ಸಮಾಜವು ಕೆಟ್ಟೋಗಿದೆ, ಸಂಬಂಧಗಳು ದಿನ ಕಳೆದಂತೆ ಮೌಲ್ಯ ಕಳೆದುಕೊಳ್ಳುತ್ತಿದೆ. ತಾಯಿಯೂ ಯಾವತ್ತಿಗೂ ಮಗಳ ಶ್ರೇಯಸ್ಸನ್ನೆ ಬಯಸುತ್ತಾಳೆ. ಆದರೆ ಈ ಘಟನೆಯನ್ನು ನೋಡಿದರೆ ಇವಳೆಂತಹ ತಾಯಿ ಎಂದೇನಿಸದೇ ಇರದು. ಈ ಹಿಂದೆಯಷ್ಟೇ ಖಮ್ಮಂ ಜಿಲ್ಲೆಯ ಬೋನಕಲ್ಲುವಿನಲ್ಲಿ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿತ್ತು.
ತನ್ನ ಚಿಕ್ಕಪ್ಪನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೂ, ಈ ವಿಚಾರವು ಮಗಳಿಗೆ ಗೊತ್ತಾಗಿದೆ ಎಂದು ಆಕೆಯ ಜೀವವನ್ನು ತೆಗೆದಿದ್ದಳು. ಈ ಕೊ-ಲೆಯ ನಂತರ, ಮಗಳನ್ನು ಪಿಟ್ಸ್‌ನಿಂದ ಮೃತ ಪಟ್ಟಿದ್ದಾಳೆಂದು ಬಿಂಬಿಸಲಾಗಿತ್ತು. ಆದರೆ ಕೊನೆಗೆ ಮ-ರಣೋತ್ತರ ಪರೀಕ್ಷೆ ವರದಿಯಲ್ಲಿ ಅಸಲಿ ವಿಷಯ ಹೊರಬೀಳುತ್ತಿದ್ದಂತೆ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದರು.
ಬೋನಕಲ್ಲು ಮಂಡಲದ ಸುನೀತಾ ಎಂಬ ಮಹಿಳೆ ತನ್ನ ಪತಿ ಮತ್ತು 12 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. ಸುನಿತಾ ತನ್ನ ಚಿಕ್ಕಪ್ಪ ನರಸಿಂಹ ರಾವ್ ಜೊತೆ ಹಲವು ವರ್ಷಗಳಿಂದ ವಿವಾಹೇತರ ಸಂಬಂಧ ಹೊಂದಿದ್ದಳು. ಇತ್ತೀಚೆಗಷ್ಟೇ ಇಬ್ಬರೂ ಜೊತೆಯಾಗಿ ಕಾಲ ಕಳೆಯುತ್ತಿರುವುದನ್ನು ಸುನೀತಾ ಮಗಳು ಗಮನಿಸಿದ್ದಳು. ಇದರಿಂದ ನರಸಿಂಹರಾವ್ ಮತ್ತು ಸುನೀತಾ ಹೆದರಿದ್ದು, ಈ ವಿಚಾರವು ಎಲ್ಲರಿಗೂ ಗೊತ್ತಾದರೆ ಎನ್ನುವ ಆತಂಕಾವು ಇವರಿಬ್ಬರಿಗಿತ್ತು.
ಕೊನೆಗೆ ಮಗಳೇ ಇಲ್ಲವಾದರೆ ಈ ವಿಚಾರವು ಯಾರಿಗೂ ತಿಳಿಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. 2022 ರ ಫೆಬ್ರವರಿ 9ರಂದು ಬಾಲಕಿಯ ಕಾಲು ಹಾಗೂ ಕೈಗಳನ್ನು ಕಟ್ಟಿ ಕತ್ತು ಹಿ-ಸುಕಿ ಕೊ-ಲೆ ಮಾಡಿದ್ದರು. ಆದಾದ ಬಳಿಕ ಬಾಲಕಿಗೆ ಫಿಟ್ಸ್ ಇದೆ ಎಂದು ಹೇಳಿ ಖಮ್ಮಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಗಳು ಅದಾಗಲೇ ಮೃ-ತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದರು.
ಈ ವೇಳೆ ಮೃ-ತದೇಹವನ್ನು ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ವೈದ್ಯರು ಹೇಳಿದಾಗ ನರಸಿಂಹರಾವ್ ಮತ್ತು ಸುನೀತಾ ಒಪ್ಪಲಿಲ್ಲ. ಮಗುವಿನ ಮ-ರಣೋತ್ತರ ಪರೀಕ್ಷೆಯನ್ನು ತಡೆದುಕೊಳ್ಳಲು ಸಾಧ್ಯವಾಗಲ್ಲ ಎಂದು ಮೊಸಳೆ ಕಣ್ಣೀರು ಹಾಕಿದ್ದರು. ಆದರೆ ವೈದ್ಯರು ಮ-ರಣೋತ್ತರ ಪರೀಕ್ಷೆ ನಡೆಸಿದಾಗ ಬಾಲಕಿಯನ್ನು ಕತ್ತು ಹಿ-ಸುಕಿ ಕೊ-ಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಅಷ್ಟೇ ಅಲ್ಲದೇ ಸುನೀತಾ ಜತೆ ವಿವಾಹೇತರ ಸಂಬಂಧ ಹೊಂದಿದ್ದ ಯುವಕನೇ ಕೊ-ಲೆ ಮಾಡಿದ್ದಾನೆ ಎಂದು ನರಸಿಂಹರಾವ್ ಮತ್ತೊಂದು ಕಥೆ ಬಿಚ್ಚಿಟ್ಟರು. ಆದರೆ ಪೊಲೀಸ್ ತನಿಖೆಯ ವೇಳೆ ಸುನೀತಾ ಮತ್ತು ನರಸಿಂಹರಾವ್ ತಪ್ಪೊಪ್ಪಿಕೊಳ್ಳಬೇಕಾಯಿತು. ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು..ಆದಾದ ಬಳಿಕ ಈ ಪ್ರಕರಣದ ವಿಚಾರಣೆಯೂ ನಡೆಯುತ್ತಿತ್ತು.