ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಕೈ ಬೆರಳನ್ನು ಮುದ್ರೆಯಂತೆ ಹಿಡಿದುಕೊಳ್ಳುವುದೇಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ರಹಸ್ಯ!!

ತಮಿಳು ಚಿತ್ರರಂಗದ ಹಿರಿಯ ಹಾಗೂ ಪ್ರತಿಭಾವಂತ ನಟ ಸೂಪರ್ ಸ್ಟಾರ್ ರಜನಿಕಾಂತ್ (Super Star Rajanikanth) ಯಾರಿಗೆ ಗೊತ್ತಿಲ್ಲ ಹೇಳಿ? ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ರಜನಿಕಾಂತ್ ಅವರು ಹುಟ್ಟಿ ಬೆಳೆದದ್ದು ಕರ್ನಾಟಕದಲ್ಲೇ. ಆದರೆ ತಮಿಳು ಚಿತ್ರರಂಗ (Tamil Industry) ದಲ್ಲಿ ಬದುಕು ಕಟ್ಟಿಕೊಂಡ ಇವರಿಗೆ ಕನ್ನಡವೆಂದರೆ ಎಲ್ಲಿಲ್ಲದ ಪ್ರೀತಿ ಅಭಿಮಾನವಿದೆ.

ತಮ್ಮ ನಡೆ ನುಡಿ ಸ್ಟೈಲ್ ಮೂಲಕವೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರು ಆಗಾಗ ಕರ್ನಾಟಕಕ್ಕೆ ಬಂದು ಹೋಗುವುದಿದೆ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ (Bus Conductor) ಆಗಿ ಕೆಲಸ ಮಾಡುತ್ತಿದ್ದ ರಜನಿಕಾಂತ್ ಅವರು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟದ್ದೇ ಅಚ್ಚರಿವಿಚಾರವಾಗಿದೆ. ಪ್ರಾರಂಭದಲ್ಲಿ ರಜನಿಕಾಂತ್ ಅವರು ಖಳನಾಯಕನಾಗಿ ನಟಿಸುತ್ತಿದ್ದರು.

ಅವಕಾಶಗಳನ್ನು ಗಿಟ್ಟಿಸಿಕೊಂಡು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದರಾದರೂ ಇಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡುತ್ತಾರೆ ಎಂದು ಯಾರು ಕೂಡ ಅಂದುಕೊಂಡಿರಲಿಲ್ಲ. ನಿರ್ದೇಶಕ ಭಾಸ್ಕರ್ (Bhaskar) ನಿರ್ದೇಶನದ ಭೈರವಿ (Bhairavi) ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದಾದ ಬಳಿಕ ರಜನಿಕಾಂತ್ ಅವರು ಸಿನಿಮಾರಂಗದಲ್ಲಿ ತಮ್ಮದೇ ರೀತಿಯಲ್ಲಿ ಛಾಪು ಮೂಡಿಸಿದರು. ಸದ್ಯಕ್ಕೆ ಈ ವಯಸ್ಸಿನಲ್ಲಿಯೂ ಯಾವ ಯುವ ನಟರಿಗೂ ಕಡಿಮೆಯಿಲ್ಲ ಎನ್ನುವಂತೆ ನಟಿಸುತ್ತಿದ್ದಾರೆ.

ಅದಲ್ಲದೇ ಹಿರಿಯ ನಟ ರಜನಿಕಾಂತ್ ಅವರನ್ನು ಸರಿಯಾಗಿ ಗಮನಿಸಿದರೆ ಸಿನಿಮಾಗಳಲ್ಲಿ ಅಥವಾ ನಿಜ ಜೀವನದಲ್ಲಿಯೂ ತಮ್ಮ ಹೆಬ್ಬೆರಳು ಮತ್ತು ಮೊದಲ ಬೆರಳುಗಳನ್ನು ಒತ್ತಿ ಹಿಡಿದುಕೊಂಡಿರುತ್ತಾರೆ. ಹಿರಿಯ ನಟ ಹೀಗೆ ಕೈ ಬೆರಳನ್ನು ಹಿಡಿಯಲು ಕಾರಣವೇನು ಎನ್ನುವ ಬಗ್ಗೆ ಸಣ್ಣ ಪ್ರಶ್ನೆಯೊಂದು ತಲೆಯಲ್ಲಿ ಬರಬಹುದು. ಯೋಗ ತಜ್ಞರ ಪ್ರಕಾರವಾಗಿ , ರಜನಿಕಾಂತ್ ಅನುಸರಿಸುವ ಕೈ ಮುದ್ರೆಯನ್ನು ಚಿನ್ ಮುದ್ರೆಯಂತೆ. ಈ ರೀತಿ ಮುದ್ರೆಯನ್ನು ಮಾಡುವುದರಿಂದ ಮೆದುಳಿನ ನರಗಳು ಉತ್ತಮವಾಗಿ ಕೆಲಸ ಮಾಡುತ್ತವೆಯಂತೆ.

ಇದರಿಂದ ನೆನಪಿನ ಶಕ್ತಿ ಹೆಚ್ಚುವುದರ ಜೊತೆಗೆ ಒತ್ತಡವನ್ನು ಕಡಿಮೆಯಾಗುತ್ತದೆ ಎನ್ನಲಾಗಿದೆ. ಈ ಮುದ್ರೆಯೂ ಕೋಪ, ನಿದ್ರಾಹೀನತೆ ಮತ್ತು ತಲೆನೋವನ್ನು ನಿವಾರಿಸಿ ಮನಸ್ಸನ್ನು ಶಾಂತವಾಗಿ ಇಟ್ಟಿರುತ್ತದೆ ಎನ್ನಲಾಗಿದೆ. ಹಿರಿಯ ನಟ ರಜನಿಕಾಂತ್ ಅವರ ಈ ಸಣ್ಣ ಅಭ್ಯಾಸವು ಎಷ್ಟೊಂದು ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ನಿಮಗೆ ಈಗ ತಿಳಿದಿರಬಹುದು.

Leave a Reply

Your email address will not be published. Required fields are marked *