವ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂರು ದಿನಗಳ ಕಾಲ ‘ಕಾಣೆ’ಯಾಗಿರುವ ಮಗುವಿನ ಹುಡುಕಾಟ ನಡೆಸಿದ್ದಾರೆ. ಈ ವೇಳೆಯಲ್ಲಿ ಮಹಿಳೆಯೂ ಕೂಡ ಹುಡುಕಾಟ ನಡೆಸಿದ್ದಾಳೆ. ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಮಹಿಳೆಯ ಮೇಲೆ ಪೊಲೀಸರಿಗೆ ಅ-ನುಮಾನ ಬಂದಿದೆ. ಈ ವೇಳೆಯಲ್ಲಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಘಟನೆಯ ಅಸಲಿ ವಿಚಾರವು ತಿಳಿದರೆ ಶಾ-ಕ್ ಆಗುವುದು ಪಕ್ಕಾ.

ಸೂರತ್‌ನ ದಿಂಡೋಲಿ (Surath Dindoli) ಪ್ರದೇಶದಲ್ಲಿ ನಿರ್ಮಾಣ ಸ್ಥಳದಲ್ಲಿ ನಯನಾ ಮಾಂಡವಿ ಕೂಲಿ ಕೆಲಸ ಮಾಡುತ್ತಿದ್ದಳು. ಹೀಗಿರುವಾಗ ನಯನಾ ಮಾಂಡವಿ ತನ್ನ ಎರಡೂವರೆ ವರ್ಷದ ಮಗು ವೀರ್ ಮಾಂಡವಿ (Veer Mandavi) ನಾ-ಪತ್ತೆಯಾಗಿದೆ ಎಂದು ದೂರು ನೀಡುವ ಸಲುವಾಗಿ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಳು. ಮಹಿಳೆಯ ದೂರಿನ್ವಯ ತನಿಖೆಯನ್ನು ನಡೆಸಿದ ಪೊಲೀಸರು ನಯನಾ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆಯಲ್ಲಿ ಮಗು ಆದರೆ ಮಗು ಆವರಣದಿಂದ ಹೊರಬರುವುದನ್ನು ನೋಡಲಿಲ್ಲ. ಹೀಗಾಗಿ ಮಗು ಸೈಟ್ ಬಿಟ್ಟು ಹೋಗಿಲ್ಲ ಎನ್ನುವುದು ಖಾತರಿಯಾಗಿದೆ. ಕೊನೆಗೆ ಮಹಿಳೆಯನ್ನು ವಿಚಾರಣೆ ನಡೆಸಿದ್ದು, ಆದರೆ ಈ ಬಗ್ಗೆ ಮಹಿಳೆಯೂ ಬಾಯಿ ಬಿಡಲಿಲ್ಲ. ಕೊನೆಗೆ ನಾಪತ್ತೆಯಾದ ಮಗುವಿನ ಹುಡುಕಾಟಕ್ಕೆ ಪೊಲೀಸರು ಶ್ವಾನದಳವನ್ನು ಬಳಸಿದ್ದಾರೆ. ಯಾವುದೇ ಸಾಕ್ಷಿಯೂ ಪತ್ತೆಯಾಗಿಲ್ಲ.

ಇತ್ತ ಜಾರ್ಖಂಡ್‌ (Jaakhand) ನಲ್ಲಿ ನೆಲೆಸಿರುವ ತನ್ನ ಪ್ರಿಯಕರನೇ ತನ್ನ ಮಗುವನ್ನು ಅ-ಪಹರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ವಿಚಾರೀಸಿದಾಗ ತಾನು ಸೂರತ್‌ಗೆ ಹೋಗಿರಲಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ಕೊನೆಗೆ ಮಹಿಳೆಯನ್ನು ವಿಚಾರಿಸಿದಾಗ, ತಾನು ಮಗುವನ್ನು ಕಥೆ ಮುಗಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊನೆಗೆ ಮಗುವಿನ ಮೃ-ತದೇಹದ ಬಗ್ಗೆ ಕೇಳಿದಾಗ ಸುಳ್ಳು ಹೇಳಿದ್ದು ಕೊನೆಗೆ ಸತ್ಯ ಬಾಯಿಬಿಟ್ಟಿದ್ದಾಳೆ.

ಪೊಲೀಸರ ವಿಚಾರಣೆಯ ವೇಳೆಯಲ್ಲಿ ಮಹಿಳೆ ಶ-ವವನ್ನು ಗುಂಡಿಯಲ್ಲಿ ಹೂತಿಟ್ಟಿದ್ದೇನೆ ಎಂದಿದ್ದು, ಆ ಸ್ಥಳವನ್ನು ಅ-ಗೆದು ನೋಡಿದಾಗ ಏನೂ ಪತ್ತೆಯಾಗಲಿಲ್ಲ. ನಂತರ ಶ-ವವನ್ನು ಕೊಳಕ್ಕೆ ಎಸೆದಿದ್ದೇನೆ ಎಂದಿದ್ದಾಳೆ. ಅಲ್ಲಿಯೂ ಏನು ಪತ್ತೆಯಾಗಲಿಲ್ಲ. ಪೊಲೀಸರು ವಿಚಾರಣೆಯನ್ನು ಚುರುಕುಗೊಳಿಸಿದ್ದು, ಮಹಿಳೆಯು ಶ-ವವನ್ನು ನಿರ್ಮಾಣ ಸ್ಥಳದ ಶೌಚಾಲಯಕ್ಕಾಗಿ ಉದ್ದೇಶಿಸಲಾದ ಗುಂಡಿಗೆ ಎಸೆದಿದ್ದೇನೆ ಎಂದದು ಸತ್ಯ ಬಾಯಿ ಬಿಟ್ಟಿದ್ದಾಳೆ. ಪೊಲೀಸರು ಮಹಿಳೆಯ ಹೇಳಿಕೆಯಂತೆ ಹುಡುಕಾಟ ನಡೆಸಿದಾಗ ಮಗುವಿನ ಮೃ-ತದೇಹ ಪತ್ತೆಯಾಗಿದೆ.

ಕೊನೆಗೆ ಮಹಿಳೆಯ ಈ ಕಟು ನಿರ್ಧಾರ ಹಿಂದಿನ ಕಾರಣವನ್ನು ಕೆಣಕಿದಾಗ ” ತಾನು ಮೂಲತಃ ಜಾರ್ಖಂಡ್‌ನವಳು ಮತ್ತು ಅಲ್ಲಿ ತನ್ನ ಪ್ರಿಯಕರನಿದ್ದಾನೆ, ಮಗುವಿನೊಂದಿಗೆ ಬಂದರೆ ಸ್ವೀಕರಿಸುವುದಿಲ್ಲ ಎಂದಿದ್ದ ಹಾಗಾಗಿ ಈ ಕೃತ್ಯವೆಸಗಿದ್ದೇನೆ ಎಂದು ಹೇಳಿದ್ದಾಳೆ. ಈ ಮಹಿಳೆಯೂ ಈ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ದೃಶ್ಯಂ ಸಿನಿಮಾ ನೋಡಿದ್ದಳು ಎನ್ನಲಾಗಿದೆ. ಒಟ್ಟಿನಲ್ಲಿ ಈ ಪ್ರಕರಣವು ಎಲ್ಲರನ್ನು ಬೆಚ್ಚಿ ಬೀಳಿಸಿದೆ.

Leave a Reply

Your email address will not be published. Required fields are marked *